ಬಜಾಜ್ ಕೆಟಿಎಂ ಡ್ಯೂಕ್ 200 ಬೈಕ್‌ಗೆ 2 ನೂತನ ಬಣ್ಣಗಳ ಸೇರ್ಪಡೆ
ಗ್ರಾಹಕರ ಬೇಡಿಕೆಗಳ ಅನುಸಾರವಾಗಿ ಬಜಾಜ್ ಕಿಟಿಎಂ ಡ್ಯೂಕ್ 200 ಬೈಕ್ ಹೊಸ ಎರಡು ಬಣ್ಣಗಳೊಂದಿಗೆ ಲಭ್ಯವಾಗಲಿದೆ. ಇದರೊಂದಿಗೆ ಮಾರಾಟದಲ್ಲೂ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಬಜಾಜ್ ಹೊಂದಿದೆ. ಈ ಮೊದಲು ಕಿತ್ತಳೆ ಬಣ್ಣದ ಸ್ಟ್ರೈಕಿಂಗ್ ಸಹಿ ಹೊಂದಿರುವ ಕಿಟಿಎಂ ಡ್ಯೂಕ್ ಬೈಕ್ ಅನ್ನು ಪರಿಚಯ ಮಾಡಲಾಗಿತ್ತು. ಆದರೆ ಇದೀಗ ಎರಡು ವಿಭಿನ್ನ ಬಣ್ಣಗಳನ್ನು ಸೇರ್ಪಡೆಗೊಳಿಸಲಾಗಿದೆ.
ಕಿತ್ತಳೆ ಬಣ್ಣದ ಸ್ಟ್ರೈಕಿಂಗ್ ಸಹಿ ನಿಮಗೆ ಇಷ್ಟವಾಗಿದೆಯೇ..? ಒಂದು ವೇಳೆ ಇಷ್ಟವಾಗಿರದೇ ಹೋದ್ದಲ್ಲಿ ನಿಮಗೆ ಇನ್ನೆರಡು ಬಣ್ಣಗಳನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ಕೆಳಗೆ ಕೊಟ್ಟಿರುವ ಚಿತ್ರದಲ್ಲಿರುವಂತೆಯೇ ಬಿಳಿ ಹಾಗೂ ಕಪ್ಪು ಬಣ್ಣಗಳಲ್ಲೂ ನೂತನ ಕಿಟಿಎಂ ಡ್ಯೂಕ್ ಬೈಕ್ ಲಭ್ಯವಿರಲಿದೆ.
ಮೂಲತ: ಆಸ್ಟ್ರೀಯಾ ಮೋಟಾರ್ ಸೈಕಲ್ ತಯಾರಕ ಕಂಪನಿ ಆಗಿರುವ ಕಿಟಿಎಂ ಪವರ್ ಸ್ಪೋರ್ಟ್‌ನಲ್ಲಿ ಶೇಕಡಾ 47ರಷ್ಟು ಪಾಲನ್ನು ಬಜಾಜ್ ಹೊಂದಿದೆ. ನೂತನ ಡ್ಯೂಕ್ 200 ಸಿಂಗಲ್ ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡಲಿದ್ದು, ಲಿಕ್ವಿಡ್ ಕೂಲ್ 200 ಸಿಸಿ ಎಂಜಿನ್ ಹೊಂದಿದೆ. ಇದು 250 ಹಾರ್ಸ್ ಪವರ್ ಮತ್ತು 19ಎನ್ ಎಂ ಟಾರ್ಕ್ ಪವರ್ ನೀಡಲಿದೆ.


Click it and Unblock the Notifications









