ಐಕಾನಿಕ್ ವೆಸ್ಪಾ ಸ್ಕೂಟರ್ ಬಂದಿದೆ, ಸೆಲೆಕ್ಟ್ ಮಾಡಿಕೊಳ್ಳಿ

ಐಕಾನಿಕ್ ವೆಸ್ಪಾ ಇಲ್ಲಿಗೆ ಬರುತ್ತಿರುವುದು ಇದು ಮೂರನೇ ಬಾರಿ. ಪಿಯಾಜಿಯೊ ಕಂಪನಿಯು ಬಜಾಜ್ ಆಟೊ ಸಹಭಾಗಿತ್ವದಲ್ಲಿ 1960ರಲ್ಲಿ ವೆಸ್ಪಾ ಸ್ಕೂಟರ್ ಉತ್ಪಾದಿಸಲು ಆರಂಭಿಸಿತ್ತು. ಆದರೆ 1971ರಲ್ಲಿ ಇಂದಿರಾ ಗಾಂಧಿಯವರ ಖಾಸಗೀಕರಣ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪಿಯಾಜಿಯೊ ಪರವಾನಿಗೆ ರದ್ದಾಗಿತ್ತು.
ಸಹಭಾಗಿತ್ವ ಕೊನೆಗೊಂಡ ನಂತರ ಚೇತಕ್ ಹೆಸರಿನಲ್ಲಿ ಬಜಾಜ್ ಜೊತೆ ಉತ್ಪಾದನೆ ಮುಂದುವರೆಸಿತ್ತು. 1983ರಲ್ಲಿ ಎಲ್ ಎಂ ಎಲ್ ಮೋಟಾರ್ಸ್ ನೊಂದಿಗಿನ ಸಹಭಾಗಿತ್ವದಲ್ಲಿ ದೇಶದಲ್ಲಿ ಮತ್ತೆ ವೆಸ್ಪಾ ಇಲ್ಲಿಗೆ ಬಂದಿತ್ತು. ಕಳೆದ 2007ರಲ್ಲಿ ಮತ್ತೆ ಭಾರತಕ್ಕೆ ಬರುವುದಾಗಿ ಪಿಯಾಜಿಯೊ ಹೇಳಿತು. ಎಲ್ಎಂಎಲ್ ಕಂಪನಿಯು 2010ರಲ್ಲಿ ಮತ್ತೆ ವೆಸ್ಪಾ ಸ್ಕೂಟರ್ ಉತ್ಪಾದನೆಗೆ ಮುಂದಾಗಿತ್ತು.
ವೆಸ್ಪಾ ಸೆಲೆಕ್ಟ್ ಸ್ಕೂಟರ್ ವಿಶೇಷತೆ
* ಎಂಜಿನ್ ಸಿಸಿ: 147.55
* ಪವರ್: 6,250 ಆರ್ ಪಿಎಂಗೆ 6.5 ಕಿ.ವ್ಯಾ
* ಟಾರ್ಕ್ ಪವರ್: 4,250 ಆರ್ ಪಿಎಂಗೆ 11.3 ಎನ್ಎಂ
* ಗೇರ್: 4 ಸ್ಪೀಡ್ ಮ್ಯಾನುಯಲ್
* ಬ್ರೇಕ್: ಡ್ರಮ್
* ಇಂಧನ ಟ್ಯಾಂಕ್ ಸಾಮರ್ಥ್ಯ: 5.5 ಲೀಟರ್
ನೂತನ ವೆಸ್ಪಾ ಸೆಲೆಕ್ಟ್ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 80 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವ ನಿರೀಕ್ಷೆಯಿದೆ. ಹಳೆಯ ವೆಸ್ಪಾಕ್ಕೆ ಹೋಲಿಸಿದರೆ ಹಲವು ಬದಲಾವಣೆಗಳನ್ನು ಕಾಣಬಹುದು. ಕ್ಲೀಯರ್ ಲೆನ್ಸ್ ಹೆಡ್ ಲೈಟ್, ಆರೆಂಜ್ ಬಣ್ಣದ ಬಲ್ಬ್ ಮತ್ತು ಬಿಳಿ ಬಣ್ಣದ ಟರ್ನ್ ಇಂಡಿಕೇಟರ್, ಮೆಟಾಲಿಕ್ ಪೇಂಟ್ ಮತ್ತು ನೂತನ ವಿನ್ಯಾಸದ ಇನ್ಸಟ್ರುಮೆಂಟ್ ಕನ್ಸೋಲ್ ಇತ್ಯಾದಿ ನೂತನ ಬದಲಾವಣೆಯೊಂದಿಗೆ ಸೆಲೆಕ್ಟ್ ಸ್ಕೂಟರ್ ಆಗಮಿಸಿದೆ.


Click it and Unblock the Notifications








