ಬೆಂಗ್ಳೂರಿಗೆ ಬಂತು ಹ್ಯೊಸಂಗ್ ಜಿಟಿ250ಆರ್ ಗೂಳಿ ಬೈಕ್
ಬೆಂಗಳೂರು, ಜು 20: ರಾಜ್ಯದ ಬೈಕ್ ಪ್ರೇಮಿಗಳು ನಿರೀಕ್ಷಿಸುತ್ತಿದ್ದ ಬಿಗ್ ಬೈಕ್ ಹ್ಯೊಸಂಗ್ ಜಿಟಿ250ಆರ್ ರಾಜ್ಯದ ರಸ್ತೆಗೆ ಆಗಮಿಸಿದೆ. ಅವಳಿ ಸಿಲಿಂಡರ್, ನಾಲ್ಕು ಸಿಲಿಂಡರ್ ನ 250 ಸಿಸಿಯ ಬೈಕನ್ನು ಡಿಎಸ್ಕೆ ಮೋಟೊವೀಲ್ಸ್ ಬಿಡುಗಡೆ ಮಾಡಿದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ 2.60 ಲಕ್ಷ ರುಪಾಯಿ.
ಕವಾಸಕಿ ನಿಂಜಾ ಮತ್ತು ಹೋಂಡಾ ಸಿಬಿಆರ್250ಆರ್ ಬೈಕುಗಳಿಗೆ ಪೈಪೋಟಿ ನೀಡುವ ನೂತನ ಹ್ಯೊಸಂಗ್ ಜಿಟಿ250ಆರ್ ಬೃಹತ್ ಗಾತ್ರದ ಬೈಕಾಗಿದೆ. ಇದರ ಎಂಜಿನ್ ಡ್ಯೂಯಲ್ ಕೂಲಿಂಗ್ ತಂತ್ರಜ್ಞಾನ ಹೊಂದಿದೆ. ಅಂದರೆ ಏರ್ ಕೂಲಿಂಗ್ ಮೆಕಾನಿಸಂ ಮತ್ತು ಆಯಿಲ್ ಕೂಲಿಂಗ್ ತಂತ್ರಜ್ಞಾನ ಇದರಲ್ಲಿದೆ.
ನೂತನ ಹ್ಯೊಸಂಗ್ ಬೈಕ್ ಮೊಮೊಷಾಕ್ ಸಸ್ಪೆನ್ಷನ್, ಮುಂಭಾಗದ ಚಕ್ರಕ್ಕೆ ಅವಳಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಕ್ಕೆ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ. ನೂತನ ಹ್ಯೊಸಂಗ್ ಜಿಟಿ250ಆರ್ ಬೈಕ್ ನೋಡಲು ಬೃಹತ್ ಆಗಿ ಮತ್ತು ಭರ್ಜರಿಯಾಗಿ ಕಾಣುತ್ತದೆ. 250 ಸಿಸಿ ಬೈಕ್ ಎದುರು ನೋಡುತ್ತಿದ್ದವರನ್ನು ನೂತನ ಹ್ಯೊಸಂಗ್ ಬೈಕ್ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಇತ್ತೀಚೆಗೆ ಹ್ಯೊಸಂಗ್ ಕಂಪನಿಯು ಗಾರ್ ವೇರ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿತು. ದೇಶದಲ್ಲಿ ಇನ್ನಷ್ಟು ಹ್ಯೊಸಂಗ್ ಶೋರೂಂಗಳನ್ನು ತೆರೆಯಲು ಡಿಎಸ್ಕೆ ಮೋಟೊವೀಲ್ಸ್ ಯೋಜಿಸಿದೆ.


Click it and Unblock the Notifications









