ನಿರೀಕ್ಷಿಸಿ: ಬೈಸಿಕಲ್ ಸವಾರರ ತಲೆಗೂ ಏರ್‌ಬ್ಯಾಗ್
ಪ್ರತಿವರ್ಷ ಜಗತ್ತಿನಾದ್ಯಂತ ಸುಮಾರು 12 ಲಕ್ಷ ಜನರು ಬೈಸಿಕಲ್ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ಸುಮಾರು 5 ಕೋಟಿ ಜನರು ಸೈಕಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇಂತಹ ಅಪಘಾತಗಳಿಂದ ಸೈಕಲ್ ಸವಾರರನ್ನು ಪಾರು ಮಾಡುವುದು ಹೇಗೆ?
ಇಂತಹ ಪ್ರಶ್ನೆಯೊಂದಕ್ಕೆ ಉತ್ತರವನ್ನು ಸ್ವಿಡನ್ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು ನೀಡಿದ್ದಾರೆ. ಅವರಿಬ್ಬರು ಬೈಸಿಕಲ್ ಸುರಕ್ಷತಾ ಸಾಧನವೊಂದನ್ನು ಹೊರತಂದಿದ್ದಾರೆ. ಅದು ಬೈಸಿಕಲ್ ಏರ್ ಬ್ಯಾಗ್. ಕೊರಳು ಮತ್ತು ತಲೆಯನ್ನು ಆವರಿಸಿಕೊಳ್ಳುವ ಈ ಏರ್ ಬ್ಯಾಗ್ ಇದ್ದರೆ ಸುರಕ್ಷಿತವಾಗಿ ಸವಾರಿ ಮಾಡಬಹುದಂತೆ!
ಈ ಏರ್ ಬ್ಯಾಗ್ ಧರಿಸಿದ್ದಾಗ ಸೈಕಲಿನಿಂದ ಕೆಳಕ್ಕೆ ಬಿದ್ದರೆ ತಕ್ಷಣ ಕೊರಳಿನ ಸುತ್ತ ಇರುವ ಏರ್ ಬ್ತಾಗ್ ತಲೆಯ ಸುತ್ತ ಆವರಿಸಿ ರಕ್ಷಣೆ ನೀಡುತ್ತದೆ. ಇದರಲ್ಲಿ ಮೂರು ಸೆನ್ಸಾರ್ ಗಳಿವೆ. ಈ ಏರ್ ಬ್ಯಾಗ್ ಇದ್ದಾಗ ಸೈಕಲ್ ಅಪಘಾತವಾದರೆ ತಲೆ, ಕತ್ತಿಗೆ ಪೆಟ್ಟಾಗುವುದಿಲ್ಲ. ಸೇಫ್ ಆಗಿ ಚಲ್ ಮೇರಿ ಸೈಕಲ್ ಅನ್ನುತ್ತಾ ರೈಡ್ ಮಾಡಬಹುದು.
ಓದಿ: ಬೆಂಗಳೂರಿಗೆ ಬೈಸಿಕಲ್ ಸವಾರಿಯೇ ಸರಿ


Click it and Unblock the Notifications









