ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಇದೀಗಷ್ಟೇ ಬಿಡುಗಡೆಗೊಂಡಿರುವ ಜೇಮ್ಸ್ ಬಾಂಡ್ ನೂತನ ಚಿತ್ರ 'ಸ್ಕೈಫಾಲ್' ವಿಶ್ವೆದೆಲ್ಲೆಡೆ ಭಾರಿ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ತಿಳಿದ ವಿಚಾರ. ಇದೀಗ ಬಂದಿರುವ ಮಾಹಿತಿಯಂತೆ ಜೇಮ್ಸ್ ಬಾಂಡ್ 23ನೇ ಚಿತ್ರವಾದ ಸ್ಕೈಫಾಲ್‌ನಲ್ಲಿ ನಟ ಡ್ಯಾನಿಯಲ್ ಕ್ರೇಗ್ ಬಳಕೆ ಮಾಡಲಾದ ಹೊಂಡಾ ಬೈಕ್ ಅನ್ನು ಹರಾಜಿಗಿಡಲಾಗುತ್ತಿದೆ.

ಪ್ರಮುಖವಾಗಿಯೂ ಹಿಂದುಳಿದ ಮಕ್ಕಳ ಕಲ್ಯಾಣಕ್ಕಾಗಿ ಧನಸಹಾಯ ಮಾಡಲಾಗುತ್ತಿದೆ. ನವೆಂಬರ್ 22ರ ವರೆಗೆ ಸಾಗಲಿರುವ ಹರಾಜಿನಲ್ಲಿ ಸಂಗ್ರಹಿಸಲಾಗುವ ಮೊತ್ತವನ್ನು ಮಕ್ಕಳ ಸಹಯಾರ್ಥ ಸೇವೆಗಳಿಗಾಗಿ ಬಳಕೆ ಮಾಡಲಾಗುವುದು.

ಜೇಮ್ಸ್ ಬಾಂಡ್ ಬೈಕ್ ಹರಾಜಿನಿಂದ ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸವನ್ನು ಹೊಂಡಾ ಯುಕೆ ಕಂಪನಿ ಹೊಂದಿದೆ. ಸ್ಕೈಫಾಲ್ ಚಿತ್ರದ ಆರಂಭಿಕ ಸೀನ್‌ನಲ್ಲಿ ಬಾಂಡ್ ಪಾತ್ರದಲ್ಲಿರುವ ಡ್ಯಾನಿಯರ್ ಕ್ರೇಗ್ ಹೊಂಡಾ ಬೈಕ್‌ನಲ್ಲಿ ಹಲವು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಸ್ಕೈಫಾಲ್ ಜೇಮ್ಸ್ ಬಾಂಡ್ ಸರಣಿಯ 23ನೇ ಚಿತ್ರ. ಇದರಲ್ಲಿ ಬಳಸಲಾದ ಹೊಂಡಾ ಡರ್ಟ್ ಬೈಕ್ ಅನ್ನು ಹರಾಜಿಗಿಡಲಾಗುತ್ತಿದೆ.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಜೇಮ್ಸ್ ಬಾಂಡ್ ಹೊಂಡಾ ಬೈಕ್ ಹರಾಜಿನಿಂದ ಸಂಗ್ರಹಿಸಲಾಗುವ ಮೊತ್ತವನ್ನು ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಬಳಸಲಾಗುವುದು.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಹೊಂಡಾ ಕಂಪನಿಯ ಸಿಆರ್‌ಎಫ್250ಆರ್ ಬೈಕ್ ನಲ್ಲಿ ಬ್ರಿಟನ್ ಪತ್ತೆದಾರ ಜೇಮ್ಸ್ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡ್ಯಾನಿಯಲ್ ಕ್ರೇಗ್ ಸಾಹಸಿ ಸವಾರಿ ಮಾಡಿದ್ದಾರೆ.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಪರಿಷ್ಕೃತ ಹೊಂಡಾ ಸಿಆರ್‌ಎಫ್ 250ಆರ್ ಮೊಟೊಕ್ರೂಸರನ್ನು ಈಗಾಗಲೇ ಬಿಬಿಸಿ ಫಂಡ್ ರೈಸಿಂಗ್ ಹರಾಜಿಗೆ ಹಸ್ತಾಂತರಿಸಲಾಗಿದ್ದು, ಇಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಮಕ್ಕಳ ಸಹಯಾರ್ಥ ಸಂಸ್ಥೆಗಳಿಗೆ ನೀಡಲಾಗುವುದು.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರದಲ್ಲಿ ಪೊಲೀಸ್ ಬೈಕ್ ಹಾಗೂ ಸ್ಟ್ರೀಟ್ ಮರ್ಚೆಂಟ್‌ಗಳೆಂಬ ಎರಡು ಬೈಕ್‌ಗಳನ್ನು ಬಳಕೆ ಮಾಡಲಾಗಿದೆ.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

'ಇ ಬೇ' ಮುಖಾಂತರ ಹರಾಜು ಸಾಗಲಿದ್ದು, ನವೆಂಬರ್ 22 ಮಧ್ಯರಾತ್ರಿಗೆ ಹರಾಜು ಪ್ರಕ್ರಿಯೆ ಕೊನೆಗೊಳ್ಳಲಿದೆ. ಹಿಂದುಳಿದ ಮಕ್ಕಳ ನೆರವಿಗಾಗಿ ಇಷ್ಟು ದೊಡ್ಡ ಮೊತ್ತ ವಿನಿಯೋಗಿಸುವ ಭರವಸೆಯನ್ನು ಆಯೋಜಕರು ಹೊಂದಿದ್ದಾರೆ.

ಹರಾಜಿಗಿದೆ ಜೇಮ್ಸ್ ಬಾಂಡ್ 007 ಹೊಂಡಾ ಬೈಕ್

ಹೋಂಡಾ ಸಿಆರ್ ಎಫ್250ಆರ್ ಡರ್ಟ್ ಬೈಕಾಗಿದ್ದು, 249 ಸಿಸಿ ಮತ್ತು 4 ಸ್ಟ್ರೋಕ್ ಎಂಜಿನ್ ಹೊಂದಿದೆ. ಸದ್ಯ ಈ ಬೈಕ್ ದೇಶದಲ್ಲಿ ಮಾರಾಟವಾಗುತ್ತಿಲ್ಲ.

More from DriveSpark

Article Published On: Monday, November 19, 2012, 11:43 [IST]
English summary
Honda UK has decided to donate the Honda CRF250R motorcycle which was used by Daniel Craig in the latest Bond movie, Skyfall to help BBC Children in Need annual fundraising auction. “We are very pleased to be able to support BBC Children in Need and with such an exclusive, unique and exciting item,” said Fiona Cole, Manager, Honda (UK) Corporate Communications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+