ಕ್ರಿಕೆಟಿಗ ಧೋನಿ ಲೇಟೆಸ್ಟ್ ಬೈಕ್, ನರಕದ ಬೆಕ್ಕು!

ಕ್ರಿಕೆಟ್ ತಾರೆ ಮಹೀಂದ್ರ ಸಿಂಗ್ ಧೋನಿ ವಾಹನ ಲೋಕಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಇದೀಗ ಧೋನಿ ಅತ್ಯಧಿಕ ಕಾರ್ಯಕ್ಷಮತೆಯ ಎಕ್ಸ್132 ಹೆಲ್ ಕ್ಯಾಟ್ಟ್ ಸೂಪರ್ ಬೈಕನ್ನು ಖರೀದಿಸಿದ್ದಾರೆ. ಇದರಿಂದಾಗಿ ಇವರಲ್ಲಿರುವ ಬೈಕುಗಳ ಸಂಖ್ಯೆ ಭರ್ತಿ ಹದಿನಾರಕ್ಕೆ ತಲುಪಿದೆ.

ಮಹೀಂದ್ರ ಸಿಂಗ್ ಧೋನಿಯ ಕಾರು ಮತ್ತು ಬೈಕ್ ಪ್ರೇಮದ ಸಮಚಾರ ರಹಸ್ಯವೇನೂ ಅಲ್ಲ. ಅವರಲ್ಲಿ ಹತ್ತು ಕಾರು ಮತ್ತು ಹದಿನಾರು ಬೈಕುಗಳಿವೆ. ಏಪ್ರಿಲ್ ತಿಂಗಳಲ್ಲಿ ಖರೀದಿಸಿದ ನೂತನ ಹೆಲ್‌ಕ್ಯಾಟ್ ಬೈಕ್ ತನ್ನ ಆಕರ್ಷಕ ವಿನ್ಯಾಸದಿಂದ ಗಮನಸೆಳೆಯುತ್ತದೆ. ಕೈಯಿಂದ ನಿರ್ಮಿಸಿರುವ ಈ ಬೈಕ್ ಅತ್ಯುತ್ತಮ ಕಾರ್ಯಕ್ಷಮತೆಯ ಮೆಷಿನ್ ಕೂಡ ಹೌದು. ಞ

ನೂತನ ಹೆಲ್ ಕ್ಯಾಟ್ ಬೈಕ್ 2,163 ಸಿಸಿಯ ವಿಟ್ವಿನ್ ಎಂಜಿನ್ ಹೊಂದಿದೆ. ಇದು 150 ಎನ್ಎಂ ಟಾರ್ಕ್ ಪವರ್ ಮತ್ತು 132 ಹಾರ್ಸ್ ಪವರ್ ನೀಡುತ್ತದೆ. ಇದು ಐದು ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿದೆ. ಇದರ ದರ 49 ಸಾವಿರ ಡಾಲರ್. ಅಂದರೆ ಅಂದಾಜು 27.56 ಲಕ್ಷ ರುಪಾಯಿ.

ವಿಶೇಷವೆಂದರೆ ಏಷ್ಯಾದಲ್ಲೇ ಈ ಬೈಕ್ ಖರೀದಿಸಿದವರಲ್ಲಿ ಧೋನಿ ಮೊದಲಿಗ. ಮಹೀಂದ್ರ ಸಿಂಗ್ ಧೋನಿ ಶೀಘ್ರದಲ್ಲಿ ಈ ಬೈಕ್ ಮೂಲಕ ರಾಂಚಿಯಲ್ಲಿರುವ ತನ್ನ ಮನೆಗೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ. ಈತನ ಎರಡು ಬೈಕುಗಳು ಚೆನ್ನೈನಲ್ಲಿವೆ. ಎರಡು ಬೈಕುಗಳನ್ನು ಧೋನಿ ಮುಂಬೈನಲ್ಲಿಟ್ಟಿದ್ದಾನೆ.

ಮಹೀಂದ್ರ ಸಿಂಗ್ ಧೋನಿಯಲ್ಲಿ ಹಮ್ಮರ್ ಎಚ್3 ಸೇರಿದಂತೆ ಒಟ್ಟು ಒಂಬತ್ತು ಕಾರುಗಳಿವೆ. ಇಂಗ್ಲೆಂಡಿನ ಮಾಜಿ ಪುಟ್ಬಾಲ್ ಆಟಗಾರ ಡೇವಿಡ್ ಬೆಕ್ಹಾಮ್ ಬಳಿಯೂ ಹೆಲ್‌ಕ್ಯಾಟ್ ಬೈಕಿತ್ತು.

More from DriveSpark

Article Published On: Friday, June 1, 2012, 15:02 [IST]
English summary
Dhoni Buys Himself A Hell Cat X132. It is no secret that Indian cricket captain Mahendra Singh Dhoni is an avid car and bike lover. He has a huge collection of vehicles which include 10 cars and 16 motorcycles. The latest vehicle to enter Dhoni’s stables is a Hellcat X132 super bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+