ಧೂಮ್ 3 ಫಿಲ್ಮಲ್ಲಿ, 1300 ಸಿಸಿ ಬೈಕಲ್ಲಿ ಅಮೀರ್ ಖಾನ್ ಮೋಡಿ

ಮುಂಬರುವ ಚಿತ್ರ "ಧೂಮ್ 3"ನಲ್ಲಿ ಅಮಿರ್ ಖಾನ್ ಸಪೂರ ಮೈಕಟ್ಟು ಹೊಂದಿರಲಿದ್ದಾರೆ. ಘಜನಿ ಚಿತ್ರದ ಸದೃಢ ಮೈಕಟ್ಟು ನೋಡಿದವರಿಗೆ ಇದರಿಂದ ಕೊಂಚ ನಿರಾಶೆಯಾದರೂ ಆದೀತು. ಆದರೆ ಅದರಲ್ಲಿ ಸದೃಢ ಸ್ನಾಯು, ಮಾಂಸಖಂಡಗಳ ಸೂಪರ್ ಬೈಕೊಂದು ಇರುವುದು ಖಚಿತವಾಗಿದೆ.
ಧೂಮ್ 3 ಚಿತ್ರದಲ್ಲಿ ಕಳ್ಳತನದ ದೃಷ್ಯಗಳು ಮತ್ತು ಬೈಕ್ ಬೆನ್ನಟುವ ದೃಷ್ಯಗಳು ಇರಲಿವೆಯಂತೆ. ಧೂಮ್ 3 ಫಿಲ್ಮಲ್ಲಿ ಅಮಿರ್ ಖಾನ್ ರೈಡ್ ಮಾಡಲಿರುವ ಬೈಕಿನ ಹೆಸರು ಬಿಎಂಡಬ್ಲ್ಯು ಕೆ 1300 ಆರ್. ಹೆಸರೇ ಹೇಳುವಂತೆ ಇದು 1,300 ಸಿಸಿಯ ಸೂಪರ್ ಬೈಕ್.
ಬಿಎಂಡಬ್ಲ್ಯು ಕಂಪನಿಯ ಈ ಬೈಕಿನ ವಿನ್ಯಾಸವಂತೂ ಬೊಂಬಾಟ್. ಈ ಬೈಕಿನಲ್ಲಿ ಕುಳಿತು ಅಮಿರ್ ಖಾನ್ ಪೋಸ್ ನೀಡಿರುವ ಚಿತ್ರಗಳು ನಮಗೆ ಲಭ್ಯವಾಗಿವೆ. ಇದನ್ನು ನಮ್ಮ ಗ್ಯಾಲರಿ ಚಿತ್ರಲೋಕದಲ್ಲಿ ಪ್ರದರ್ಶನಕ್ಕಿಟ್ಟಿದ್ದೇವೆ. ಚಿತ್ರಗಳನ್ನು ನೋಡಲು ಈ ಲಿಂಕಿಗೆ ಭೇಟಿ ನೀಡಿ.
ಧೂಮ್ 3 ಚಿತ್ರದ ತಾರಾಗಣದಲ್ಲಿ ಅಮಿರ್ ಖಾನ್ ಜೊತೆ ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ ಹಾಗೂ ಹೃತಿಕ್ ರೋಷನ್ ಇರಲಿದ್ದಾರೆ. ವಿಕ್ಟರ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಬೈಕ್ ಪ್ರೇಮಿಗಳನ್ನು ಬಿಎಂಡಬ್ಲ್ಯು ಸೂಪರ್ ಬೈಕ್ ಮೋಡಿಮಾಡುವ ನಿರೀಕ್ಷೆಯಿದೆ.
ಬಿಎಂಡಬ್ಲ್ಯು ಕೆ 1300 ಆರ್ ಬೈಕ್ ನೋಡಲು ಆಕರ್ಷಕವಾಗಿ ಕಾಣುತ್ತದೆ. ಇದು 1,293 ಸಿಸಿಯ ವಾಟರ್ ಕೂಲ್ಡ್ 4 ಸ್ಟ್ರೋಕ್ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 173 ಹಾರ್ಸ್ ಪವರ್ ಮತ್ತು 140 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.


Click it and Unblock the Notifications








