ಶೀಘ್ರದಲ್ಲಿ ನಿರೀಕ್ಷಿಸಿ, ಹ್ಯೊಸಂಗ್ ಜಿವಿ250 ಕ್ರೂಷರ್
ಈ ವರ್ಷ ಹಲವು ಹೊಸ ಮಾಡೆಲ್ ಬೈಕುಗಳನ್ನು ಪರಿಚಯಿಸುವ ಯೋಜನೆ ಕಂಪನಿಗಿದೆ. ಇದರಲ್ಲಿ ಜಿವಿ ಕ್ರೂಷರ್ ಎಂಬ ಸೂಪರ್ ಬೈಕ್ ಕೂಡ ಒಳಗೊಂಡಿದೆ. ಶೀಘ್ರದಲ್ಲಿ ಆಗಮಿಸಲಿರುವ ಸೂಪರ್ ಬೈಕ್ ಹೆಸರು ಜಿವಿ650 ಕ್ರೂಷರ್. ಬನ್ನಿ ಅದರ ವಿಶೇಷತೆಗಳನ್ನು ನೋಡೋಣ.
ಜಿವಿ650 ಕ್ರೂಷರ್ ಆಕರ್ಷಕ ವಿನ್ಯಾಸದ ಗೂಳಿ ಬೈಕ್. ಇದು ವಿ ಟ್ವಿನ್ 647 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. ಇದು ಸುಮಾರು 74 ಪಿಎಸ್ ಪವರ್ ನೀಡಲಿದೆ.
ಈ ಸೂಪರ್ ಬೈಕಿಗೆ ಕಾಯವುದು ಕಷ್ಟವೆನ್ನುವರಿಗೆ ಕಂಪನಿಯು ಈಗಾಗಲೇ ಪರಿಚಯಿಸಿದ 250ಸಿಸಿ ಬೈಕ್ ಖರೀದಿಸಬಹುದು. ಹ್ಯೊಸಂಗ್ ಜಿಟಿ250ಆರ್ ಬೆಂಗಳೂರು ಎಕ್ಸ್ ಶೋರೂಂ ದರ 2.60 ಲಕ್ಷ ರುಪಾಯಿ ಇದೆ.
ಇದು ಮೊಮೊಷಾಕ್ ಸಸ್ಪೆನ್ಷನ್, ಮುಂಭಾಗದ ಚಕ್ರಕ್ಕೆ ಅವಳಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಕ್ಕೆ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ. ನೂತನ ಹ್ಯೊಸಂಗ್ ಜಿಟಿ250ಆರ್ ಬೈಕ್ ನೋಡಲು ಬೃಹತ್ ಆಗಿ ಮತ್ತು ಭರ್ಜರಿಯಾಗಿ ಕಾಣುತ್ತದೆ.


Click it and Unblock the Notifications









