ಚಾರಣ ಪ್ರಿಯರಿಗಾಗಿ ಬ್ಯಾಗ್ ರೀತಿಯಲ್ಲಿ ಮಡಚುವ ಸೈಕಲ್

ನೀವು ಚಾರಣಕ್ಕೆ ತೆರಳುವುದನ್ನು ಇಷ್ಟಪಡುತ್ತೀರಾ? ಬೆಟ್ಟ ಗುಡ್ಡಗಳಲ್ಲಿ ಸಾಹಸಿಕ ಪ್ರದರ್ಶನ ನೀಡುವುದು ನಿಮ್ಮ ಹವ್ಯಾಸವೇ.? ಹಾಗಿದ್ದರೆ ಅಂತಹ ಪ್ರದೇಶಕ್ಕೆ ತೆರಳುವಾಗ ಬೈಕ್ ಅಥವಾ ಸೈಕಲ್‌ಗಳನ್ನು ಹೊತ್ತುಕೊಂಡು ಹೋಗಲು ಹೇಗೆ ಸಾಧ್ಯವೆಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುಬಹುದು.

ಇವೆಲ್ಲಕ್ಕೂ ಒಂದೇ ಉತ್ತರ ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್. ಬ್ಯಾಗ್ ತರಹನೇ ಮಡಚಬಹುದಾದ ಈ ಅತ್ಯಾಧುನಿಕ ಸೈಕಲ್ ಅನ್ನು ಬೆಟ್ಟ ಗುಡ್ಡಗಳಲ್ಲಿ ಚಾರಣ ಸಂದರ್ಭದಲ್ಲಿ ಬಳಸಬಹುದಾಗಿದ್ದು, ಅಗತ್ಯ ಸಾಮಾಗ್ರಿಗಳನ್ನು ಸಹ ತುಂಬಿಕೊಳ್ಳಬಹುದಾಗಿದೆ.

ಹಾಲೆಂಡ್‌ನ ಕೊಗಾ ಕಂಪನಿಯು ಈ ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಸಿಕಲನ್ನು ಅಭಿವೃದ್ಧಿಪಡಿಸಿದೆ. ಇದನ್ನು ಫೋಲ್ಡ್ ಮಾಡಿ ಹೆಗಲ ಮೇಲೆ ಹೊತ್ತೊಯ್ಯುವುದರಿಂದ ಅತಿ ಎತ್ತರದ ಬೆಟ್ಟ ಗುಡ್ಡಗಳಿಗೆ ಏರಬಹುದಾಗಿದೆ. ಪ್ರಮುಖವಾಗಿ ಮೌಂಟೆನ್ ಸಾಹಸಿಗಳನ್ನು ಗಮನವಿರಿಸಿ ನಿರ್ಮಿಸಿರುವ ಈ ಬೈಕ್‌ನ ಹೆಚ್ಚುವರಿ ಮಾಹಿತಿಗಳನ್ನು ಫೋಟೋ ಫೀಚರ್ ಕೊಡಲಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಪರ್ವತರೋಹಿಗಳ ಸಮಸ್ಯೆಗಳನ್ನು ಪ್ರಮುಖವಾಗಿಯೂ ಗಮನಿಸಿ ಇಂತಹದೊಂದು ಬೈಕ್ ನಿರ್ಮಾಣ ಮಾಡಲಾಗಿದೆ. ಎತ್ತರದ ಬೆಟ್ಟ ಗುಡ್ಡಗಳಿಗೆ ಹತ್ತುವ ಸಂದರ್ಭದಲ್ಲಿ ಸುಲಭವಾಗಿ ಮಡಚಿಕೊಂಡು ಏರಬಹುದಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್ ನೋಡಲು ಸಾಮಾನ್ಯ ಸೈಕಲ್‌ಗಳಂತೆ ಇದ್ದರೂ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ತಯಾರಿಸಲಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್ ಅನ್ನು ಒಂದು ಸಾಮಾನ್ಯ ಲಗ್ಗೇಜ್ ಬ್ಯಾಗ್ ರೀತಿಯಲ್ಲಿಯೇ ಹೆಗಲ ಮೇಲೆ ಹೊತ್ತೊಯ್ಯಬಹುದಾಗಿದೆ. ಆ ಬಳಿಕ ನೆಲದ ಮೇಲಿರಿಸಿ ಕೆಲವು ಭಾಗಗಳನ್ನು ಜೋಡಿಸಿದರಾಯಿತು ನಿಮ್ಮ ಆಕರ್ಷಕ ಬೈಕ್ ರೆಡಿ..!

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಕೆಲವೇ ಕೆಲವೇ ನಿಮಿಷಗಳಲ್ಲಿ ಬ್ಯಾಗ್ ರೂಪದಲ್ಲಿರುವ ಸಾಧನವನ್ನು ಸೈಕಲ್ ಆಗಿ ಪರಿವರ್ತಿಸಬಹುದಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಅಷ್ಟೇ ಅಲ್ಲದೆ ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್‌ನಲ್ಲಿ ಒಂದು ಹೆಚ್ಚುವರಿ ಬ್ಯಾಗ್ ಲಗತ್ತಿಸಲಾಗಿದ್ದು, ಇದರಲ್ಲಿ ನೀವು ಅಗತ್ಯದ ವಸ್ತುಗಳನ್ನು ಇಡಬಹುದಾಗಿದೆ. ಬೆಟ್ಟ ಏರುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಏರ್ಪಟ್ಟಲ್ಲಿ ಫಸ್ಟ್ ಏಡ್ ಬಾಕ್ಸ್ ಜತೆ ಉಪಹಾರ ಹಾಗೂ ನೀರಿನ ಬ್ಯಾಟಲಿ ಕೂಡಾ ಜೋಡಿಸಿಡುವ ಅವಕಾಶವಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಈ ರೀತಿಯಲ್ಲಿ ಒಂದು ಬ್ಯಾಗ್ ಅನ್ನು ನಿಮಗೆ ಆಕರ್ಷಕ ಬೈಕ್ ಆಗಿ ಪರಿವರ್ತಿಸಬಹುದು. ನಿಮ್ಮ ಮಾಹಿತಿಗಾಗಿ, ಭಾರತವನ್ನು ಹೊರತುಪಡಿಸಿ ವಿದೇಶಗಳಲ್ಲಿ ಸೈಕಲ್‌ಗೂ ಬೈಕ್ ಎಂದು ಹೆಸರಿಸುತ್ತಾರೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಪ್ರಮುಖವಾಗಿಯೂ ಚಾರಣ ಪ್ರಿಯರನ್ನು ಗಮನಿಸಿ ಬೈಕ್ ಭಾರವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದರಿಂದ ಬೆಟ್ಟ ಏರುವ ಸಂದರ್ಭದಲ್ಲಿ ಹೆಚ್ಚುವರಿ ಭಾರದ ಅನುಭವವಾಗದು.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಆದರೆ ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್‌ಗಳಲ್ಲಿ ಯಾವುದೇ ಪೆಡೆಲ್ ಅಥವಾ ಸೀಟ್‌ಗಳ ಪ್ರಯೋಗ ಮಾಡಲಾಗಿಲ್ಲ. ಅಂದ್ರೆ ಪರ್ವತದಿಂದ ಕೆಳಗಿಳಿಯುವ ಇಳಿಜಾರಿನ ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಪರ್ವತಕ್ಕೆ ಏರಿದ ಬಳಿಕ ಯಾವುದೇ ರೀತಿಯ ಮಾರ್ಗಗಳಿದ್ದರೂ ಈ ಬೈಕ್ ಸುಲಿಲಿತವಾಗಿ ಚಲಿಸಲಿದೆ. ಆದರೆ ಸವಾರಿ ಮಾಡುವವರು ಪರಿಣಿತರಾಗಿರಬೇಕಾಗಿರಬೇಕು.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಲೈಟ್ ವೇಟ್ ಆಗಿದ್ದರಿಂದ ಸಾಹಸಿ ಪ್ರಿಯರನ್ನು ಹೆಚ್ಚು ಆಕರ್ಷಿಸಲಿದೆಯೆಂಬ ಭರವಸೆಯನ್ನು ಕಂಪನಿ ಹೊಂದಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಚಾಸೀಸ್‌ನಲ್ಲಿ ಗಟ್ಟಿಯಾದ ಮೆಟಿರಿಯಲ್ ಆಳವಡಿಸಲಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಅಲ್ಲದೆ ಪರ್ವತದಿಂದ ಕೆಳಗಿಳಿಯುವಾಗ ಇಳಿಜಾರಿನಲ್ಲಿ ಉತ್ತಮ ದಕ್ಷತೆಯ ಬ್ರೇಕ್ ಸಿಗುವುದಕ್ಕಾಗಿ ಆಕರ್ಷಕ ಡಿಸ್ಕ್ ಬ್ರೇಕ್ ಬಳಸಲಾಗಿದೆ. ಇದರ ನೆರವಿನಿಂದ ಚಾಲಕ ಸತುಂಲಿತವಾಗಿ ಬ್ರೇಕ್ ಪ್ರಯೋಗ ಮಾಡಬಹುದಾಗಿದೆ.

ಚಾರಣ ಪ್ರಿಯರಿಗೆ ಮಡಚುವ ಸೈಕಲ್

ಇಷ್ಟೆಲ್ಲ ಆದರೂ ಸವಾರಿ ಮಾಡುವವರು ವಿಶೇಷ ಪರಣಿತಿ ಹೊಂದಿರಬೇಕಾಗಿರುವುದು ಅತಿ ಅಗತ್ಯವಿದೆ. ಸಾಮಾನ್ಯವಾಗಿ ಎಲ್ಲರು ಸುಲಲಿತವಾಗಿ ಸೈಕಲ್ ಚಲಾಯಿಸಬಲ್ಲರು. ಆದರೆ ಗುಡ್ಡಗಾಡು ಪ್ರದೇಶಗಲ್ಲಿ ಇದರ ಪ್ರಯೋಗ ನಡೆಯಲಿರುವುದರಿಂದ ಹೆಚ್ಚಿನ ಅಭ್ಯಾಸ ಅಗತ್ಯ.

ದರ ಮಾಹಿತಿ

ದರ ಮಾಹಿತಿ

ಹಾಗಿದ್ದರೂ ಬರ್ಗ್‌ಮೊಂಚ್ ಬ್ಯಾಕ್‌ಪ್ಯಾಕ್ ಬೈಕ್ ದರ ಸ್ವಲ್ಪ ದುಬಾರಿಯಾಗಿದೆ. ಇದು ಒಂದು ಲಕ್ಷಕ್ಕೂ ಮೇಲ್ಪಟ್ಟಿದೆ.

More from DriveSpark

Article Published On: Thursday, November 22, 2012, 13:02 [IST]
English summary
The bergmoench backpack bike is a unique bicycle designed by Koga. mountain climbers can carry the bike in a backpack and use it to get down mountains and hills.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+