ಹೀಗೂ ಉಂಟೇ? ಚಿತ್ರವಿಚಿತ್ರ ಸೈಕಲ್ ಲೋಕ
ಟಾಗಾ: ಅಮ್ಮ ಮತ್ತು ಮಗು ಜೊತೆಯಾಗಿ ಕುಳಿತು ಸವಾರಿ ಮಾಡಬಹುದಾದ ಸೈಕಲಿದು. ಸೈಕಲ್ ಮುಂಭಾಗದಲ್ಲಿ ಮಗುವಿಗಾಗಿ ವಿಶೇಷ ಸೀಟ್ ಇದೆ.
ಎಲೆಪ್ಪಿಗೊ: ದೀರ್ಘ ವೃತ್ತಾಕಾರದ ಸಣ್ಣ ಚಕ್ರಗಳ ಸೈಕಲಿದು. ಜಾಗಿಂಗ್ ಮಾಡೋ ತರಹ ಇದ್ರಲ್ಲಿ ಪೆಡಲ್ ತುಳಿಯಬಹುದು. ಸೈಕಲ್ ಮೇಲೆಯೇ ಜಾಗ್ ಮಾಡಬಹುದು.
ಕೂಚ್ ಬೈಕ್: ಬಹುಶಃ ಯಾವುದೋ ಭಾಷೆಯಲ್ಲಿ ಕೂಚ್ ಅಂದ್ರೆ ಸೋಪಾ ಎಂದಿರಬಹುದು. ಯಾಕೆಂದ್ರೆ ಮೂರು ಚಕ್ರದ ಈ ಸೈಕಲ್ ಸೀಟಿನ ಸ್ಥಾನದಲ್ಲಿ ದೊಡ್ಡದಾದ ಸೋಪಾವಿದೆ. ಅದ್ರಲ್ಲಿ ಇಬ್ರು ಕುಳಿತುಕೊಂಡು ಪೆಡಲ್ ತುಳಿಯಬಹುದು.
ಕ್ಯಾಂಪರ್ ಬೈಕ್: ಇದು ಕ್ಯಾಂಪ್ ಮಾಡೋರಿಗೆ ಸೂಕ್ತ. ಯಾಕಂದ್ರೆ ಮೂರು ಚಕ್ರದ ಈ ಸೈಕಲ್ ಮೇಲೆ ಪುಟ್ಟ ಶೆಡ್ ಇದೆ. ದೂರದೂರಿಗೆ ಸೈಕಲ್ ಮೇಲೆ ಸಾಗಿ, ಅದ್ರಲ್ಲೇ ನಿದ್ದೆ, ಊಟ ಎಲ್ಲವೂ ಮಾಡಬಹುದು.
ರೆನೊವಾಟಿಯಾ: ಮರದ ಸುಂದರ ವಿನ್ಯಾಸದ ಫ್ರೇಮ್ ಹೊಂದಿರುವ ಈ ಸೈಕಲ್ ಆಕರ್ಷಕವಾಗಿದೆ. ಮರದ ಫ್ರೇಮ್ ಗಟ್ಟಿಮುಟ್ಟಾಗಿದೆಯೇ? ರೈಡ್ ಮಾಡುವಾಗ ಮುರಿದು ಬೀಳಬಹುದೇ? ಎಂಬ ಕುರಿತು ಖಚಿತತೆ ಇಲ್ಲ.
ಕಾರ್ಟೀಡರ್: ಮಾಲ್ ಗಳಲ್ಲಿ ಖರೀದಿಸಿದ ವಸ್ತುಗಳನ್ನು ತೆಗೆದುಕೊಂಡು ಹೋಗಲು ತಳ್ಳುವ ಗಾಡಿ ಇರುತ್ತದೆ. ಅದೇ ತಳ್ಳುವ ಗಾಡಿಯ ಮೇಲೆ ಕುಳಿತುಕೊಂಡು ರೈಡ್ ಮಾಡಬಹುದಾದ ವಿಚಿತ್ರ ವಿನ್ಯಾಸದ ಸೈಕಲಿದು.
ಸೀಸಾ ಬೈಕ್: ಇದು ನಿಜಕ್ಕೂ ವಿಚಿತ್ರ ಸೈಕಲ್. ಎರಡು ಸೈಕಲ್ ಗಳನ್ನು ಎದುರುಬದುರಾಗಿ ಜೋಡಿಸಲಾಗಿದೆ. ಮೂರೇ ಚಕ್ರವಿರುವ ಈ ಸೈಕಲಿಗೆ ಎರಡು ಫ್ರೇಮ್ ಇದೆ. ಇಬ್ರು ಉಲ್ಟಾ ಪಲ್ಟಾ ಕುಳಿತುಕೊಂಡು ಇದನ್ನು ರೈಡ್ ಮಾಡಬಹುದು.
ಇನ್ನೆಸೆಂಟಿ: ಸೂಪರ್ ಬೈಕ್ ತರಹ ಕಾಣೋ ಸೈಕಲ್. ಇದ್ರಲ್ಲಿ ಮೂರು ಚಕ್ರವಿದೆ. ಆದ್ರೆ ಒಂದು ಚಕ್ರ ಸೀಟ್ ಭಾಗದಲ್ಲಿದೆ. ಇದು ವ್ಯಾಯಾಮ ಮಾಡಲು ಅತ್ಯುತ್ತಮ ಸೈಕಲ್ ಅಂತೆ.
ಸ್ಕಾಂಗ್ ಬೈಕ್: ಇದು ಉದ್ದವಾದ ಸೈಕಲ್. ಇದರ ಮುಂಭಾಗದ ಚಕ್ರ ಸುಮಾರು ಎರಡೂ ಫೀಟ್ ಉದ್ದವಿದೆ.
ಅಸ್ಥಿಪಂಜರ್ ಸೈಕಲ್: ಅಣ್ಣಬಾಂಡ್ ಬೈಕಿನಂತೆ ಇದು ಅಸ್ಥಿಪಂಜರ ವಿನ್ಯಾಸದ ಸೈಕಲ್ ಆಗಿದೆ.
ಫೋರ್ಕ್ ಲೆಸ್ ಕ್ರೂಷರ್: ಈ ಸೈಕಲ್ ವಿಶೇಷತೆಯೆಂದರೆ ಇದರ ಹ್ಯಾಂಡಲ್ ಮುಂಭಾಗದ ಚಕ್ರಕ್ಕೆ ಜಾಯಿಂಟ್ ಆಗಿಲ್ಲ.
ಕಾನ್ಫರೆನ್ಸ್ ಬೈಕ್: ಎರಡು ಚಕ್ರದ ಈ ವೃತಾಕಾರದ ಸೈಕಲಿನಲ್ಲಿ ಸುಮಾರು ಏಳೆಂಟು ಜನರು ಕುಳಿತು ಮೀಟಿಂಗ್ ಮಾಡಬಹುದು.


Click it and Unblock the Notifications
