ಹೋಂಡಾ ಸಿಬಿಆರ್150ಆರ್ ರಸ್ತೆಗೆ, ದರವೆಷ್ಟು?

Honda CBR 150R Launched At Rs 1.16 Lakh
ಹೋಂಡಾ ಮೋಟರ್ ಸೈಕಲ್ ಕಂಪನಿಯು ನೂತನ 150 ಸಿಸಿಯ ಸಿಬಿಆರ್ ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಸಿಬಿಆರ್ 150ಆರ್ ಸ್ಟಾಂಡರ್ಡ್ ಆವೃತ್ತಿ ದರ 1.16 ಲಕ್ಷ ರು. ಮತ್ತು ಡಿಲಕ್ಸ್ ಆವೃತ್ತಿ ದರ 1,17,385 ರು. ಆಗಿದೆ. ಇದು ದೆಹಲಿ ಎಕ್ಸ್ ಶೋರೂಂ ದರ.

ದೇಶದಲ್ಲಿರುವ ಕಂಪನಿಯ ಎಲ್ಲಾ ಶೋರೂಂಗಳಲ್ಲೂ ಸಿಬಿಆರ್150ಆರ್ ಬುಕ್ಕಿಂಗ್ ಆರಂಭವಾಗಿದೆ. ಮಾತ್ರವಲ್ಲದೇ ಕಂಪನಿಯು ಈ ತಿಂಗಳ ಅಂತ್ಯದೊಳಗೆ ಸಿಬಿಆರ್150ಆರ್ ಎಕ್ಸ್ ಕ್ಲೂಸಿವ್ ಡೀಲರ್ಷಿಪ್ ಮಳಿಗೆ ತೆರೆದು ಬುಕ್ಕಿಂಗ್ ಆರಂಭಿಸಲಿದೆ.

ನೂತನ ಸಿಬಿಆರ್ 150ಆರ್ ಬೈಕ್ ಯಮಹಾ ಆರ್15 2.0, ಕೆಟಿಎಂ ಡ್ಯೂಕ್ 200, ಇನ್ನಷ್ಟೇ ಆಗಮಿಸಲಿರುವ ಬಜಾಜ್ ಪಲ್ಸರ್ 200ಎನ್ಎಸ್ ಮತ್ತು ಹೀರೋ ಕರಿಜ್ಮಾ ಝಡ್ಎಂಆರ್ ಬೈಕುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲಿದೆ.

ಹೊಸ ಸಿಬಿಆರ್150ಆರ್ ನೂತನ ಗ್ರಾಫಿಕ್ಸ್ ಮತ್ತು ಡ್ಯೂಯಲ್ ಲೇಯರಿನ ಬಾಡಿ ವಿನ್ಯಾಸದಿಂದ ಆಕರ್ಷಕವಾಗಿ ಕಾಣುತ್ತದೆ. ಇದರೊಂದಿಗೆ ಪರಿಷ್ಕೃತ ಏರೋ ಡೈನಾಮಿಕ್ಸ್ ವಿನ್ಯಾಸವು ಬೈಕಿನ ಕಾರ್ಯಕ್ಷಮತೆ ಹೆಚ್ಚಿಸಿದೆ.

ಸಿಬಿಆರ್150ಆರ್ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಡಿಒಎಚ್ ಸಿ 150 ಸಿಸಿ ಎಂಜಿನ್ ಹೊಂದಿದೆ. ಇದು 10,500 ಆವರ್ತನಕ್ಕೆ 17.67 ಪಿಎಸ್ ಪವರ್ ಮತ್ತು 8,500 ಆವರ್ತನಕ್ಕೆ 12.66 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಇದು ಲಿಕ್ವಿಡ್ ಕೂಲ್ಡ್ ಮತ್ತು ಫ್ಯೂಯಲ್ ಇಂಜೆಕ್ಟಡ್ ಟ್ರಾನ್ಸ್ ಮಿಷನ್ ಸಿಸ್ಟಮ್ ಹೊಂದಿದೆ.

ಹೊಸ ಸಿಬಿಆರ್150ಆರ್ ಬೈಕ್ ಮೊನೊ ಸಸ್ಪೆನ್ಸನ್, ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಟಾಂಡರ್ಡ್ ಬ್ರೇಕ್, ಟ್ಯೂಬ್ ಲೆಸ್ ಟೈರ್ ಇತ್ಯಾದಿಗಳನ್ನು ಹೊಂದಿದ್ದು, ಬೈಕಿಗೆ ಹೆಚ್ಚುವರಿ ಸ್ಥಿರತೆ ನೀಡಿದೆ.

ನೂತನ ಬೈಕ್ ಸ್ಟಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. ಜೊತೆಗೆ ಎರಡು ಬಣ್ಣಗಳಲ್ಲಿ ದೊರಕುತ್ತಿದೆ. ಪ್ರತಿತಿಂಗಳಿಗೆ ಕಡಿಮೆಯೆಂದರೂ 3,500 ಯುನಿಟ್ ಸಿಬಿಆರ್150ಆರ್ ಬೈಕ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, March 19, 2012, 10:10 [IST]
English summary
Japanese motorcycle manufacturer Honda has launched the CBR 150R at Rs 1.16 lakh (ex-showroom, Delhi) for the Standard and Rs. 1,17,385 (ex-showroom, Delhi) for the Deluxe variant. The much awaited bike was first displayed at the Delhi Auto Expo, 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+