ಹೋಂಡಾ ಡ್ರೀಮ್ ಯುಗ ಬೈಕ್ ರಸ್ತೆಗೆ, ದರ 44 ಸಾವಿರ ರು.
ಅಗ್ಗದ ಬೈಕೊಂದರ ನಿರೀಕ್ಷೆಯಲ್ಲಿದ್ದವರ ಕನಸು ಕೊನೆಗೂ ನನಸಾಗಿದೆ. ಬಹುನಿರೀಕ್ಷಿತ ಹೋಂಡಾ ಡ್ರೀಮ್ ಯುಗ 110 ಸಿಸಿ ಬೈಕ್ ರಸ್ತೆಗಿಳಿದಿದೆ. ಮಾಸ್ ದ್ವಿಚಕ್ರವಾಹನ ಮಾರುಕಟ್ಟೆಗೆ ಆಗಮಿಸಿದ ಡ್ರೀಮ್ ಯುಗ ಬೈಕಿನ ಮೈಲೇಜ್ ಸುಮಾರು 72 ಕಿ.ಮೀ. ಆಸುಪಾಸಿನಲ್ಲಿರಲಿದೆ. ಇದರ ದೆಹಲಿ ಎಕ್ಸ್ ಶೋರೂಂ ಆರಂಭಿಕ ದರ 44,642 ರುಪಾಯಿ.
ಹೊಸ ಹೋಂಡಾ ಡ್ರೀಮ್ ಯುಗ ಬೈಕ್ 110 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 7,500 ಆವರ್ತನಕ್ಕೆ 8.5 ಅಶ್ವಶಕ್ತಿ ಮತ್ತು 5,500 ಆವರ್ತನಕ್ಕೆ 8.91 ಟಾರ್ಕ್ ಪವರ್ ನೀಡಲಿದೆ. ಇದು ನಾಲ್ಕು ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಈ ಬೈಕಿನ ಕರ್ಬ್ ತೂಕ 108 ಕೆಜಿ ಇದೆ. ಇದರ ಗ್ರೌಂಡ್ ಕ್ಲೀಯರೆನ್ಸ್ 161 ಮಿ.ಮಿ. ಇದೆ.
ಡ್ರೀಮ್ ಯುಗ ಬೈಕಿನ ಟೈರುಗಳೆರಡೂ ಟ್ಯೂಬ್ ಲೆಸ್ ಆಗಿವೆ. ದೂರ ಪ್ರಯಾಣಕ್ಕೂ ಸೂಕ್ತವಾಗುವಂತೆ ಉದ್ದವಾದ ಸೀಟ್ ಹೊಂದಿದ್ದು, ಹೆಚ್ಚು ಆರಾಮದಾಯಕ. ಮೇಟೆಂನ್ಸ್ ಫ್ರೀ ಬ್ಯಾಟರಿ, ದಪ್ಪವಾದ ಏರ್ ಫಿಲ್ಟರ್ ಇತ್ಯಾದಿಗಳನ್ನು ಹೊಂದಿದೆ. ಸದೃಢ ಪ್ರೇಮ್, ಆಕರ್ಷಕ ಅಲಾಯ್ ವೀಲ್ ನೂತನ ಬೈಕಿನ ಸೌಂದರ್ಯ ಹೆಚ್ಚಿಸಿದೆ. ಹೊಸ ಹೋಂಡಾ ಡ್ರೀಮ್ ಬೈಕ್ ಚಿತ್ರಗಳನ್ನು ನೋಡಿರಿ.


Click it and Unblock the Notifications









