ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರದಲ್ಲಿ ಹೋಂಡಾ ಬೈಕ್
ಜೇಮ್ಸ್ ಬಾಂಡ್ ಸರಣಿಯ 23ನೇ ಚಿತ್ರ "ಸ್ಕೈಫಾಲ್" ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರಲ್ಲಿ ಹೋಂಡಾ ಕಂಪನಿಯ ಡರ್ಟ್ ಬೈಕೊಂದು ಇರಲಿದೆ. ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳನ್ನು ನೋಡಿದ್ದವರಿಗೆ ಹೋಂಡಾ ಬೈಕ್ ಹೊಸತು.
ಹೋಂಡಾ ಕಂಪನಿಯ ಸಿಆರ್‌ಎಫ್250ಆರ್ ಬೈಕ್ ನಲ್ಲಿ ಬ್ರಿಟನ್ ಪತ್ತೆದಾರ ಜೇಮ್ಸ್ ಬಾಂಡ್ ಸಾಹಸಿ ಸವಾರಿ ಮಾಡಲಿದ್ದಾನೆ. ಈ ಬೈಕುಗಳಲ್ಲಿ ವಿವಿಧ ಗ್ಯಾಡ್ಜೆಟುಗಳು, ಅದೃಷ್ಯ ಗನ್ ಗಳು ಇರಲಿವೆಯಂತೆ.
ಸ್ಕೈಫಾಲ್ ಚಿತ್ರದಲ್ಲಿ ಬೈಕಿನಲ್ಲಿ ಹಲವು ಸಾಹಸ ಪ್ರಧಾನ ದೃಷ್ಯಗಳನ್ನು ನಿರೀಕ್ಷಿಸಬಹುದು. ಇಸ್ತಾನ್ ಬುಲ್, ಅದಾನಾ, ಟರ್ನಿ ಮುಂತಾದ ನಗರಗಳಲ್ಲಿ ಹೋಂಡಾ ಬೈಕಿನೊಂದಿಗೆ ಶೂಟಿಂಗ್ ಭರದಿಂದ ಸಾಗುತ್ತಿದೆಯಂತೆ.
ಸ್ಕೈಫಾಲ್ ಚಿತ್ರದ ಆರಂಭದ ದೃಷ್ಯದಲ್ಲಿ ಹೋಂಡಾ ಬೈಕ್ ಇರಲಿದೆ. ಈ ಬೈಕನ್ನು ಟರ್ಕಿಸ್ ಬೈಕಿನಂತೆ ಮಾಡಿಫೈ ಮಾಡಲಾಗಿದೆ. ಇಂಗ್ಲೆಂಡಿನ ಮ್ಯೂಸಿಯಂ ಒಂದರಲ್ಲಿ ಈ ಬೈಕನ್ನು ಪ್ರದರ್ಶಿಸಲಾಗಿದೆ. ಹೋಂಡಾ ಕಂಪನಿಯು ಸುಮಾರು 20 ಬೈಕುಗಳನ್ನು ಚಿತ್ರತಂಡಕ್ಕೆ ನೀಡಿದೆಯಂತೆ.
ಹೋಂಡಾ ಸಿಆರ್ ಎಫ್250ಆರ್ ಡರ್ಟ್ ಬೈಕಾಗಿದ್ದು, 249 ಸಿಸಿ ಮತ್ತು 4 ಸ್ಟ್ರೋಕ್ ಎಂಜಿನ್ ಹೊಂದಿದೆ. ಸದ್ಯ ಈ ಬೈಕ್ ದೇಶದಲ್ಲಿ ಮಾರಾಟವಾಗುತ್ತಿಲ್ಲ.


Click it and Unblock the Notifications









