ಯಮಹಾ ರೇ: ಪಡುಕೋಣೆ ನಟಿಸಿದ ಜಾಹೀರಾತು ನೋಡಿದ್ರ?

Written By:
ಟೆಲಿವಿಷನ್ ಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿರುವ ಯಮಹಾ ಸ್ಕೂಟರ್ ಜಾಹೀರಾತು(ಟೀಸರ್ ಆ್ಯಡ್) ಮಿಂಚಲು ಆರಂಭಿಸಿದೆ. ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿರುವ ಯಮಹಾ ರೇ ಸ್ಕೂಟರ್ ಕುರಿತು ಕಂಪನಿಯು ಭರ್ಜರಿ ಪ್ರಚಾರ ಆರಂಭಿಸಿದೆ.

ಟಿವಿಗಳಲ್ಲಿ ದೀಪಿಕಾ ನಟಿಸಿರುವ ಯೆಸ್ ಯಮಹಾ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಈ ಜಾಹೀರಾತು ಯುಟ್ಯೂಬ್ ನಲ್ಲೂ ಲಭ್ಯವಿದೆ. ನೂತನ ಆಟೋಮ್ಯಾಟಿಕ್ ರೇ ಸ್ಕೂಟರಿನ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ಕಂಪನಿಯ ನಿರೀಕ್ಷೆಯನ್ನೂ ಮೀರಿ ಗ್ರಾಹಕರು ರೇ ಸ್ಕೂಟರ್ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂದು ಕಂಪನಿ ಮೂಲಗಳು ಹೇಳಿವೆ.ಹೀರೊ ಮೊಟೊಕಾರ್ಪ್ ಕಂಪನಿಯ ಪ್ಲೆಷರ್ ಮತ್ತು ಟಿವಿಎಸ್ ಸ್ಕೂಟಿ ಪೆಪ್ಟ್ ಪ್ಲಸ್ ಮುಂತಾದ ಸ್ಕೂಟರುಗಳಿಗೆ ನೂತನ ಯಮಹಾ ರೇ ಪೈಪೋಟಿ ನೀಡುವ ನಿರೀಕ್ಷೆಯಿದೆ.

ನೂತನ ಯಮಹಾ ರೇ ದೇಶದ ತರುಣ ತರುಣಿಯರನ್ನು ಗಮನದಲ್ಲಿಟ್ಟುಕೊಂಡು ಆಗಮಿಸಲಿದೆ. ಯುವಪೀಳಿಗೆಯನ್ನು ಸೆಳೆಯಲು ಕಂಪನಿಯು ನೂತನ ರೇ ಸ್ಕೂಟರಿಗೆ ದೀಪಿಕಾ ಪಡುಕೋಣೆಯನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಂಡಿದೆ.

ಹೊಸ ಸ್ಕೂಟರ್ ಕುರಿತು ಹಲವು ಬಗೆಯ ಪ್ರಚಾರ ತಂತ್ರವನ್ನು ಯಮಹಾ ಈಗಾಗಲೇ ಆರಂಭಿಸಿದೆ. ಯಮಹಾ ರೇ ಸ್ಕೂಟರ್ ಬಹುಮಾನ, ಯಮಹಾ ರೇ ದರ ಅಂದಾಜಿಸಿ ಇತ್ಯಾದಿ ಆಮೀಷಗಳ ಮೂಲಕ ಗ್ರಾಹಕರನ್ನು ಸೆಳೆಯಲು ಕಂಪನಿ ಪ್ರಯತ್ನಿಸುತ್ತಿದೆ.

Story first published: Wednesday, September 12, 2012, 9:59 [IST]
Please Wait while comments are loading...

Latest Photos