ಹೀರೊ ಮೊಟೊಕಾರ್ಪ್: 30 ಸಾವ್ರಕ್ಕಿಂತ ಅಗ್ಗದ ಬೈಕ್

ದೇಶದ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೊಟೊಕಾರ್ಪ್ ಅಗ್ಗದ ಬೈಕುಗಳನ್ನು ಹೊರತರಲು ಯೋಜಿಸಿದೆ. ಈ ಬೈಕುಗಳ ದರ 30 ಸಾವಿರ ರು.ಗಿಂತಲೂ ಅಗ್ಗವಾಗಿರಲಿದೆ ಎನ್ನುವುದು ವಿಶೇಷ. ಸೆಕೆಂಡ್ ಹ್ಯಾಂಡ್ ಬೈಕುಗಳನ್ನು ಖರೀದಿಸುವರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಅಗ್ಗದ ಹೊಸ ಬೈಕುಗಳನ್ನು ಹೊರತರಲಿದೆ.

"ಕಡಿಮೆ ದರದ ಬೈಕುಗಳನ್ನು ಹೆಚ್ಚಿನ ಜನರು ಎದುರು ನೋಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಡಿಮೆ ದರವಾದರೂ ದಕ್ಷತೆಯಲ್ಲಿ ರಾಜಿಯಿಲ್ಲದಂತೆ ರೂಪಿಸುವುದು ನಮ್ಮ ಗುರಿ" ಎಂದು ಹೀರೋ ಮೊಟೊಕಾರ್ಪ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್ ಹೇಳಿದ್ದಾರೆ.

"ಇಲ್ಲಿವರೆಗೆ ಯಾವುದೇ ವಾಹನ ಹೊಂದಿರದ ಗ್ರಾಹಕರ ಸೆಗ್ಮೆಂಟ್ ಇದಾಗಿದೆ. ಈ ಸೆಗ್ಮೆಂಟಿನಲ್ಲಿ ಮೊಪೆಡ್ ಜನಪ್ರಿಯವಾಗಿದೆ. ಆದರೆ ನಾವು ಈ ಸೆಗ್ಮೆಂಟಿಗೆ ನಿಜವಾದ ಬೈಕನ್ನೇ ಬಿಡಲಿದ್ದೇವೆ" ಎಂದು ಅವರು ವಿವರಿಸಿದ್ದಾರೆ.

ಅಗ್ಗದ ಬೈಕುಗಳಲ್ಲಿಯೂ ಪೈಪೋಟಿಯಿದೆ. ಬಜಾಜ್ ಆಟೋ ಮತ್ತು ಹೀರೋ ಮೊಟೊಕಾರ್ಪ್ ರಸ್ತೆಯಲ್ಲಿ ಅಗ್ಗದ ಬೈಕುಗಳನ್ನು ಬಿಡುವುದರ ಮೂಲಕ ಸ್ಪರ್ಧೆ ನಡೆಸುತ್ತಿವೆ. ಬಜಾಜಿನ ಬಿವೈಕೆ 100 ಬೈಕ್ ಕೂಡ ಇದೇ ಸೆಗ್ಮೆಂಟಿನಲ್ಲಿ ಬಂದಿದೆ. ಈ ಬೈಕಿನ ದರ 30 ಸಾವಿರ ರು. ಆಸುಪಾಸಿನಲ್ಲಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Saturday, March 17, 2012, 12:46 [IST]
English summary
India's largest two-wheeler maker, Hero Motor Corp. is planning to develop low cost motorcycles that will be priced under Rs 30,000. With this move, it is quite clear that Hero is intending to create a niche segment in the India two-wheeler market. The vehicles will be aimed at people who could only afford a used vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+