ಡಿಎಸ್‌ಕೆ-ಹ್ಯೊಸಂಗ್ ಕಂಪನಿಯಿಂದ 125-150 ಸಿಸಿ ಬೈಕು
ಪುಣೆ ಮೂಲದ ಡಿಎಸ್ ಕುಲಕರ್ಣಿ ಗ್ರೂಪ್ ಮತ್ತು ಕೊರಿಯಾದ ಹ್ಯೊಸಂಗ್ ಕಂಪನಿಗಳು ಜಂಟಿಯಾಗಿ ದೇಶದ 125-150 ಸಿಸಿ ಬೈಕ್ ಸೆಗ್ಮೆಂಟಿಗೆ ಪ್ರವೇಶಿಸುವ ಸೂಚನೆ ದೊರಕಿದೆ. ಡಿಎಸ್ಕೆ ಮತ್ತು ಹ್ಯೊಸಂಗ್ ಜಂಟಿ ಕಂಪನಿಗಳು ಇತ್ತೀಚೆಗೆ ಜಿಟಿ250ಆರ್ ಸೂಪರ್ ಬೈಕ್ ಪರಿಚಯಿಸಿತ್ತು.
ಹ್ಯೊಸಂಗ್ ಕಂಪನಿಯು ದೇಶದಲ್ಲಿ ಜಿಟಿ560ಆರ್, ಜಿಟಿ650ಎನ್ ಮತ್ತು ಎಸ್ ಟಿ7 ಮುಂತಾದ ಕ್ರೂಷರ್ ಬೈಕುಗಳನ್ನೂ ಮಾರಾಟ ಮಾಡುತ್ತಿದೆ. ಆದರೆ ಇವೆಲ್ಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾರಾಟವಾಗುವ ಬೈಕುಗಳಾಗಿವೆ.
ಇದೀಗ ದೇಶದ ಬೈಕ್ ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲು ಪಡೆದಿರುವ 125 ಸಿಸಿ ಮತ್ತು 150 ಸಿಸಿ ಸೆಗ್ಮೆಂಟಿಗೆ ಪ್ರವೇಶಿಸುವ ಯೋಜನೆಯನ್ನು ಈ ಜಂಟಿ ಕಂಪನಿ ಹಾಕಿಕೊಂಡಿದೆ. ಈ ಬೈಕ್, ಹೋಂಡಾ, ಹೀರೊ ಮೊಟೊಕಾರ್ಪ್, ಬಜಾಜ್ ಬೈಕುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಹ್ಯೊಸಂಗ್ ಜಿಟಿ250ಆರ್: ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ರಸ್ತೆಗೆ ಹ್ಯೊಸಂಗ್ ಕಂಪನಿಯು ಜಿಟಿ250ಆರ್ ಎಂಬ ಬೈಕ್ ಪರಿಚಯಿಸಿತ್ತು. ಇದರ ಬೆಂಗಳೂರು ಎಕ್ಸ್ ಶೋರೂಂ ದರ 2.60 ಲಕ್ಷ ರುಪಾಯಿ ಇದೆ. ನೂತನ ಹ್ಯೊಸಂಗ್ ಬೈಕ್ ಮೊಮೊಷಾಕ್ ಸಸ್ಪೆನ್ಷನ್, ಮುಂಭಾಗದ ಚಕ್ರಕ್ಕೆ ಅವಳಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಕ್ಕೆ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ.


Click it and Unblock the Notifications









