ಯಮಹಾ ರೇ ಸ್ಕೂಟರಿಗೆ ದೀಪಿಕಾ ಪಡುಕೋಣೆ ರಾಯಭಾರಿ

ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಬಹುನಿರೀಕ್ಷಿತ "ರೇ" ಎಂಬ ಆಟೋಮ್ಯಾಟಿಕ್ ಸ್ಕೂಟರ್ ಪರಿಚಯಿಸಲು ಯಮಹಾ ಇಂಡಿಯಾ ಯೋಜಿಸಿದೆ. ಇದು ಕಂಪನಿಯು ದೇಶದ ರಸ್ತೆಗೆ ಪರಿಚಯಿಸಲಿರುವ ಪ್ರಪ್ರಥಮ ಸ್ಕೂಟರ್ ಆಗಿದೆ. ಸದ್ಯ ಕಂಪನಿಯು ದೇಶದಲ್ಲಿ ಬೈಕುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ವಿಶೇಷವೆಂದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನೂತನ ಯಮಹಾ ರೇ ಸ್ಕೂಟರಿನ ಬ್ರಾಂಡ್ ರಾಯಭಾರಿಯಾಗಲಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಈ ಸ್ಕೂಟರಿನಲ್ಲಿ ಜಾನ್ ಅಬ್ರಾಹಂ ಪೋಸ್ ನೀಡಿದ್ದರು.

ಜಾನ್ ಅಬ್ರಾಹಂ ಸದೃಢ ದೇಹದ ಮುಂದೆ "ರೇ" ಸ್ಕೂಟರ್ ಪೇಲವವಾಗಿ ಕಾಣುತ್ತಿತ್ತು. ಆದರೆ ಇನ್ಮುಂದೆ ಆ ಸಮಸ್ಯೆಯಿಲ್ಲ. ಯಮಹಾ ರೇ ಸ್ಕೂಟರಿಗೆ ದೀಪಿಕಾ ರಾಯಭಾರಿಯಾಗಿರುವುದರಿಂದ ಸ್ಕೂಟರ್ ಕೂಡ ಸುಂದರವಾಗಿ ಕಾಣಬಹುದು.

ಸ್ಕೂಟರುಗಳಿಗೂ ಬಾಲಿವುಡ್, ಹಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ನಟನಟಿಯರಿಗೆ ನಂಟಿದೆ. ಅದರಲ್ಲೂ ಸ್ಕೂಟಿ ಅಥವಾ ಸ್ಕೂಟರ್ ಪ್ರಚಾರಕ್ಕೆ ಹೆಚ್ಚಾಗಿ ಚಂದದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ ಹೀರೊ ಮೊಟೊಕಾರ್ಪ್ ಪ್ಲೆಷರ್ ಸ್ಕೂಟರಿಗೆ ಪ್ರೀಯಾಂಕ ಚೋಪ್ರಾ ರಾಯಭಾರಿಯಾಗಿದ್ದಾರೆ. ಟಿವಿಎಸ್ ಸ್ಕೂಟಿ ಪೆಪ್ಟಿಗೆ ಅನುಷ್ಕಾ ಶರ್ಮಾ ಇದ್ದಾರೆ.

ಯಮಹಾ ರೇ 125 ಸಿಸಿಯ ನಾಲ್ಕು ಸ್ಟ್ರೋಕ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ನೂತನ ಯಮಹಾ ರೇ ಸೆಪ್ಟಂಬರ್ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ಇದರ ದರ ಹೋಂಡಾ ಡಿಯೊ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಮುಂಬರುವ ವರ್ಷಗಳಲ್ಲಿ ದೇಶದ ರಸ್ತೆಗೆ ಇನ್ನಷ್ಟು ಆಟೋಮ್ಯಾಟಿಕ್ ಗೇರ್ ಸ್ಕೂಟರುಗಳನ್ನು ಯಮಹಾ ಪರಿಚಯಿಸುವ ನಿರೀಕ್ಷೆಯಿದೆ. (ವಾಹನ ಲೋಕ)

More from DriveSpark

Article Published On: Monday, July 23, 2012, 14:06 [IST]
English summary
India Yamaha Motor today announced that it has signed up Bollywood diva Deepika Padukone as the face of Yamaha Scooters in India. This is the first time that the actress will endorse an automobile product and Yamaha is upbeat that her feminine yet sporty disposition will gel easily with the Indian target audience. While Deepika will endorse the scooter section of Yamaha, John Abraham will continue to be the brand ambassador of the company’s flagship bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+