ಕಾರಿಗಿಂತಲೂ ದುಬಾರಿ ಸೈಕಲ್ ಅಂದ್ರೆ ಹೆಂಗಿರಬೇಕು?
ಸಾಮಾನ್ಯವಾಗಿ ಸೈಕಲ್ ಎಂದ ತಕ್ಷಣ ನೆನಪಿಗೆ ಬರೋದು ಜನಸಾಮಾನ್ಯರಿಗೆ ತಮ್ಮ ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಅಗ್ಗದ ಸೈಕಲ್‌ಗಳು! ಆದರೆ ಇಲ್ಲಿ ನೋಡಿ, ನಾವಿಂದು ನಿಮಗೆ ಕಾರಿಗಿಂತಲೂ ದುಬಾರಿಯಾದ ಸೈಕಲ್‌ವೊಂದನ್ನು ಪರಿಚರಿಯಿಸಲಿದ್ದೇವೆ.
ಆಧುನಿಕ ಮೌಂಟೆನ್ ಬೈಕ್‌ಗಳ ಜನಕ ಎಂದೇ ಹೆಸರು ಮಾಡಿರುವ ಗ್ಯಾರಿ ಕ್ರಿಸ್ಟೋಫರ್ ಫಿಶರ್ ಈ ನವನವೀನ ಬೈಸಿಕಲ್‌ಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಸೈಕಲ್ ಹೆಸರು 'ಸೂಪರ್ ಫ್ಲೈ ಕಾಂಪ್'.
ಅಂದ ಹಾಗೆ ಫೈರ್‌ಫಾಕ್ಸ್ ಬೈಕ್ಸ್ ಕಂಪನಿ ನಿರ್ಮಿಸಿರುವ ಈ ಸೈಕಲ್‌ನ ಬೆಲೆ ಬರೋಬ್ಬರಿ 2.35 ಲಕ್ಷ ರುಪಾಯಿಗಳು!. ಇದು ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುದ ಅಗ್ಗದ ಕಾರು ಎಂದೇ ಬಿಂಬಿತವಾಗಿರುವ ಟಾಟಾ ಕಂಪನಿಯ ನ್ಯಾನೊ ಕಾರಿಗಿಂತಲೂ ಕಡಿಮೆ ಅಗ್ಗವಾಗಿದೆ. ಮಾರುತಿ 800 ದೆಹಲಿ ಎಕ್ಸ್ ಷೋ ರೂಂ ಬೆಲೆ ಈ ಸೈಕಲ್‌ಗಿಂತಲೂ ಕಡಿಮೆಯಾಗಿದೆ.
ಪ್ರಮುಖವಾಗಿಯೂ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಸೂಪರ್ ಫ್ಲೈ ಸೈಕಲ್ ತಯಾರಿಸಲಾಗಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ 3000ದಷ್ಟು ಸೈಕಲ್ ಮಾರಾಟ ಗುರಿ ಹೊಂದಿದೆ. ಇದೇ ಸಂದರ್ಭದಲ್ಲಿ 1.45 ಲಕ್ಷ ಬೆಲೆಬಾಳುವ 'ಸೂಪರ್ ಪ್ಲೈ ಎಎಲ್ ಸೈಕಲ್' ಎಂಬ ಮತ್ತೊಂದು ಮಾದರಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ.

ಸೂಪರ್ ಫ್ಲೈ ಕಾಂಪ್
ಸೈಕಲ್ ಬಿಡಿಭಾಗಗಳನ್ನು ಅಮೆರಿಕ ಹಾಗೂ ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದು, ಶ್ರೀಲಂಕಾದಲ್ಲಿರುವ ತಯಾರಿಕಾ ಘಟಕದಲ್ಲಿ ತಯಾರಿಸಲಾಗಿದೆ.

ಸೂಪರ್ ಫ್ಲೈ ಕಾಂಪ್
ಈ ಸೈಕಲ್ ಭಾರತದಲ್ಲಿ ಲಭ್ಯವಿರುದ ಟಾಟಾ ನ್ಯಾನೊ ಹಾಗೂ ಮಾರುತಿ 800 ಕಾರಿಗಿಂತಲೂ ದುಬಾರಿಯಾಗಿದೆ. ಟಾಟಾ ನ್ಯಾನೊ ಹಾಗೂ ಮಾರುತಿ ಸುಜುಕಿ ದೆಹಲಿ ಎಕ್ಸ್ ಷೋ ರೂಂ ಬೆಲೆ ಕ್ರಮವಾಗಿ 1.42 ಲಕ್ಷ ಹಾಗೂ 2 ಲಕ್ಷ ರುಪಾಯಿಗಳಾಗಿವೆ.

ಸೂಪರ್ ಫ್ಲೈ ಕಾಂಪ್
ಇದೇ ಸಂದರ್ಭದಲ್ಲಿ 1.45 ಲಕ್ಷ ಬೆಲೆಬಾಳುವ 'ಸೂಪರ್ ಪ್ಲೈ ಎಎಲ್ ಸೈಕಲ್' ಎಂಬ ಮತ್ತೊಂದು ಮಾದರಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ.

ಸೂಪರ್ ಫ್ಲೈ ಕಾಂಪ್
ಆಧುನಿಕ ಮೌಂಟೆನ್ ಬೈಕ್‌ಗಳ ಜನಕ ಎಂದೇ ಹೆಸರು ಮಾಡಿರುವ ಗ್ಯಾರಿ ಕ್ರಿಸ್ಟೋಫರ್ ಫಿಶರ್ ಈ ನವನವೀನ ಬೈಸಿಕಲ್‌ಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ಸೂಪರ್ ಫ್ಲೈ ಕಾಂಪ್
ಪ್ರಮುಖವಾಗಿಯೂ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಸೂಪರ್ ಫ್ಲೈ ಸೈಕಲ್ ತಯಾರಿಸಲಾಗಿದೆ.


Click it and Unblock the Notifications








