ಹ್ಯೊಸಂಗ್ ಜಿಟಿ250ಆರ್ ಬೈಕ್ ರಸ್ತೆಗೆ, ದರ 2.7 ಲಕ್ಷ ರು.

ಹ್ಯೋಸಂಗ್ ಮೋಟರ್ ಫ್ಯಾಕ್ಟರಿಯಿಂದ ನೂತನ 250ಸಿಸಿಯ ಜಿಟಿ250ಆರ್ ಬೈಕ್ ದೇಶದ ರಸ್ತೆಗೆ ಆಗಮಿಸಿದೆ. ಇದರ ಆರಂಭಿಕ ದರ ಸುಮಾರು 2.7 ಲಕ್ಷ ರುಪಾಯಿ ಇದೆ. ದೇಶದ ರಸ್ತೆಯಲ್ಲಿ ಕವಾಸಕಿ ನಿಂಜಾ ಮತ್ತು ಹೋಂಡಾ ಸಿಬಿಆರ್250ಆರ್ ಜೊತೆ ಹ್ಯೋಸಂಗ್ ಜಿಟಿ ಬೈಕ್ ಪೈಪೋಟಿ ನಡೆಸಲಿದೆ.

ನೂತನ ಹ್ಯೊಸಂಗ್ ಬೈಕ್ 250ಸಿಸಿಯ, 28 ಅಶ್ವಶಕ್ತಿಯ ವಿಟ್ವಿನ್, 4 ಸ್ಟ್ರೋಕ್ ಎಂಜಿನ್ ಹೊಂದಿದೆ. ಇದು ಗರಿಷ್ಠ 23 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರ ಎಂಜಿನ್ ಡ್ಯೂಯಲ್ ಕೂಲಿಂಗ್ ತಂತ್ರಜ್ಞಾನ ಹೊಂದಿದೆ. ಅಂದರೆ ಏರ್ ಕೂಲಿಂಗ್ ಮೆಕಾನಿಸಂ ಮತ್ತು ಆಯಿಲ್ ಕೂಲಿಂಗ್ ತಂತ್ರಜ್ಞಾನ ಇದರಲ್ಲಿದೆ.

ಹ್ಯೊಸಂಗ್ ಜಿಟಿ250ಆರ್ ಎಂಜಿನ್ ಫ್ಲೂಯೆಲ್ ಇಂಜೆಕ್ಷನ್ ಟೆಕ್ನಾಲಜಿ ಹೊಂದಿದೆ. ಇದರಿಂದ ಈ ಸ್ಪೋರ್ಟ್ಸ್ ಬೈಕಿನ ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಾಗಿದೆ. ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ನೂತನ ಜಿಟಿ250ಆರ್ ಬೈಕ್ ಅತ್ಯುತ್ತಮ ಸವಾರಿಗೆ ಸಹಕರಿಸುತ್ತದೆ.

ಹೊಸ ಹ್ಯೊಸಂಗ್ ಬೈಕ್ ಮೊಮೊಷಾಕ್ ಸಸ್ಪೆನ್ಷನ್, ಮುಂಭಾಗದ ಚಕ್ರಕ್ಕೆ ಅವಳಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಕ್ಕೆ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ. ನೂತನ ಹ್ಯೊಸಂಗ್ ಜಿಟಿ250ಆರ್ ಬೈಕ್ ನೋಡಲು ಬೃಹತ್ ಆಗಿ ಮತ್ತು ಭರ್ಜರಿಯಾಗಿ ಕಾಣುತ್ತದೆ. 250 ಸಿಸಿ ಬೈಕ್ ಎದುರು ನೋಡುತ್ತಿದ್ದವರನ್ನು ನೂತನ ಹ್ಯೊಸಂಗ್ ಬೈಕ್ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಡಿಎಸ್ಕೆ-ಹ್ಯೊಸಂಗ್ ಶೀಘ್ರದಲ್ಲಿ ದೇಶದಾದ್ಯಂತ ಇನ್ನಷ್ಟು ಹೊಸ ಶೋರೂಂ ತೆರೆಯುವ ನಿರೀಕ್ಷೆಯಿದೆ. ಕಂಪನಿಯು ಇಂದಿನಿಂದಲೇ (ಜೂನ್ 13) ಜಿಟಿ250ಆರ್ ಬೈಕ್ ಮಾರಾಟ ಆರಂಭಿಸಿದೆ. ನೂತನ ಬೈಕ್ ಮೂರು ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ. ಬಿಳಿ-ಕೆಂಪು, ಕೆಂಪು-ಕಪ್ಪು ಮತ್ತು ಸಿಲ್ವರ್-ಕೆಂಪು ಬಣ್ಣಗಳಲ್ಲಿ ಹ್ಯೊಸಂಗ್ ಜಿಟಿ250ಆರ್ ಖರೀದಿಸಬಹುದು.

ಈ ಬೈಕ್ ದರ ಕೊಂಚ ದುಬಾರಿ ಎನ್ನಬಹುದು. ಆದರೆ ಡಿಎಸ್ಕೆ ಕಂಪನಿಯು ಶೀಘ್ರದಲ್ಲಿ ಬೈಕ್ ಅಸೆಂಬ್ಲಿ ಘಟಕ ದೇಶದಲ್ಲಿ ನಿರ್ಮಿಸಲಿದೆ. ನಂತರ ದರ ಕಡಿಮೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಹ್ಯೊಸಂಗ್ ಕಂಪನಿಯು ಗಾರ್ ವೇರ್ ಜೊತೆಗಿನ ಮೈತ್ರಿ ಕಡಿದುಕೊಂಡಿತ್ತು.

More from DriveSpark

Article Published On: Wednesday, June 13, 2012, 16:51 [IST]
English summary
Hyosung has officially begun its partnership with DSK by launching its latest sports bike the GT250R in India with a starting price of Rs.2.7 lakhs. The GT250R is aimed at the likes of the Kawasaki Ninja and Honda CBR 250R considering its high price tag. We were expecting the price to be under the Rs. 2 lakhs mark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+