ಬಜಾಜ್ ಪಲ್ಸರ್ 200ಎನ್ಎಸ್: ಬುಕ್ಕಿಂಗ್ ಶುರು

Bajaj Pulsar 200NS
ಬಜಾಜ್ ಕಂಪನಿಯ ಬಹುನಿರೀಕ್ಷಿತ ಪಲ್ಸರ್ 200ಎನ್ಎಸ್ ಶೀಘ್ರದಲ್ಲಿ ಆಗಮಿಸಲಿದೆ. ಆದರೆ ಬೈಕ್ ರಸ್ತೆಗಿಳಿಯುವ ಮುನ್ನವೇ ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಶುರುವಾಗಿದೆ ಎನ್ನುವ ಮಾಹಿತಿ ನಮಗೆ ಸಿಕ್ಕಿದೆ. ವಿಶೇಷವೆಂದರೆ ಕಂಪನಿ ಇನ್ನೂ ಅಧಿಕೃತವಾಗಿ ಬುಕ್ಕಿಂಗ್ ಪ್ರಕಟಿಸಿಲ್ಲ.

ಕಂಪನಿ ಅಧಿಕೃತವಾಗಿ ಪ್ರಕಟಿಸದೆ ಇದ್ದರೂ ಕೆಲವು ಗ್ರಾಹಕರು ಈಗಾಗಲೇ ಈ ಬೈಕಿಗಾಗಿ ಮುಂಗಡ ನೀಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ನಾವು ಸಂಪರ್ಕಿಸಿದ ಐದು ಡೀಲರುಗಳಲ್ಲಿ ಮೂವರು ಬುಕ್ಕಿಂಗ್ ಲಭ್ಯವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ನಿಮಗೆ ಒಂದು ಶೋರೂಂನಲ್ಲಿ ಇಲ್ಲವೆಂದರೂ ಮತ್ತೊಂದು ಶೋರೂಂನಲ್ಲಿ ಬುಕ್ಕಿಂಗ್ ಮಾಡುವ ಅವಕಾಶ ದೊರಕಬಹುದು.

ಬುಕ್ಕಿಂಗ್ ಮುಂಗಡ ಪಾವತಿ ದರದ ಕುರಿತು ಡೀಲರುಗಳಿಂದ ಡೀಲರುಗಳಿಗೆ ವ್ಯತ್ಯಾಸವಿದೆ. ಅಂದರೆ 10 ಸಾವಿರ ರು.ನಿಂದ 20 ಸಾವಿರ ರು.ವರೆಗೆ ಬುಕ್ಕಿಂಗ್ ಶುಲ್ಕ ವಿಧಿಸುತ್ತಾರೆ.

"ಈ ಬೈಕಿಗೆ ಹೆಚ್ಚು ಬೇಡಿಕೆಯಿರುವ ಹಿನ್ನಲೆಯಲ್ಲಿ ಬುಕ್ಕಿಂಗ್ ಆರಂಭಿಸಿದ್ದೇವೆ" ಎಂದು ಹೆಸರು ಮತ್ತು ಶೋರೂಂ ಮಾಹಿತಿ ಬಹಿರಂಗಪಡಿಸಲು ಇಚ್ಚಿಸದ ಡೀಲರೊಬ್ಬರು ಹೇಳುತ್ತಾರೆ. ಪಲ್ಸರ್ 180 ಸಿಸಿ ಬೈಕ್ ಖರೀದಿಗಿಂತ ಹೆಚ್ಚಿನ ಜನರು 220 ಸಿಸಿಯ ನೂತನ ಬೈಕಿನ ಕುರಿತು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಲ್ಸರ್ 200ಎನ್ಎಸ್ ಸ್ಪೋರ್ಟ್ಸ್ ಬೈಕನ್ನು ಬಜಾಜ್ ಮತ್ತು ಆಸ್ಟ್ರಿಯಾದ ಕೆಟಿಎಂ ಕಂಪನಿಯು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇತ್ತೀಚೆಗೆ ರಸ್ತೆಗಿಳಿದ ಕೆಟಿಎಂ ಡ್ಯೂಕ್ 200 ಬೈಕಿನ ಕೆಲವು ಬಿಡಿಭಾಗಗಳನ್ನು ನೂತನ 200ಎನ್ಎಸ್ ಪಲ್ಸರ್ ಬೈಕ್ ಹೊಂದಿರಲಿದೆ.

ಪಲ್ಸರ್ 200ಎನ್ಎಸ್ ಬೈಕ್ ಖರೀದಿಸಲು ನೀವು ಬಯಸಿದ್ದರೆ ಈಗಲೇ ಹತ್ತಿರದ ಬಜಾಜ್ ಶೋರೂಂಗೆ ಪ್ರವೇಶಿಸುವುದು ಒಳಿತು. ಅಧಿಕೃತವಾಗಿ ಬುಕ್ಕಿಂಗ್ ಆರಂಭವಾದ ನಂತರದ ನೂಕುನುಗ್ಗಲಿನಲ್ಲಿ ನಿಮಗೆ ಈ ಬೈಕ್ ಸಿಗೋದು ಕೊಂಚ ತಡವಾದೀತು. ಅಂದಹಾಗೆ ಇದರ ದರ ಸುಮಾರು 1 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

More from DriveSpark

Article Published On: Thursday, April 5, 2012, 16:58 [IST]
English summary
The Bajaj Pulsar 200 NS is the latest hot rod from the Indian company. The new sports bike unveiled in January is expected to be launched in a few day but booking have reportedly been opened in some Bajaj showrooms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+