ಬಾ ಮಳೆಯೇ ಬಾ.. ನನ್ನ ಬೈಕಿಗೆ ಕವರ್ ಇದೆ!

ಮಳೆರಾಯ ಬಂದಾಗಿದೆ. ಧೋ.. ಎಂದು ಸುರಿವ ಮಳೆಯ ಥಂಡಿಯಿಂದ ಪಾರಾಗಲು ನೀವು ಬೆಚ್ಚಗಿನ ಉಡುಪು ಧರಿಸಬಹುದು. ಅಥವಾ ನಿಮ್ಮಲ್ಲಿ ರೇನ್ ಕೋಟ್, ಕೊಡೆ ಇರಬಹುದು. ಇಲ್ಲದಿದ್ದರೆ ಹಾಳಾದ ಶೀತ, ಕೆಮ್ಮು, ಜ್ವರ ಗ್ಯಾರಂಟಿ. ಅದೇ ರೀತಿ ಮಳೆಗಾಲದಲ್ಲಿ ನಿಮ್ಮ ಪ್ರೀತಿಯ ಬೈಕಿಗೂ ರೇನ್ ಕೋಟ್, ಅಂಗಿ, ಉಡುಪು ಅಥವಾ ಹೊದಿಕೆಯಾದರೂ ಹೊದೆಸಲೇ ಬೇಕು. ಇಲ್ಲದಿದ್ದರೆ ಬೈಕ್ ಆರೋಗ್ಯ ಕೆಡಬಹುದು.

ಈ ಮುಂಗಾರು ಮಳೆಗೆ ಅಚ್ಚುಮೆಚ್ಚಿನ ಬೈಕನ್ನು ಹೇಗೆ ಕಾಪಾಡಿಕೊಳ್ಳುವುದೆಂದು ನೀವು ತಲೆಕೆಡಿಸಿಕೊಂಡಿದ್ದರೆ ಇಲ್ಲೊಂದು ಬೈಕ್ ಕವರ್ ಇದೆ. ಇದನ್ನು ಆಸ್ಟ್ರೀಯದ ಬೈಕ್ ತಯಾರಿಕಾ ಕಂಪನಿ ಕೆಟಿಎಂ ಪರಿಚಯಿಸಿದೆ. ನೂತನ ಔಟ್ ಡೋರ್ ಬೈಕ್ ಕವರ್ ಕಂಪನಿಯ ಎಲ್ಲಾ ಶೋರೂಂಗಳಲ್ಲೂ ದೊರಕುತ್ತದೆಯಂತೆ.

ಆರೆಂಜ್ ಬಣ್ಣದ ಈ ಬೈಕ್ ಕವರ್ ಕೆಟಿಎಂ ಲೊಗೊ ಹೊಂದಿದೆ. ಕಂಪನಿಯು ಇದನ್ನು ಬಜಾಜ್ ಕೆಟಿಎಂ ಡ್ಯೂಕ್ ಬೈಕಿಗಾಗಿ ತಯಾರಿಸಿದೆ. ಹಾಗಂತ ಉಳಿದ ಬೈಕುಗಳಿಗೆ ಬಳಸಲಾಗದು ಎಂದುಕೊಳ್ಳಬೇಡಿ. ನಿಮ್ಮಲ್ಲಿರುವ ಯಾವುದೇ ಬೈಕಿಗೂ ಈ ಕವರ್ ಬಳಸಬಹುದು.

ಇದು ಬರೀ ಮಳೆಗಾಲಕ್ಕೆ ಮಾತ್ರನಾ ಎಂದು ಮೂಗು ಮುರಿಯಬೇಡಿ. ವರ್ಷದ ಹನ್ನೆರಡು ತಿಂಗಳೂ ಬಳಸಬಹುದು. ಮರದಡಿ ನಿಲ್ಲಿಸಿದರೆ ಹಕ್ಕಿಹಿಕ್ಕೆಯಿಂದಲೂ ಇದು ನಿಮ್ಮ ಬೈಕನ್ನು ಪಾರು ಮಾಡುತ್ತದೆ. ಬೈಕಿನೊಳಗೆ ಯಾವುದೇ ಧೂಳು, ಕಸ ಹೋಗದಂತೆ ರಕ್ಷಿಸುತ್ತದೆ.

ಕೆಟಿಎಂ ಬೈಕ್ ಕವರನ್ನು ಮಡುಚಿಡಲು ಸಣ್ಣ ಬ್ಯಾಗ್ ಸಾಕು. ಎಲ್ಲಿ ಹೋದರೂ ತೆಗೆದುಕೊಂಡು ಹೋಗಲು ಇದರ ಸಣ್ಣ ಗಾತ್ರ ನೆರವಾಗುತ್ತದೆ. ಕೆಟಿಎಂ ಬೈಕ್ ಹೆಸರು ಕೇಳಿ ಈ ಕವರ್ ದರವೂ ದುಬಾರಿಯಾಗಿರಬಹುದು ಎಂದು ಭಾವಿಸಬೇಡಿ. ಸುಮಾರು 720 ರುಪಾಯಿಗೆ ಈ ಕವರ್ ದೊರಕುತ್ತದೆ. ನಿಮ್ಮ ಬೈಕಿಗೆ ಈ ಕವರ್ ಹಾಕಿದ್ಮೇಲೆ ಬಾ... ಮಳೆಯೇ ಬಾ... ಎಂದು ಹಾಡು ಆರಂಭಿಸಿ.

More from DriveSpark

Article Published On: Friday, June 22, 2012, 14:35 [IST]
English summary
If you were wondering how you should protect your bike from the monsoon rains, Austrian bike manufacturer KTM has the solution. KTM has launched a new protective outdoor bike cover. This new outdoor bike cover is available in KTM's trademark stunning orange colour and has KTM logos on it. Although it has been designed for the KTM Duke 200, the outdoor cover can be used on other bikes too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+