ಬೆಂಗ್ಳೂರಿಗೆ ಹೋಂಡಾ ಡ್ರೀಮ್ ಬೈಕ್, ದರ 47 ಸಾವ್ರ

Posted By:

ಬೆಂಗಳೂರು, ಜೂನ್ 21: ಹೋಂಡಾ ಮೋಟರ್‌ಸೈಕಲ್ ಆಂಡ್ ಸ್ಕೂಟರ್ ಕಂಪನಿಯು ನೂತನ 110ಸಿಸಿಯ ಅಗ್ಗದ ಬೈಕ್ ಡ್ರೀಮ್ ಯುಗವನ್ನು ರೆಸಿಡೆನ್ಸಿ ರಸ್ತೆಯಲ್ಲಿರುವ ಚಾನ್ಸಿರಿ ಪೆವಿಲಿಯನ್ ನಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪರಿಚಯಿಸಿದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ 47,087 ರುಪಾಯಿ.

ನೂತನ ಹೋಂಡಾ ಡ್ರೀಮ್ ಯುಗ ಬೈಕನ್ನು ಕಿಕ್ ಸ್ಟಾರ್ಟ್, ಡ್ರಮ್ ಮತ್ತು ಸ್ಪೋಕ್ ಅಥವಾ ಕಿಕ್, ಡ್ರಮ್, ಅಲಾಯ್ ವೀಲ್ ಅಥವಾ ಸೆಲ್ಫ್, ಡ್ರಮ್, ಅಲಾಯ್ ವೀಲ್ ಆಯ್ಕೆಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಕಪ್ಪು, ರೆಡ್ ಮೆಟಾಲಿಕ್ ಸೇರಿದಂತೆ ಐದು ಬಣ್ಣಗಳಲ್ಲಿ ಡ್ರೀಮ್ ಯುಗ ದೊರಕುತ್ತದೆ.

ಇದೇ ಸಮಯದಲ್ಲಿ "ನನಸಾಗಿಸೋಣ ಕನಸುಗಳನ್ನು" ಎಂಬ ಹೊಸ ಕಾರ್ಪೊರೇಟ್ ಕಾರ್ಯತಂತ್ರವನ್ನೂ ಕಂಪನಿ ಪರಿಚಯಿಸಿತು. ಸಚ್ ಕರ್ ದೇಂಗೆ ಸಪ್ನೇ ಎಂಬ ನೂತನ ಸ್ಲೋಗನ್ ಮೂಲಕ ಕಂಪನಿಯು ಕೋಟ್ಯಂತರ ಭಾರತೀಯರ ಕನಸುಗಾರರನ್ನು ತಲುಪಲು ನಿರ್ಧರಿಸಿದೆ ಎಂದು ಕಂಪನಿಯ ಉಪ ನಿರ್ದೇಶಕರಾದ ತೊಮೊಕಿ ನಾಗಯಾಮ ಹೇಳಿದ್ದಾರೆ.

ನೂತನ ಡ್ರೀಮ್ ಯುಗವು 7,600 ಆವರ್ತನಕ್ಕೆ 8.5 ಅಶ್ವಶಕ್ತಿ ನೀಡುತ್ತದೆ. ಇದು ಒಂದು ಲೀಟರ್ ಪೆಟ್ರೋಲಿಗೆ ಸುಮಾರು 72 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ನೂತನ ಬೈಕ್ ಇಂಟಲಿಜೆಂಟ್ ಇಗ್ನಿಷನ್ ಕಂಟ್ರೋಲ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನಗಳನ್ನು ಹೊಂದಿದೆ.

ಆಕರ್ಷಕ ಎಕ್ಸಾಸ್ಟ್, ಕಪ್ಪು ಬಣ್ಣದ ಗ್ರಾಬ್ ರೈಲ್, ಆಕರ್ಷಕ ಗ್ರಾಪಿಕ್, ಅಲಾಯ್ ವೀಲ್ ಸೇರಿದಂತೆ ಹಲವು ಫೀಚರುಗಳು ಡ್ರೀಮ್ ಯುಗದ ಸೌಂದರ್ಯ ಹೆಚ್ಚಿಸಿದೆ. ಟ್ಯೂಬ್ ರಹಿತ ಟೈರ್, ಟಫ್ ಅಪ್ ಟ್ಯೂಬ್, ದಪ್ಪಗಿನ ಏರ್ ಫಿಲ್ಟರ್ ಮತ್ತು ಮೇಟೆಂನ್ಸ್ ಫ್ರೀ ಬ್ಯಾಟರಿ ಸೇರಿದಂತೆ ಹಲವು ಆಕರ್ಷಣೆಗಳನ್ನು ನೂತನ ಬೈಕ್ ಹೊಂದಿದೆ.

ನೂತನ ಡ್ರೀಮ್ ಯುಗ ಉತ್ತಮ ರಸ್ತೆ ಮಾತ್ರವಲ್ಲದೇ ಕಚ್ಚಾ ರಸ್ತೆಗಳಲ್ಲೂ ಅತ್ಯುತ್ತಮವಾಗಿ ಸವಾರಿ ಮಾಡುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಂದಹಾಗೆ ಕಂಪನಿಯು ನೂತನ ಬೈಕ್ ಪ್ರಚಾರಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಂಡಿದೆ.

English summary
Honda Motorcycle & Scooter India Launched New Dream Yuga Bike in Chancery Pavilion Bangalore. New 110 cc Dream Yuga Starting Price Rs 47,087(Bangalore ex-showroom).
Story first published: Thursday, June 21, 2012, 14:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark