ದೆಹಲಿಗೆ ಪಲ್ಸರ್ 200ಎನ್ಎಸ್ ಆಗಮನ, ದರ 85 ಸಾವಿರ

ಬಜಾಜ್ ಆಟೋ ಕಂಪನಿಯು ನೂತನ ಪಲ್ಸರ್ 200ಎನ್ಎಸ್ ಬೈಕಿನ ಮಾರಾಟವನ್ನು ದೆಹಲಿಯಲ್ಲಿ ಆರಂಭಿಸಿದೆ. ಸುಮಾರು 85 ಸಾವಿರ ರುಪಾಯಿ ಎಕ್ಸ್ ಶೋರೂಂದಲ್ಲಿ ಮತ್ತು ಸುಮಾರು 94,300 ಆನ್ ರೋಡ್ ದರದಲ್ಲಿ ನೂತನ ಪಲ್ಸರ್ ಬೈಕನ್ನು ಖರೀದಿಸಬಹುದಾಗಿದೆ.

ಕಂಪನಿಯು ಮೊದಲು ಪುಣೆಯಲ್ಲಿ ನೂತನ ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಆರಂಭಿಸಿತ್ತು. ಕಂಪನಿಯು ಉತ್ತರ ಭಾರತಕ್ಕೆ ಪಲ್ಸರ್ ಪರಿಚಯಿಸುವ ಮೊದಲ ಹೆಜ್ಜೆಯಾಗಿ ದೆಹಲಿಯಲ್ಲಿ ಮಾರಾಟ ಆರಂಭಿಸಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ನೂತನ ಪಲ್ಸರ್ ಆಗಮಿಸಲಿದೆ.

ದೆಹಲಿಯಲ್ಲಿರುವ ಎಲ್ಲಾ ಬಜಾಜ್ ಶೋರೂಂಗಳಲ್ಲೂ ನೂತನ ಪಲ್ಸರ್ ಬುಕ್ಕಿಂಗ್ ಮಾಡಲು ಅವಕಾಶವಿದೆ. ಗ್ರಾಹಕರಿಗೆ ಮುಂದಿನ ಕೆಲವೇ ದಿನಗಳಲ್ಲಿ ಈ ಬೈಕನ್ನು ಪೂರೈಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಬಹುನಿರೀಕ್ಷಿತ ಬಜಾಜ್ ಪಲ್ಸರ್ ಹಲವು ಅಡ್ವಾನ್ಸಡ್ ತಂತ್ರಜ್ಞಾನದೊಂದಿಗೆ ಆಗಮಿಸಿದೆ.

ಬಜಾಜ್ ಪಲ್ಸರ್ 200ಎನ್ಎಸ್ ಬೈಕಿನಲ್ಲಿ ಲಕ್ವಿಡ್ ಕೂಲಿಂಗ್, ನಾಲ್ಕು ಕವಾಟದ ಹೆಡ್, ಟ್ರಿಪಲ್ ಸ್ಪಾರ್ಕ್ ಪ್ಲಗ್, ಆರು ಸ್ಪೀಡಿನ ಗೇರ್ ಬಾಕ್ಸ್ ಮತ್ತು ಮೊನೊಷಾಕ್ ಸಸ್ಪೆನ್ಷನ್ ಸಿಸ್ಟಮ್ ಇತ್ಯಾದಿ ವಿಶೇಷತೆಗಳಿವೆ. ಇದರ ವಿನ್ಯಾಸವೂ ಅತ್ಯಾಕರ್ಷಕವಾಗಿದ್ದು, ಪಲ್ಸರ್ ಪ್ರಿಯರನ್ನು ಮೋಡಿ ಮಾಡುವಂತ್ತಿದೆ.

ನೂತನ ಪಲ್ಸರ್ 200ಎನ್ಎಸ್ ಅತ್ಯುತ್ತಮ ಕಾರ್ಯಕ್ಷಮತೆ, ದಕ್ಷತೆ ನೀಡುವುದಾಗಿ ಕಂಪನಿ ಹೇಳಿದೆ. ಇದು ನೂತನ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನದ ಡಿಟಿಎಸ್-ಐ ಎಂಜಿನ್ ಹೊಂದಿದೆ. 199.5ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 23.17 ಅಶ್ವಶಕ್ತಿ ಮತ್ತು ಗರಿಷ್ಠ 19.3 ಟಾರ್ಕ್ ಪವರ್ ನೀಡುತ್ತದೆ. ಇದೇ ಎಂಜಿನ್ ಬಜಾಜ್ ಇತ್ತೀಚೆಗೆ ಪರಿಚಯಿಸಿದ ಕೆಟಿಎಂ ಡ್ಯೂಕ್ 200 ಬೈಕಿನಲ್ಲೂ ಇದೆ.

ಹೊಸ ಬಜಾಜ್ ಪಲ್ಸರಿನಲ್ಲಿ ಕೇವಲ 10 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದಾಗಿದೆ. ಇದರಲ್ಲಿ ಗಂಟೆಗೆ ಗರಿಷ್ಠ 136 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಹೀರೊ ಕರಿಷ್ಮಾ ಝಡ್ಎಂಆರ್ ಮತ್ತು ಕೆಟಿಎಂ ಡ್ಯೂಕ್ 200 ಬೈಕುಗಳಿಗಿಂತ ಇದರ ದರವೂ 10-15 ಸಾವಿರ ರುಪಾಯಿ ಕಡಿಮೆಯಿದೆ.

More from DriveSpark

Article Published On: Friday, June 29, 2012, 10:48 [IST]
English summary
According to the scheduled manner, Bajaj Auto has opened sales of its flagship Pulsar 200 NS in New Delhi. The Bajaj Pulsar 200 NS is available for bookings at Rs 85,000 (ex-showroom price) which will be transformed to an on-road price of Rs 94,300.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+