ಅರೇ, ಈ ಬೈಕ್ ದರ ಒಂದೂವರೆ ಕೋಟಿ ರು. ಅಷ್ಟೇ!

Posted By:

ದೇಶದಲ್ಲಿ ಕಡಿಮೆಯೆಂದರೂ ನಲುವತ್ತು ಸಾವಿರ ರುಪಾಯಿಗೆ ಬೈಕ್ ದೊರಕುತ್ತದೆ. ಕೆಲವು ಬೈಕ್ ಪ್ರೇಮಿಗಳು ಲಕ್ಷ ಲಕ್ಷ ರುಪಾಯಿ ನೀಡಿ ಸ್ಪೋರ್ಟ್ಸ್, ಸೂಪರ್ ಬೈಕುಗಳನ್ನೂ ಖರೀದಿಸುತ್ತಾರೆ. ಆದರೆ ಬೈಕೊಂದಕ್ಕೆ ಹೆಚ್ಚು ಲಕ್ಷ ರು. ನೀಡಲು ಯಾರು ಬಯಸುವುದಿಲ್ಲ. ಯಾಕೆಂದರೆ ಅದೇ ದರಕ್ಕೆ ಅತ್ಯುತ್ತಮ ಕಾರ್ಯಕ್ಷಮತೆಯ ಕಾರುಗಳನ್ನು ಖರೀದಿಸಬಹುದಲ್ವ?

ಆದರೆ ಇಲ್ಲೊಂದು ಬೈಕ್ ಇದೆ. ಈ ಬೈಕ್ ದರ ಭಾರತಕ್ಕೆ ಬಂದ್ರೆ ಕಡಿಮೆಯಂದ್ರೂ 1.6 ಕೋಟಿ ರುಪಾಯಿ ನೀಡಬೇಕು. ಈ ದರಕ್ಕೆ ಜಾಗ್ವಾರ್ ಎಕ್ಸ್ ಕೆ, ಬಿಎಂಡಬ್ಲ್ಯು ಎಂ5, 6 ಸೀರಿಸ್, ಪೋರ್ಷ್ 911 ಅಥವಾ ಪನಮೆರಾ, ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್, ಲ್ಯಾಂಡ್ ರೋವರ್, ರೇಂಜ್ ರೋವರ್, ಆಡಿ ಆರ್8, ಮಸೆರಟಿ, ಆಸ್ಟನ್ ಮಾರ್ಟಿನ್ ವಾಂಟೆಜ್ ಅಥವಾ ಬೆಂಟ್ಲಿ ಕಾಂಟಿನೆಂಟಲ್ ಕಾರುಗಳನ್ನೇ ಖರೀದಿಸಬಹುದು.

To Follow DriveSpark On Facebook, Click The Like Button

ಅಮೆರಿಕದ ಎಕೊಸೆ ಮೊಟೊ ವರ್ಕ್ಸ್ ಕಂಪನಿಯು ಅಭಿವೃದ್ಧಿಪಡಿಸಿದ ಈ ಬೈಕ್ ದರ 1.6 ಕೋಟಿ ರುಪಾಯಿ. ಅದರಲ್ಲಿ ಏನು ಬಂಗಾರದ ಬ್ರೇಕ್ ಇದೆಯಾ ಎಂದು ಕೇಳುವಿರಾ? ಅಂತಹ ದುಬಾರಿ ಲೋಹಗಳು ಇಲ್ಲ. ಆದರೆ ಇದು ಹ್ಯಾಂಡ್ ಬಿಲ್ಡ್(ಕೈಯಿಂದ ನಿರ್ಮಿತ) ಬೈಕಾಗಿದೆ. ಇದರ ದಕ್ಷತೆ, ಕಾರ್ಯಕ್ಷಮತೆ, ಡ್ರೈವಿಂಗ್ ಅನುಭವ ಅನನ್ಯವಂತೆ.

ಕೆಲವು ವರ್ಷಗಳ ಹಿಂದೆ ರೋಡ್ ರೇಸರ್ ಮತ್ತು ಎಂಜಿನಿಯರ್ ಡೊನಾಲ್ಟ್ ಅಟ್ಚಿಸನ್ ಒಂದು ವಿನೂತನ ಬೈಕ್ ತಯಾರಿಸುವ ಕನಸು ಕಂಡ. ಅದಕ್ಕಾಗಿ 2001ರಲ್ಲಿ ಅಮೆರಿಕದ ಎಕೊಸೆ ಮೊಟೊ ವರ್ಕ್ಸ್ ನೆರವಿನಿಂದ ಇಂತಹ ಬೈಕುಗಳನ್ನು ವಿನ್ಯಾಸ ಮಾಡಲು ಆರಂಭಿಸಿದ. ಆಸ್ಟನ್ ಮಾರ್ಟಿನ್ ಮತ್ತು ಯುದ್ಧವಿಮಾನಗಳಿಂದ ಸ್ಪೂರ್ತಿ ಪಡೆದು ನೂತನ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ.

ಸಾಲಿಡ್ ಅಲ್ಯುಮಿನಿಯಂನಿಂದ ನಿರ್ಮಾಣ ಮಾಡಿರುವ ಇದು 2 ಲೀಟರಿನ ಎಂಜಿನ್ ಹೊಂದಿದೆ. ಇದರ ಚಾಸೀಸನ್ನು ಕೈಯಿಂದಲೇ ವೆಲ್ಡ್ ಮಾಡಲಾಗಿದೆ. ಅಂದರೆ ಸ್ವಯಂಚಾಲಿತ ಯಂತ್ರಗಳ ನೆರವಿನಿಂದ ನಿಮಿಷಕ್ಕೊಂದು ಬೈಕ್ ಉತ್ಪಾದಿಸುವಂತೆ ಉತ್ಪಾದಿಸಲಾಗಿಲ್ಲ. ಮುಂಭಾಗದ ಬ್ರೇಕಿಗೆ 6 ಪಿಸ್ಟನ್, 12 ಬ್ರೇಕ್ ಪ್ಯಾಡ್, ಕೇವಲ್ 2.8 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುವ ಸಾಮರ್ಥ್ಯ ಇದರ ಕೆಲವು ವಿಶೇಷತೆಗಳಾಗಿವೆ.

ಅಮೆರಿಕದಲ್ಲಿ ಇದರ ದರ 3 ಲಕ್ಷ ಡಾಲರ್. ಇದರ ದೇಶದಲ್ಲಿ ಸುಮಾರು 1.6 ಕೋಟಿ ರುಪಾಯಿ ಆಗಬಹುದು. ಈ ದರಕ್ಕೆ ಯಾವುದಾದರೂ ಐಷಾರಾಮಿ ಕಾರನ್ನೇ ಖರೀದಿಸಬಹುದು ಅಲ್ವೆ? ಕಂಪನಿಯು ಕೇವಲ ಇಂತಹ ಹನ್ನೊಂದು ಬೈಕುಗಳನ್ನು ಮಾತ್ರ ನಿರ್ಮಿಸಿದೆ. ಹೀಗಾಗಿ ಹನ್ನೊಂದು ಕೋಟ್ಯಧಿಪತಿಗಳಿಗೆ ಮಾತ್ರ ಸದ್ಯ ಖರೀದಿಸಲು ಅವಕಾಶವಿದೆ. ಮಹೇಂದ್ರ ಸಿಂಗ್ ಧೋನಿಗೆ ಗೊತ್ತಾದ್ರೆ ಖರೀದಿಸಬಹುದು.

Read more on ಬೈಕ್ bike
English summary
ECOSSE Moto New Bike for Rs 1.6 crore. ECOSSE Moto Works is the premier luxury marque of innovative, limited-production motorcycles created for discerning enthusiasts. The models – each with a distinctive character and soul – are built to the highest standards of craftsmanship using the most exotic materials in never-before-seen designs.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark