ಯಮಹಾ ಎಫ್‌ಝಡ್-ಎಸ್: ನನಸಾದ ಕಮಲೇಶ್ ಕನಸು
ಹಾಯ್ ಸ್ನೇಹಿತರೇ, ನಾನು ಕಮಲೇಶ್ ಜೈನ್. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗ. ಸ್ವಯಂ ದುಡಿಮೆಯಿಂದ ಬೈಕೊಂದನ್ನು ಖರೀದಿಸುವ ನನ್ನ ಕನಸು ನನಸಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಅಂದರೆ ಮಾರ್ಚ್ ಒಂದರ ಶುಭಮಹೂರ್ತದಲ್ಲಿ ಯಮಹಾ ಕಂಪನಿಯ ಎಫ್‌ಝಡ್-ಎಸ್ ಬೈಕ್ ಖರೀದಿಸಿದ್ದೇನೆ. ಯೆಸ್, ಯಮಹಾ ಬೈಕ್ ಈಗ ನನ್ನ ಅಚ್ಚುಮೆಚ್ಚಿನ ಸ್ನೇಹಿತ.
ಎಲ್ಲರಂತೆ ನನಗೂ ಕೂಡ ಬೈಕ್ ಆಯ್ಕೆಯಲ್ಲಿ ಗೊಂದಲ ಕಾಡಿತ್ತು. ಪಲ್ಸರ್ 150 ಸಿಸಿ ಬೈಕ್ ಖರೀದಿಸುವ ಯೋಚನೆಯೂ ಒಮ್ಮೆ ಬಂದಿತ್ತು. ಫೈನಲಿ ಬಿಳಿ ಮತ್ತು ಕೆಂಪು ಬಣ್ಣ ಮಿಶ್ರಿತ ಯಮಹಾ ಎಫ್‌ಝಡ್-ಎಸ್ ಬೈಕ್ ಖರೀದಿಸಿಬಿಟ್ಟೆ. ಗಮನಸೆಳೆಯುವ ಈ ಬೈಕಿನ ಲುಕ್, ಹಿಂಭಾಗದ ವಿಶಾಲ ಟೈರುಗಳು, ಆಕರ್ಷಕ ಹೆಡ್‌ಲೈಟ್ಸ್ ಇತ್ಯಾದಿ ಪ್ರಮುಖ ಫೀಚರುಗಳು ನನ್ನ ಗಮನಸೆಳೆದಿದ್ದವು.
ಸ್ಪಿಡೊಮೀಟರ್, ಟೆಕ್ನೊಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಸೇರಿದಂತೆ ಈ ಬೈಕಿನ ಪ್ರತಿಯೊಂದು ಫೀಚರುಗಳು ನನಗೆ ಇಷ್ಟವಾಗಿವೆ. ನೋಡಲು ಚೆನ್ನಾಗಿರಬೇಕು ಮತ್ತು ಕಾರ್ಯಕ್ಷಮತೆ ಅನನ್ಯವಾಗಿರಬೇಕು ಎಂದು ಬಯಸುವ ಬೈಕ್ ಪ್ರೇಮಿಗಳಿಗೆ ಈ ಬೈಕ್ ಸೂಕ್ತ ಆಯ್ಕೆ. ಬರೀ ಮೈಲೇಜ್ ನೋಡಿ ಬೈಕ್ ಖರೀದಿಸುವರಿಗೆ ಈ ಬೈಕ್ ಸೂಕ್ತವಲ್ಲ. ಯಾಕೆಂದರೆ ಈ ಬೈಕ್‌ನಲ್ಲಿ ನನಗೆ ಸಿಕ್ಕ ಮೈಲೇಜ್ ಲೀಟರಿಗೆ 35 ಕಿ.ಮೀ. ಮಾತ್ರ.
ರಸ್ತೆಯಲ್ಲಿ ಈ ಬೈಕ್ ಮೇಲೆ ಸವಾರಿ ಮಾಡುವ ಮಜವೇ ಬೇರೆ. ಒಮ್ಮೆಗೆ ಬ್ರೇಕ್ ಹಾಕುವಾಗ ಕೊಂಚ ಎಚ್ಚರಿಕೆ ವಹಿಸಬೇಕು. ಅಂದಹಾಗೆ ಬೆಂಗಳೂರು ವೀಲ್ಸ್ ಶೋರೂಂನಿಂದ ಖರೀದಿಸಿದ ಈ ಬೈಕ್ ದರ 86 ಸಾವಿರ ರುಪಾಯಿ. ಬೈಕ್ ಕಾರ್ಯಕ್ಷಮತೆ ಮತ್ತು ಸೌಂದರ್ಯಕ್ಕೆ ಈ ದರ ದುಬಾರಿ ಎನಿಸುವುದಿಲ್ಲ.
ಈಗಷ್ಟೇ ಹೊಸ ಬೈಕ್ ಖರೀದಿಸಿದ್ದರಿಂದ ಮುಂದಿನ ಬೈಕ್ ಕುರಿತು ಇನ್ನೂ ಯೋಚಿಸಿಲ್ಲ. ಆದ್ರೂ ಮುಂದೊಂದು ದಿನ ಯಮಹಾ ಆರ್1 ಖರೀದಿಸಬಲ್ಲೆ ಎನ್ನುವ ಭರವಸೆ ನನಗಿದೆ. ನನ್ನ ಕನಸಿನ ಬೈಕ್ ಯಮಹಾ ಎಫ್‌ಝಡ್1. ಕಾರ್ಯಕ್ಷಮತೆ ಮತ್ತು ಸ್ಟೈಲ್ ಆಗಿರೋ ಬೈಕ್ ಬೇಕು ಎನ್ನುವರು ಈ ಬೈಕ್ ಖರೀದಿಸಬಹುದು. ಧನ್ಯವಾದಗಳು.
ನೀವು ಇತ್ತೀಚೆಗೆ ಹೊಸ ಬೈಕ್ ಕಾರು ಖರೀದಿಸಿದ್ರಾ? ಅಥವಾ ನಿಮ್ಮಲ್ಲೂ ಹಳೆಯ ಕಾರು ಬೈಕು ಇರಬಹುದಲ್ವಾ? ಅಥವಾ ಯಾವುದಾದ್ರೂ ವಾಹನ ಖರೀದಿಸೋ ಕನಸಲ್ಲಿದ್ದೀರಾ? ನಿಮ್ಮ ಕನಸಿನ ಕಾರು ಬೈಕು ಖರೀದಿಸಿದ ಅಥವಾ ಖರೀದಿಸಲಿರುವ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಖರೀದಿ ಅನುಭವ, ವಾಹನ ನೀಡೋ ಮೈಲೇಜ್, ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎಲ್ಲವನ್ನೂ ಕನ್ನಡ ಡ್ರೈವ್ ಸ್ಪಾರ್ಕ್ ನಲ್ಲಿ ಬಿಚ್ಚಿಡಿ. ಇದು ಇನ್ನು ಮುಂದೆ ವಾಹನ ಖರೀದಿಸುವರಿಗೆ ಮಾರ್ಗದರ್ಶನವಾಗಲಿ. ನಿಮ್ಮ ಲೇಖನ ಇಂಗ್ಲಿಷ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರಲಿದೆ. ಇನ್ಯಾಕೆ ತಡ.. ಈಗ್ಲೇ ಲೇಖನ ಕಳುಹಿಸಿ.
ನಮ್ಮ ಇಮೇಲ್ ವಿಳಾಸ: [email protected]


Click it and Unblock the Notifications









