ಬಜಾಜ್ ಪಲ್ಸರ್ ಬೈಕ್ ಮಾಲೀಕರಿಗೊಂದು ಸೂಚನೆ

ಪಲ್ಸರ್ 220 ಡಿಟಿಎಸ್ಐ ಬೈಕ್ ಹೊಂದಿರುವರು ಹತ್ತಿರದ ಶೋರೂಂ ಅಥವಾ ಡೀಲರುಗಳನ್ನು ಸಂಪರ್ಕಿಸಿ ತಮ್ಮ ಬೈಕಿನ ಸ್ಟಾರ್ಟರ್ ಸಮಸ್ಯೆಯನ್ನು 20 ನಿಮಿಷದಲ್ಲಿ ಸರಿಪಡಿಸಿಕೊಳ್ಳಬಹುದು. ಈ ಕುರಿತು ಕಂಪನಿಯು ಈಗಾಗಲೇ ಗ್ರಾಹಕರಿಗೆ ಎಸ್ಎಂಎಸ್ ಕಳುಹಿಸಲು ಆರಂಭಿಸಿದೆ.
ನೂತನ ಬಜಾಜ್ ಪಲ್ಸರ್ 220 ಡಿಟಿಎಸ್ಐ ಬೈಕ್ ನಲ್ಲಿ ಕೇವಲ ಎಲೆಕ್ಟ್ರಿಕ್ ಸ್ಟಾರ್ಟರ್ ಇದೆ. ಇದರಲ್ಲಿ ಕಿಕ್ ಸ್ಟಾರ್ಟರ್ ಇಲ್ಲ. ಹೀಗಾಗಿ ಎಲೆಕ್ಟ್ರಿಕ್ ಸ್ಟಾರ್ಟರ್ ಎಲ್ಲದರೂ ನಡುರಸ್ತೆಯಲ್ಲಿ ಕೈಕೊಟ್ಟರೆ ಕಷ್ಟ. ನಿಮ್ಮಲ್ಲಿರುವ ಪಲ್ಸರ್ ಬೈಕಿನಲ್ಲಿ ಸಮಸ್ಯೆಯಿದೆಯೇ ಎಂದು ತಿಳಿಯಲು ಸರ್ವಿಸ್ ಸ್ಟೇಷನ್ ಅಥವಾ ಶೋರೂಂಗಳಲ್ಲಿ ಬೈಕ್ ಚಾಸೀಸ್ ನಂಬರ್ ಕೊಡಬೇಕಾದೀತು. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








