ಮಹೀಂದ್ರ ಕಂಪನಿಯ ಎರಡು ಚಕ್ರದ ಕನಸುಗಳು

ಮಹೀಂದ್ರ ಕಂಪನಿಯ ಕಾರು, ಎಂಪಿವಿ, ವಿಮಾನ ಎಲ್ಲವೂ ಯಶಸ್ವಿಯಾಗಿದೆ. ಆದರೆ ಕಂಪನಿಯು ದ್ವಿಚಕ್ರ ವಾಹನ ವಹಿವಾಟು ಅಷ್ಟೇನೂ ಯಶಸ್ವಿಯಾಗಿಲ್ಲ. ಕಂಪನಿಯು ಸ್ಟಾಲಿಯೊ ಬೈಕನ್ನು ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಿಂದ ಮಾರುಕಟ್ಟೆಯಿಂದ ವಾಪಸ್ ಪಡೆದುಕೊಂಡಿತ್ತು.

ಇದೀಗ ಜಗತ್ತಿನ ಬೃಹತ್ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಪಾಲು ಪಡೆಯಲು ಮಹೀಂದ್ರ ನಿರ್ಧರಿಸಿದೆ. ದ್ವಿಚಕ್ರ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ ಸುಮಾರು 500 ಕೋಟಿ ರುಪಾಯಿ ಹೂಡಿಕೆ ಮಾಡುವ ಯೋಜನೆ ಕಂಪನಿ ಹೊಂದಿದೆ. ಕಂಪನಿಯು ಈಗಾಗಲೇ ಮಧ್ಯಪ್ರದೇಶದಲ್ಲಿ ಸ್ಕೂಟರ್ ಮತ್ತು ಬೈಕ್ ಉತ್ಪಾದನಾ ಘಟಕ ನಿರ್ಮಾಣ ಮಾಡಿದೆ. ಇದರ ವಾರ್ಷಿಕ ಉತ್ಪಾದನೆ ಸಾಮರ್ಥ್ಯ 10 ಲಕ್ಷ ಯುನಿಟ್.

"ನಾವು ದ್ವಿಚಕ್ರ ವಾಹನ ಮಾರುಕಟ್ಟೆಗೆ ಮಾಡುವ ಹೂಡಿಕೆಯನ್ನು ಮುಂದುವರೆಸಲಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಕಂಪನಿಯ ದ್ವಿಚಕ್ರ ವಾಹನ ತಂತ್ರಜ್ಞಾನವು ಬಹಳಷ್ಟು ಸುಧಾರಿಸಿದೆ. ಕಂಪನಿಯ ಉತ್ಪಾದನಾ ಘಟಕಗಳನ್ನು ಅಪ್ ಗ್ರೇಡ್ ಮಾಡಲಾಗಿದೆ" ಎಂದು ಮಹೀಂದ್ರ ದ್ವಿಚಕ್ರ ವಾಹನ ವಿಭಾಗದ ಅಧ್ಯಕ್ಷರಾದ ಅನೂಪ್ ಮಾಥೂರ್ ಹೇಳಿದ್ದಾರೆ.

ಇದರೊಂದಿಗೆ ಕಂಪನಿಯು ಸ್ಟಾಲಿಯೊ ಮತ್ತು ಮೊಜೊ ಬೈಕನ್ನು ಮರುನಿರ್ಮಿಸಲಿದೆ. ಇವೆರಡು ಬೈಕುಗಳು ಮುಂದಿನ ಕೆಲವೇ ತಿಂಗಳಲ್ಲಿ ಮತ್ತೆ ರಸ್ತೆಗಿಳಿಯಲಿದೆ. "ಕಂಪನಿಯು 2015-16ರ ಗುರಿ ಸಾಧನೆಯ ಯೋಜನೆಗಳನ್ನು ಹೊಂದಿದ್ದು, ಈ ಸಮಯದಲ್ಲಿ ಸುಮಾರು 10-12 ಹೊಸ ವಾಹನಗಳನ್ನು ಪರಿಚಯಿಸಲಿದ್ದೇವೆ" ಎಂದು ಮಹೀಂದ್ರ ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಹಿರಿಯ ಉಪಾಧ್ಯಕ್ಷರಾದ ವಿರೆನ್ ಪೊಪ್ಲಿ ಹೇಳಿದ್ದಾರೆ.

More from DriveSpark

Article Published On: Wednesday, May 23, 2012, 14:26 [IST]
English summary
India's largest utility vehicle manufacturer, Mahindra has not been successful enough in the two-wheeler business. The company had to withdraw its Stallio motorcycle due to technical glitches.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+