ಡಿಸ್ಕವರ್ ಓವರ್‌ಟೇಕ್ ಮಾಡಿದ ಹೀರೊ ಸ್ಪೆಂಡರ್

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬಜಾಜ್ ಡಿಸ್ಕವರ್ ಹಿಂದಿಕ್ಕಿರುವ ಹೀರೊ ಸ್ಪೆಂಡರ್ ಮತ್ತೆ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್‌ನ ಸ್ಪೆಂಡರ್ ಆವೃತ್ತಿಯು ಕಳೆದ ತಿಂಗಳಲ್ಲಿ 1.8 ಲಕ್ಷ ಯುನಿಟ್ ಮಾರಾಟ ಗಿಟ್ಟಿಸಿಕೊಂಡಿತ್ತು.

ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ 1.52 ಯುನಿಟ್ ಮಾರಾಟ ಕಂಡುಬಂದಿದ್ದ ಬಜಾಜ್ ಡಿಸ್ಕವರ್ ಮಾರುಕಟ್ಟೆಯಲ್ಲಿ ಹೊಸ ಬಿರುಗಾಳಿಯೆಬ್ಬಿಸಿತ್ತು. ಇದು ಸ್ಪೆಂಡರ್ ಕುಸಿತಕ್ಕೆ ಕಾರಣವಾಗಿತ್ತು.

ಒಟ್ಟಾರೆಯಾಗಿ ಅಕ್ಟೋಬರ್ ತಿಂಗಳ ವೇಳೆಗೆ ಹೀರೊ ಮೋಟೊಕಾರ್ಪ್ ಸೇಲ್ಸ್ 5 ಲಕ್ಷ ದಾಟಿದರೆ ಬಜಾಜ್ ಆಟೋ 2.62 ಯುನಿಟ್ ಮಾರಾಟ ಮಾಡಿವೆ. ಮೂರನೇ ಸ್ಥಾನ ಹೊಂದಿರುವ ಹೊಂಡಾ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ 2.36 ಲಕ್ಷ ಯುನಿಟ್ ಸೇಲ್ ಮಾಡಿವೆ.

2012 ಎಪ್ರಿಲ್‌ನಿಂದ ಆರಂಭವಾಗಿರುವ ಆರ್ಥಿಕ ಸಾಲಿನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೀರೊ ಮೊಟೊಕಾರ್ಪ್ ಮಾರಾಟಕ್ಕೆ ಸವಾಲೆಸೆಯಲು ಇತರ ಕಂಪನಿಗಳಿಗೆ ಸಾಧ್ಯವಾಗಿಲ್ಲ.

ಎಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಹೀರೊ ಮಾರಾಟವು ಶೇಕಡಾ 42.7ರಷ್ಟು ಕುಸಿತ ಕಂಡಿತ್ತು. ಇದು ಕಳೆದ ವರ್ಷ 45.3ರಷ್ಟಿತ್ತು. ಆದರೆ ವಿಶ್ಲೇಷಕರ ಪ್ರಕಾರ ಶೇರುಗಳು ಮತ್ತಷ್ಟು ವರ್ಧಿಸಲಿದೆ. ಹಾಗಿದ್ದರೂ ಬೈಕ್ ಮಾರುಕಟ್ಟೆಯ ಬಹುತೇಕ ಶೇರು ವಶಪಡಿಸಿಕೊಳ್ಳುವುದು ಕಷ್ಟಕರವಾಗಿದೆ.

ಮತ್ತೊಂದೆಡೆ ಅಕ್ಟೋಬರ್ ತಿಂಗಳಲ್ಲಿ ಹೀರೊ ಸ್ಪೆಂಡರ್ ಬೇಡಿಕೆ ಹೆಚ್ಚಾಗಿರುವುದರ ಬಗ್ಗೆ ಬಜಾಜ್ ಆಟೋ ಚಿಂತತವಾಗಿಲ್ಲ. ಯಾಕೆಂದರೆ ಕಳೆದೊಂದು ವರ್ಷದಲ್ಲಿ ಡಿಸ್ಕವರ್ ಬೇಡಿಕೆ ಹೆಚ್ಚುತ್ತಲೇ ಇದ್ದು ಮುಂದಿನ ತಿಂಗಳಲ್ಲೂ ಮುಂದುವರಿಯುವ ನಿರೀಕ್ಷೆ ಹೊಂದಿದೆ.

More from DriveSpark

Article Published On: Wednesday, November 7, 2012, 14:31 [IST]
English summary
The flagship bike of India's largest two wheeler manufacturer, Hero, the Splendor has retained its top position after its sales increased to 1.8 lakh units in October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+