ಕಾಲೇಜು ತರುಣರಿಗಿಷ್ಟವಾದ ಹೋಂಡಾ ಸಿಬಿಆರ್150ಆರ್ ರಸ್ತೆಗೆ

ಕಾಲೇಜು ಯುವಕರಿಗೆ ರೇಸ್ ಬೈಕುಗಳೆಂದರೆ ಇಷ್ಟ. ಇದೀಗ ಹೋಂಡಾ ಕಂಪನಿಯು ದೇಶದ ರಸ್ತೆಗೆ 150ಸಿಸಿಯ ಸಿಬಿಆರ್150ಆರ್ ಬೈಕನ್ನು ಪರಿಚಯಿಸಿದೆ. ಇದರ ವಿನ್ಯಾಸ, ಲುಕ್, ಕಾರ್ಯಕ್ಷಮತೆ ಸೂಪರ್.


ಜಾಗತಿಕ ಮಾರುಕಟ್ಟೆಯಲ್ಲಿ ಮೆಚ್ಚುಗೆ ಪಡೆದ ಹೋಂಡಾ ಸಿಬಿಆರ್ 150ಆರ್ ಬೈಕನ್ನು ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.

ಕಂಪನಿಯು ಸಿಬಿಆರ್ ಸರಣಿಯಲ್ಲಿ ಪ್ರಪ್ರಥಮ ಬಾರಿಗೆ 1983ರಲ್ಲಿ ದೇಶದ ರಸ್ತೆಗೆ ಸಿಬಿಆರ್400ಎಫ್ ಬೈಕನ್ನು ಪರಿಚಯಿಸಿತು. ಕಳೆದ ವರ್ಷ ಕಂಪನಿಯು ಸಿಬಿಆರ್ 250ಆರ್ ಬೈಕನ್ನು ಪರಿಚಯಿಸಿತ್ತು. 250 ಸಿಸಿ ಸೆಗ್ಮೆಂಟಿನಲ್ಲಿ ಈ ಬೈಕು ಸಾಕಷ್ಟು ಜನಪ್ರಿಯವೂ ಆಗಿದೆ.

ಇದೀಗ ಕಂಪನಿಯು ಪರಿಚಯಿಸಿರುವ 150ಸಿಸಿ ಬೈಕ್ ರೇಸಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತ್ತಿದೆ. ಮುಖ್ಯವಾಗಿ ಕಾಲೇಜು ತರುಣರು, ಯುವಕರನ್ನು ಟಾರ್ಗೆಟ್ ಆಗಿಟ್ಟುಕೊಂಡು ಹೋಂಡಾ ಸಿಬಿಆರ್150ಆರ್ ರಸ್ತೆಗಿಳಿದಿದೆ.

ಇತರ ಸಿಬಿಆರ್ ಬೈಕುಗಳಿಗಿಂತ ಇದರ ವಿನ್ಯಾಸ ಸಾಕಷ್ಟು ಪರಿಷ್ಕೃತಗೊಂಡಿದೆ. ಬಾಡಿ ಪ್ಯಾನೆಲ್ ಎರಡು ಬಣ್ಣಗಳಿಂದ ಕಣ್ಮನ ಸೆಳೆಯುತ್ತದೆ. ವೈ ಆಕಾರದ ಹೆಡ್ ಲೈಟ್ ಆಕರ್ಷಕವಾಗಿ ಕಾಣುತ್ತದೆ.

ನೂತನ ಹೋಂಡಾ ಸಿಬಿಆರ್ 150ಆರ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಉಳಿದಂತೆ ಮೊನೊ ಸಸ್ಪೆನ್ಷನ್, ಟ್ಯೂಬ್ ಲೆಸ್ ಟೈರ್ ಮುಂತಾದ ವಿಶೇಷತೆಗಳಿವೆ.

ಸಿಬಿಆರ್150ಆರ್ ಲಿಕ್ವಿಡ್ ಕೂಲ್ಡ್ ಡಿಒಎಚ್ಸಿ ಎಂಜಿನ್ ಹೊಂದಿದೆ. ಇದು 18 ಹಾರ್ಸ್ ಪವರ್ ನೀಡುತ್ತದೆ. ಇದು 150 ಸಿಸಿ ಸೆಗ್ಮೆಂಟಿನಲ್ಲಿ ಆಕರ್ಷಕ ಕಾರ್ಯಕ್ಷಮತೆಯ ಬೈಕಾಗಿದೆ.

ಇಂಗಾಲ ಹೊರಸೂಸುವ ಪ್ರಮಾಣವನ್ನು ತಗ್ಗಿಸಲು ಅಳವಡಿಸಿರುವ ಅಡ್ವಾನ್ಸ್ ಒ2 ಸೆನ್ಸಾರ್ ಮತ್ತು ಏರ್ ಇಂಡಕ್ಟರಿನಿಂದಾಗಿ ಈ ಬೈಕ್ ಪರಿಸರ ಸ್ನೇಹಿ ಕೂಡ ಆಗಿದೆ. ಹೊಸ ಸಿಬಿಆರ್ 150ಆರ್ ಬೈಕ್ ಸ್ಟಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ಆವೃತ್ತಿಗಳಲ್ಲಿ ದೊರಕಲಿದೆ. ಸದ್ಯಕ್ಕೆ ದರ ಮಾಹಿತಿ ಲಭ್ಯವಿಲ್ಲ.

Most Read Articles

Kannada
English summary
Honda Motorcycle & Scooter thrilled biking enthusiasts in india with the launch of CBR 150R. CBR 150R comes with front and rear disc brakes, mono suspension and wide front and rear tubeless tyres.
Story first published: Wednesday, April 11, 2012, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X