ಸಾಹಸಿ ಕ್ಷಣಗಳನ್ನು ಸೆರೆ ಹಿಡಿಯೋ ಸಣ್ಣ ಕ್ಯಾಮರಾ

ಬೈಕ್ ರೇಸ್, ಕಾರ್ ರೇಸ್, ವಾಹನ ಸಾಹಸದ ರೋಮಾಂಚನ ಕ್ಷಣಗಳನ್ನು ನೀವು ವಿಡಿಯೋಗಳಲ್ಲಿ ಕಣ್ತುಂಬಿಕೊಂಡಿರಬಹುದು. ವಾಹನದ ವೇಗದಲ್ಲೇ ಸಾಗುವ ವಿಡಿಯೋ ಶಾಟ್ಸ್ ನಿಮಗೆ ಅಚ್ಚರಿ ಹುಟ್ಟಿಸಿರಬಹುದು. ಈ ರೀತಿ ವಿಡಿಯೋ, ಫೋಟೊ ತೆಗೆಯುವುದು ಹೇಗೆ? ಏನಿದರ ಕರಾಮತ್ತು?

ಬೈಕ್ ಸಾಹಸ ಮಾಡುವರ ಹೆಲ್ಮೆಟ್ ನಲ್ಲಿ, ಬೈಕಿನಲ್ಲಿ, ಕಾರುಗಳಲ್ಲಿ ಈ ಪುಟ್ಟ ಕ್ಯಾಮರಾ ಅಳವಡಿಸಿರಲಾಗುತ್ತದೆ. ನೋಡಲು ಪುಟ್ಟದಾಗಿರುವ ಈ ಕ್ಯಾಮರಾವು ಅತ್ಯಾಕರ್ಷಕ ದೃಷ್ಯಗಳನ್ನು ಸೆರೆ ಹಿಡಿಯುತ್ತದೆ. ಅಂತಹ ಕ್ಯಾಮರಾವೊಂದು ದೇಶದ ಮಾರುಕಟ್ಟೆಗೆ ಬಂದಿದೆ. ಹೆಸರು: ಗೊ ಪ್ರೊ. ದರ: 21 ಸಾವಿರ ರು. ಬನ್ನಿ ಗೊ ಪ್ರೊ ತೆಗೆದ ಕೆಲವು ಅದ್ಭುತ ಚಿತ್ರಗಳನ್ನು ಕಣ್ತುಂಬಿಕೊಳ್ಳೋಣ.

ಯಾರು ತೆಗೆದರು ಈ ಚಿತ್ರ?

ಯಾರು ತೆಗೆದರು ಈ ಚಿತ್ರ?

ಈ ಯುವತಿ ಸಮುದ್ರದಲ್ಲಿ ಸರ್ಫಿಂಗ್ ಮಾಡಿದಾಗ ತೆಗೆದ ಚಿತ್ರ. ಸರ್ಫಿಂಗ್ ಬೋಟ್ ನಲ್ಲೇ ಕ್ಯಾಮರಾ ಅಳವಡಿಸಲಾಗಿರುತ್ತದೆ. ಬೈಕ್ ಸಾಹಸದ ಅದ್ಭುತ ಚಿತ್ರಕ್ಕಾಗಿ ಮುಂದಿನ ಪುಟ ಪ್ರವೇಶಿಸಿ.

ಬೈಕ್ ಸಾಹಸದ ಫೊಟೊ ತೆಗೆದ ಸಾಹಸಿ

ಬೈಕ್ ಸಾಹಸದ ಫೊಟೊ ತೆಗೆದ ಸಾಹಸಿ

ಮೊಟೊಕ್ರಾಸ್ ಮೊಟೊ ಎಕ್ಸ್ ರನ್ನರ್ ಅಡ್ವೆಂಚರ್ ಚಿತ್ರವಿದು. ಬೈಕಿನ ಪೂರ್ತಿ ಚಿತ್ರ ಬಂದಿಲ್ಲ ಅಲ್ವ? ಯಾಕೆಂದರೆ ಬೈಕಿನಲ್ಲಿಯೇ ಈ ಕ್ಯಾಮರಾ ಫಿಕ್ಸ್ ಮಾಡಲಾಗಿತ್ತು. ಬೈಕ್ ಸಾಹಸಿ ಈ ರೀತಿ ನೆಗೆದಾಗ ಚಿತ್ರ ರೆಕಾರ್ಡ್ ಆಗಿತ್ತು. ಬೈಕ್ ಸವಾರನ ನೆರಳು ಗಮನಿಸಿ.

ಸ್ಕೈಯಿಂಗ್ ಅಡ್ವೆಂಚರ್

ಸ್ಕೈಯಿಂಗ್ ಅಡ್ವೆಂಚರ್

ಗಮನಿಸಿ ಈತನ ಹೆಲ್ಮೆಟ್ಟಿನಲ್ಲೊಂದು ಕ್ಯಾಮರಾವಿದೆ. ದೇಹದ ಮತ್ತೊಂದು ಭಾಗದಲ್ಲಿರುವ ಮತ್ತೊಂದು ಕ್ಯಾಮರಾ ಈ ಚಿತ್ರ ಸೆರೆ ಹಿಡಿದಿದೆ. ಅದ್ಬುತ ಶಾಟ್ಸ್ ಅಲ್ವ? ಕ್ಯಾಮರಾ ಹೇಗಿದೆ ಅಂತಿರಾ? ಮುಂದಿನ ಚಿತ್ರ ನೋಡಿರಿ.

ಅಂಗೈನಲ್ಲಿ ಪುಟ್ಟ ಅಚ್ಚರಿ

ಅಂಗೈನಲ್ಲಿ ಪುಟ್ಟ ಅಚ್ಚರಿ

ಈ ಪುಟ್ಟ ಕ್ಯಾಮರಾ ದರ 21 ಸಾವಿರ ರು.

ಈ ವಾಹನ ಸಾಹಸ ನೋಡಿ

ಈ ವಾಹನ ಸಾಹಸ ನೋಡಿ

ಆಫ್ ರೋಡ್ ಸಾಹಸ ಕ್ಷಣಗಳನ್ನು ಗೊ ಪ್ರೊ ಸೆರೆ ಹಿಡಿದದ್ದು ಹೀಗೆ..

ಬೈಕ್ ವೇಗದಲ್ಲೇ ಚಿತ್ರಿಕರಣ

ಬೈಕ್ ವೇಗದಲ್ಲೇ ಚಿತ್ರಿಕರಣ

ಬೈಕ್ ಸವಾರಿ ಮಾಡುವ ದೃಷ್ಯಗಳನ್ನು ಸೆರೆ ಹಿಡಿಯುವುದು ಹೀಗೆ. ಬೈಕ್ ಅಥವಾ ಕಾರಿಗೆ ಇದನ್ನು ಜೋಡಿಸಿಟ್ಟರೆ ಸಾಕು. ಮುಂದಿನ ಚಿತ್ರ ನೋಡಿ.

 ಚಿತ್ರ ವಿಚಿತ್ರ ಕೋನದಲ್ಲಿ ಚಿತ್ರಿಕರಣ

ಚಿತ್ರ ವಿಚಿತ್ರ ಕೋನದಲ್ಲಿ ಚಿತ್ರಿಕರಣ

ಈ ಪುಟ್ಟ ಕ್ಯಾಮರಾದಲ್ಲಿ ವಾಹನ ಸಾಹಸದ ಆಕರ್ಷಕ ಚಿತ್ರಗಳನ್ನು ತೆಗೆಯಬಹುದು.

ಗೊ ಪ್ರೊ ಹೆಸರಿನ ಪುಟ್ಟ ಅಡ್ವೆಂಚರ್ ಕ್ಯಾಮರಾ ಭಾರತದ ಮಾರುಕಟ್ಟೆಗೂ ಆಗಮಿಸಿದೆ. ದೇಶದ ಹೆಚ್ಚಿನ ಗೊ ಪ್ರೊ ಡೀಲರುಗಳ ಬಳಿ ನೂತನ ಕ್ಯಾಮರಾ ಲಭ್ಯವಿರಲಿದೆ. ಚೆನ್ನೈ ಮೂಲದ Stereovision ಕಂಪನಿಯು ನೂತನ ಗೊ ಪ್ರೊ ಕ್ಯಾಮರಾಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಗೊ ಪ್ರೊದಲ್ಲಿ ತೆಗೆದ ವಿಡಿಯೊ ದೃಷ್ಯವನ್ನು ನೋಡಿರಿ

ಸ್ಟಿರಿಯೊವಿಷನ್ ವೆಬ್ ತಾಣ: Stereovision India
ಗೊ ಪ್ರೊ ವೆಬ್ ಸೈಟ್: Go Pro

More from DriveSpark

Article Published On: Thursday, September 27, 2012, 10:43 [IST]
English summary
California based Go Pro cameras has officially entered in India. If you are a motorsport enthusiast or an adventure sport athlete we are sure you would be aware of this mighty small camera. View a few shots captured by Go Pro during our Exclusive Xtreme Sports outing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+