ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

Written By: Rahul TS

ಕಳೆದೆರಡು ಎರಡು ದಶಕಗಳಿಂದ ಭಾರತೀಯ ಮಧ್ಯಮ ವರ್ಗದ ಗ್ರಾಹಕರನ್ನು ಮನಮೆಚ್ಚಿಸಿರುವ ಹೊಂಡಾ ಸ್ಪ್ಲೆಂಡರ್ ಈಗ 2018ರಸೂಪರ್ ಸ್ಪ್ಲೆಂಡರ್ ರೂಪ ತಾಳಿ ಮತ್ತೆ ಗ್ರಾಹಕರನ್ನು ಸೆಳೆಯಲು ಬಿಡುಗಡೆಗೊಂಡಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ಬೈಕಿನ ಬೆಲೆಯನ್ನು ರೂ.57,190ಕ್ಕೆ ನಿಗದಿಪಡಿಸಲಾಗಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಹೊಸ ಬೈಕಿನ ಎಂಜಿನ್ ಮಾದರಿಯನ್ನು ಈ ಹಿಂದೆ 2017ರಲ್ಲಿ ಬಿಡುಗಡೆಗೊಂಡಿದ್ದ ಹೀರೋ ಗ್ಲಾಮರ್ ಬೈಕಿನ 124.7ಸಿಸಿ ನಾನ್ ಸ್ಲೋಪರ್ ಎಂಜಿನ್ ಮಾದರಿಯನ್ನೇ ಆಧರಿಸಿದ್ದು, ದೇಶೀಯ ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ಶೇ.50ರಷ್ಟು ಮಾರಾಟ ದಾಖಲೆ ಹೊಂದಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಹೊಸ ಸೂಪರ್ ಸ್ಲೆಂಡರ್‍ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಎಂಜಿನ್ ಸಾಮರ್ಥ್ಯ

2018ರ ಸೂಪರ್ ಸ್ಪ್ಲೆಂಡರ್ ಬೈಕ್ ಮಾದರಿಯು 124.7ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, 11.2ಬಿಹೆಚ್‍ಪಿ ಮತ್ತು 11ಎನ್ಎಂ ಟಾರ್ಕ್‍ಅನ್ನು ಬಿಡುಗಡೆ ಮಾಡುವ ಶಕ್ತಿಯನ್ನು ಪಡೆದಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಹಿಂದಿನ ಮಾದರಿಗಿಂತ 1.87 ಬಿಹೆಚ್‍ಪಿ ಮತ್ತು 0.65 ಟಾರ್ಕ್ ಹೆಚ್ಚಿಸಲಾಗಿದ್ದು, ಹೀರೋ ಐ3ಎಸ್ ತಂತ್ರಜ್ಞಾನವನ್ನು ಸಹ ಜೋಡಣೆ ಹೊಂದಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಹೊಸ ಬೈಕಿನ ಎಂಜಿನ್ ಅನ್ನು 4 ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದ್ದು, ಔಟ್‍‍ಗೋಯಿಂಗ್ ಮಾಡೆಲ್‍‍ಗಿಂತ 3 ಕಿಲೋಗ್ರಾಂ ಹೆಚ್ಚಾಗಿದ್ದು, ಒಟ್ಟಾರೆ 124 ಕಿಲೋಗ್ರಾಂ ತೂಕವನ್ನು ಪಡೆದಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಸೂಪರ್ ಸ್ಪ್ಲೆಂಡರ್ 2018 ಬೈಕ್ ಇಂಜಿನ್ ಹೊರತುಪಡಿಸಿ ಹೊಸ ಸ್ಪೋರ್ಟಿಯರ್ ರೂಪ ಪಡೆದಂತ ಸೀಟ್‍‍ಗಳನ್ನು ಹೊಂದಿದ್ದು, ಯುವ ಗ್ರಾಹಕರನ್ನು ಸಹ ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರಲಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಬೈಕಿನ ವೈಶಿಷ್ಟಯತೆಗಳು

ಬೈಕಿನ ಸಿಡ್ ಪ್ಯಾನೆಲ್‍‍ಗಳನ್ನು ಪುನರುತ್ತಾನಗೊಳಿಸಲಾಗಿದ್ದು, ಟೈಲ್ ಸೆಕ್ಷನ್ ಎಲ್ಇಡಿ ಟೈಲ್‍‍ಲೈಟ್ ಪಡೆದಿದೆ. ಇದರೊಂದಿಗೆ ಆಲ್ ಟೈಮ್ ಹೆಡ್‍‍ಲ್ಯಾಂಪ್, ಸೈಡ್ ಸ್ಟಾಂಡ್ ಇಂಡಿಕೇಟರ್, ಅಗಲವಾದ ರೀರ್ ಟೈರ್ ಮತ್ತು ಉದ್ದವಾದ ಸೀಟ್ ಶೇಕರಣೆ ಜೊತೆಗೆ ಲಾಕ್ ಮಾಡಬಹುದಾದ ಯುಲಿಟಿ ಬಾಕ್ಸ್ ಸಹ ಇರಲಿದೆ.

ಹೊಸ ರೂಪದೊಂದಿಗೆ ಮತ್ತೆ ಬಂದ ಹೀರೋ ಸ್ಪ್ಲೆಂಡರ್

ಹೀರೋ ಸಂಸ್ಥೆಯು ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತನ್ನ ಹೊಸ 2018ರ ಸೂಪರ್ ಸ್ಪ್ಲೆಂಡರ್ ಬೈಕನ್ನು ಬಿಡುಗಡೆ ಮಾಡಿದ್ದು, 125ಸಿಸಿ ಎಂಜಿನ್ ಸರಣಿಯ ಬೈಕುಗಳಿಗೆ ಪೈಪೋಟಿ ನೀಡಲಿದೆ.

Read more on hero motocorp splendor
English summary
2018 Hero Super Splendor Launched In India.
Story first published: Thursday, March 8, 2018, 10:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark