ಭಾರತದಲ್ಲೂ ಸ್ಟ್ರೀಟ್‌ಫೈರ್ ಹರಡಿಸಲಿರುವ ಹೊಂಡಾ ಸಿಬಿ 150ಆರ್

By Nagaraja

ವಿಶ್ವದ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಜಪಾನ್‌ನ ಪ್ರಮುಖ ಸಂಸ್ಥೆಯಾಗಿರುವ ಹೊಂಡಾ ಒಂದರ ಬಳಿಕ ಒಂದರಂತೆ ನವನವೀನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬೈಕ್‌ಗಳನ್ನು ಅನಾವರಣ ಮಾಡುತ್ತಲೇ ಇವೆ. ಇದೀಗ ಬಂದಿರುವ ಮಾಹಿತಿಯಂತೆ ಇಂಡೋನೇಷ್ಯಾದ ಜಕರ್ತ ಮೋಟಾರ್ ಶೋನಲ್ಲಿ ಅತ್ಯಾರ್ಷಕ ಹೊಂಡಾ ಸಿಬಿ 150ಆರ್ ಸ್ಟ್ರೀಟ್ ಫೈರ್ ಬೈಕ್ ಪ್ರದರ್ಶಿಸಲಾಗಿದೆ. ಈ ಬಹುನಿರೀಕ್ಷಿತ ಬೈಕ್ ಸದ್ಯದಲ್ಲೇ ಭಾರತದ ಮಾರುಕಟ್ಟೆಗೂ ಪ್ರವೇಶ ಮಾಡಲಿದೆ.

ಪ್ರಮುಖವಾಗಿಯೂ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಹೊಂಡಾ ಸಿಬಿ 150ಆರ್ ಬೈಕ್ ತಯಾರಿಸಲಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಪ್ರಸ್ತುತ ಬೈಕ್ ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ ಬಳಿಕ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತದ ಸಹಸಂಸ್ಥೆ ಹೀರೊದಿಂದ ಬೇರ್ಪಟ್ಟ ಬಳಿಕವಂತೂ ಹೊಂಡಾ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆ ತಂತ್ರ ರೂಪಿಸಿಕೊಳ್ಳುತ್ತಿದೆ. ಈ ಮೂಲಕ ಭಾರತದಲ್ಲಿ ಬಜಾಜ್ ಪಲ್ಸರ್‌ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್

ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಹೊಂಡಾ ಸಿಬಿ 150ಆರ್ ಬೈಕ್‌ನ ದರ 1.16 ಲಕ್ಷ ರೂಪಾಯಿಗಳಿರುವ ಸಾಧ್ಯತೆಯಿದೆ. ಒಂದು ವೇಳೆ ಭಾರತದಲ್ಲೂ ಸ್ಮರ್ಧಾತ್ಮಕ ದರದೊಂದಿಗೆ ಈ 150 ಸಿಸಿ ಬೈಕ್ ಅನಾವರಣಗೊಳಿಸಿದ್ದಲ್ಲಿ ಬಜಾಜ್ ಪಲ್ಸರ್‌ಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್

ಈ ನೂತನ ಬೈಕ್‌ನಲ್ಲಿ 150 ಸಿಸಿ ಇಂಧನ ಕ್ಷಮತೆಯ ಏರ್‌ಕೂಲ್ಡ್ ಡಿಒಎಚ್‌ಸಿ ಎಂಜಿನ್ ಆಳವಡಿಸಲಾಗಿದೆ. ಹೆಚ್ಚಿನ ಎಂಜಿನ್ ದಕ್ಷತೆಯನ್ನು ಹೊಂದಿರುವ ಈ ಬೈಕ್ ಆಧುನಿಕ ಫೀಚರ್‌ಗಳನ್ನು ಒಳಗೊಂಡಿರಲಿದೆ.

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್

ನೂತನ ನೆಕ್ಡ್ ವೆರಿಯಂಟ್ ಹೊಂಡಾ ಸಿಬಿ 150ಆರ್ ಹೆಚ್ಚು ಆಕರ್ಷಕವಾಗಿ ಗೋಚರಿಸಲು ಕಾರಣವಾಗಿದೆ. ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ನೆಕ್ಡ್ ವೆರಿಯಂಟ್ ಬೈಕ್‌ಗಳ ಬೇಡಿಕೆ ಹೆಚ್ಚಾಗಿ ಕಂಡುಬಂದಿದೆ. ಹಾಗಾಗಿ ಹೊಂಡಾ ಸಿಬಿ 150ಆರ್ ಭಾರತ ಮಾರುಕಟ್ಟೆಯಲ್ಲೂ ತುಫಾನ್ ಹಾರಿಸುವ ನಿರೀಕ್ಷೆಯಿದೆ.

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್ ಲುಕ್ ಎಲ್ಲ ಹಂತದಲ್ಲೂ ಆಕರ್ಷಣೀಯವಾಗಿದೆ. ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಜತೆ ಈ ಬೈಕ್‌ನಲ್ಲಿ ಫ್ಲೈಟರ್ ಸೀಟ್, ಸಿಂಗಲ್ ಪೀಸ್ ಹ್ಯಾಂಡ್ಲರ್ ಹಾಗೂ ಕಿಕ್ ಸ್ಟಾರ್ಟ್ ಲಿವರ್ ಕೂಡಾ ಆಳವಡಿಸಲಾಗಿದೆ.

ಹೊಂಡಾ ಸಿಬಿ 150ಆರ್

ಹೊಂಡಾ ಸಿಬಿ 150ಆರ್

ನೂತನ ಹೊಂಡಾ ಸಿಬಿ 150ಆರ್ ಬೈಕ್‌ನಲ್ಲಿ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗಿಯರ್‌ಬಾಕ್ಸ್ ಪ್ರಯೋಗ ಮಾಡಲಾಗಿದೆ. ಇದರ ಜತೆ ಸಿಂಗಲ್ ಸಿಲಿಂಡರ್ ಎಂಜಿನ್ ಬೈಕ್ 17.6 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ.

More from DriveSpark

Article Published On: Tuesday, November 6, 2012, 10:55 [IST]
English summary
Japanese bike maker Honda has unveiled its most awaited CB 150R Streetfire in Indonesia at the 2012 Jakarta Motorcycle Show. As per information Honda is planning to launch CB 150R Streetfire in Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+