ಡುಕಾಟಿ ಸೂಪರ್ ಬೈಕು ಖರೀದಿಸ್ತಿರಾ? ಒಂದ್ನಿಮಿಷ

ಆದರೆ ಕೆಲವರು ಡುಕಾಟಿ ಬೈಕುಗಳ ದರವೆಂದರೆ ಬೆಚ್ಚಿಬೀಳುತ್ತಾರೆ. ಈ ರಕ್ಕಸ ಬೈಕಿನ ದರವನ್ನು ಬೆಕ್ಕಸ ಬೆರಗಾಗಿ ನೋಡಬೇಕಷ್ಟೇ! ಆ ಕಂಪನಿಯ ಬೈಕುಗಳನ್ನು ಖರೀದಿಸೋದಕ್ಕಿಂತ ಹ್ಯಾಚ್ ಬ್ಯಾಕ್ ಅಥವಾ ಸೆಡಾನ್ ಕಾರು ಖರೀದಿಸಬಹುದು ಎನ್ನುವರಿದ್ದಾರೆ.
ಈ ದುಬಾರಿ ಸೂಪರ್ ಬೈಕುಗಳ ದರವನ್ನು ಇತ್ತೀಚೆಗೆ ಡುಕಾಟಿ ಕಡಿಮೆ ಮಾಡಿದಾಗ ಹೆಚ್ಚಿನವರಿಗೆ ಅಚ್ಚರಿಯಾಗಿತ್ತು. ಕಂಪನಿಯು ಮಾನಸ್ಟರ್ 795 ಬೈಕಿನ್ನು 5.99 ಲಕ್ಷ ರುಪಾಯಿಗೆ ನೀಡಿತ್ತು. ಆದರೆ ಇದೀಗ ಕಂಪನಿ ಇದರ ದರವನ್ನು ಮತ್ತೆ ಹೆಚ್ಚಿಸಲು ನಿರ್ಧರಿಸಿದೆ.
ಇನ್ನು ಮುಂದೆ ಮಾನೆಸ್ಟರ್ 300 ಬೈಕು ಮಾತ್ರ ಆರು ಲಕ್ಷ ರು. ಆಸುಪಾಸಿನಲ್ಲಿ ದೊರಕಲಿದೆ. ಮಾನೆಸ್ಟರ್ 795 ಬೈಕಿನ ದರವನ್ನು ಕಂಪನಿಯು 6.99 ಲಕ್ಷ ರುಪಾಯಿಗೆ ಹೆಚ್ಚಿಸಲಿದೆ ಎಂದು ವರದಿಗಳು ಹೇಳಿವೆ.
ಅಂದ್ರೆ ಕಂಪನಿಯು ಒಂದು ಲಕ್ಷ ರುಪಾಯಿ ಹೆಚ್ಚಿಸಲಿದೆ. ಇದು ಹೆಚ್ಚಿಸೋ ಒಂದು ಲಕ್ಷ ರುಪಾಯಿಗೆ ಐದಾರೂ ಹೊಸ ಪಲ್ಸರ್ ಖರೀದಿಸಬಹುದು ಅಂತೀರಾ. ಆದರೆ ಕಂಪನಿಯು ಯಾವಾಗ ದರ ಹೆಚ್ಚಿಸುತ್ತೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ನಿಮಗೆ ಡುಕಾಟಿ ದೆವ್ವವೇ ಬೇಕೆಂದಿದ್ದರೆ ಬೇಗ ಹೋಗಿ ಬುಕ್ ಮಾಡಬಹುದು. ಇಲ್ಲದಿದ್ದರೆ ನಿಮ್ಮ ಕಿಸೆಗೆ ಒಂದು ಲಕ್ಷ ಗೋತಾ ಹೊಡಿಬಹುದು.
ಕಂಪನಿಯು ಥೈಲಾಂಡಿನಿಂದ ಭಾರತಕ್ಕೆ ಮಾನೆಸ್ಟರ್ ಬೈಕುಗಳನ್ನು ತರಿಸಿಕೊಳ್ಳುತ್ತಿದೆ. ಭಾರತ ಮತ್ತು ಥೈಲಾಂಡ್ ನಡುವೆ ಉಚಿತ ವ್ಯಾಪಾರ ಒಪ್ಪಂದವಿರುವುದರಿಂದ ದರ ಕಡಿಮೆಯಾಗಿದೆ. ಈ ಒಪ್ಪಂದದ ಪ್ರಕಾರ ಅಬಕಾರಿ ಸುಂಕ ಕೇವಲ ಶೇಕಡ 20ರಷ್ಟು ಮಾತ್ರ ಪಾವತಿಸಬೇಕು. ಇತರೆಡೆ ಅಬಕಾರಿ ಸುಂಕ ಶೇಕಡ 80ರಷ್ಟಿದೆ.
ಡುಕಾಟಿ ಮಾನೆಸ್ಟರ್ ಬೈಕ್ ಎಲ್ ಟ್ವಿನ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು 87 ಹಾರ್ಸ್ ಪವರ್ ಮತ್ತು 78 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಸೂಪರ್ ಬೈಕ್ ದೂರ ಪ್ರಯಾಣಕ್ಕೆ ಕಂಫರ್ಟ್ ಎನಿಸುವಂತೆ ಕುಳ್ಳಗಿದ್ದು ಹ್ಯಾಂಡಲ್ ದೂರದಲ್ಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








