ಹೋಂಡಾ ಡ್ರೀಮ್ ಯುಗ ಬೇಕಾ? ಹೀರೋ ಸ್ಪ್ಲೆಂಡರ್ ಸಾಕಾ?

ಇಪ್ಪತ್ತಾರು ವರ್ಷದ ಹೋಂಡಾ ಮತ್ತು ಹೀರೋ ಮೈತ್ರಿಯ ಕೊಂಡಿ ಕಡಿದು ವರ್ಷ ಕಳೆದಿದೆ. ಈಗ ಜಗತ್ತಿನ ಬೃಹತ್ ದ್ವಿಚಕ್ರ ವಾಹನ ಮಾರುಕಟ್ಟೆ ಭಾರತದಲ್ಲಿ ಅಗ್ರಸ್ಥಾನ ಪಡೆಯಲು ಈ ಎರಡು ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಹೀರೊ ಮೊಟೊಕಾರ್ಪ್ ಕೈಯಿಂದ ಮೊದಲ ಸ್ಥಾನ ಕಸಿದುಕೊಳ್ಳುವ ಡ್ರೀಮ್‌ನಲ್ಲಿ ಹೋಂಡಾ ಕಂಪನಿಯಿದೆ.

ಜಪಾನಿನ ಹೋಂಡಾ ಕಂಪನಿಯು ದೇಶದ ಮಾಸ್ ಮಾರುಕಟ್ಟೆಗೆ ಪ್ರಿಯವಾಗುವಂತಹ ಡ್ರೀಮ್ ಯುಗ ಬೈಕ್ ಹೊರಂದಿದೆ. ನೂತನ 110 ಸಿಸಿಯ ಡ್ರೀಮ್ ಯುಗ ಬೈಕಿನ ಆರಂಭಿಕ ದರ 44,642 ರುಪಾಯಿ ಆಗಿದೆ. ಇದು ದೇಶದ ರಸ್ತೆಯಲ್ಲಿ ಪಾರಮ್ಯ ಮೆರೆದಿರುವ ಸ್ಪ್ಲೆಂಡರ್ ಬೈಕಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಜಗತ್ತಿನಲ್ಲಿಯೇ ಹೋಂಡಾ ಕಂಪನಿಯು ಪರಿಚಯಿಸಿದ ಅಗ್ಗದ ಬೈಕೆಂದರೆ ಡ್ರೀಮ್ ಯುಗ. ಇದು ಎಂಟ್ರಿ ಲೆವೆಲ್ ಸ್ಪ್ಲೆಂಡರ್ ಎನ್ಎಕ್ಸ್‌ಜಿ ಬೈಕಿನ ದರಕ್ಕಿಂತ ಕೇವಲ 2,500 ರುಪಾಯಿ ದುಬಾರಿಯಾಗಿದೆ. ಸದ್ಯ ಸ್ಪ್ಲೆಂಡರ್ ದೇಶದ ದ್ವಿಚಕ್ರವಾಹನ ಮಾರುಕಟ್ಟೆಯ ನಾಯಕ ಸ್ಥಾನದಲ್ಲಿದೆ.

ಡ್ರೀಮ್ ಯುಗ ಬೈಕಿನಲ್ಲೂ ಕೊಂಚ ದುಬಾರಿ ಆವೃತ್ತಿಯಿದೆ. ಅಂದರೆ ಸೆಲ್ಫ್ ಸ್ಟಾರ್ಟ್ ಮತ್ತು ಅಲಾಯ್ ವೀಲ್ ಇರುವ ಹೈಎಂಡ್ ಡ್ರೀಮ್ ಬೈಕ್ ದರ ಸುಮಾರು 48,125 ರುಪಾಯಿ ಇದೆ. ಇದು ಹೀರೋ ಕಂಪನಿಯ ಪ್ಯಾಷನ್ ಪ್ರೊ ಬೈಕಿಗಿಂತ ಸುಮಾರು 3 ಸಾವಿರ ರುಪಾಯಿ ದುಬಾರಿ.

ಪ್ರತಿಸ್ಪರ್ಧಿ ಕಂಪನಿಯ ಬೈಕುಗಳಿಗಿಂತ ಎರಡು ಮೂರು ಸಾವಿರ ರುಪಾಯಿ ಹೆಚ್ಚು ದರದಲ್ಲಿ ನೂತನ ಡ್ರೀಮ್ ಯುಗ ರಸ್ತೆಗಿಳಿದಿದೆ. ಈ ದುಬಾರಿಯು ಡ್ರೀಮ್ ಯುಗ ಮಾರಾಟಕ್ಕೆ ಹೊಡೆತ ನೀಡುವುದೇ ಕಾದು ನೋಡಬೇಕಿದೆ. ಅಂದಹಾಗೆ ನಿಮಗೆ ದೇಶದ ಸ್ಪ್ಲೆಂಡರ್ ಬೈಕ್ ಸಾಕಾ? ಅಥವಾ ಹೊಸ ಡ್ರೀಮ್ ಯುಗ ಬೇಕಾ? ನಮಗೂ ಸ್ವಲ್ಪ ಹೇಳಿ ಪ್ಲೀಸ್...

More from DriveSpark

Article Published On: Thursday, May 17, 2012, 13:40 [IST]
English summary
HOnda Dream Yuga vs Hero Motocorp Splendor. Honda Motorcycle recently launched 110cc motorcycle Dream Yuga, priced at Rs 44,642. Entry level Splendor NXG vs Honda dream Yuga.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+