ಮಾರುತಿ ಎರ್ಟಿಗಾಗೆ 'ವರ್ಷದ ಫ್ಯಾಮಿಲಿ ಕಾರು' ಗೌರವ
ದೇಶದ ಮುಂಚೂಣಿಯ ಆಟೋಮೊಬೈಲ್ ಮ್ಯಾಗಜಿನ್ ಬಿಬಿಸಿ ಟಾಪ್ ಗೇರ್ ಇಂಡಿಯಾ ಬಿಡುಗಡೆಗೊಳಿಸಿದ 'ವರ್ಷದ ಫ್ಯಾಮಿಲಿ ಕಾರು 2012' ಗೌರವಕ್ಕೆ ಮಾರುತಿ ಸುಜುಕಿ ಇಂಡಿಯಾದ ಎರ್ಟಿಗಾ ಕಾರು ಪಾತ್ರವಾಗಿದೆ.
ಅತಿಶ್ರೇಷ್ಠ ಕಾಂಪಾಕ್ಟ್ ವಿನ್ಯಾಸ ಹೊಂದಿರುವ ಮಾರುತಿಯ ಎರ್ಟಿಗಾ ಮೂರು ಸಿಟ್ಟಿಂಗ್ ಸಾಲು ಹೊಂದಿದೆ. ಪ್ರಶಸ್ತಿ ಸಮಾರಂಭದಲ್ಲಿ ಮಾರುತಿಯ ಕಾರ್ಯನಿರ್ವಾಹಕ ನಿರ್ದೇಶಕ (ಎಂಜಿನಿಯರ್) ಸಿವಿ ರಾಮನ್ ಪ್ರಶಸ್ತಿ ಸ್ವೀಕರಿಸಿದರು.
ಕಳೆದ ಎಪ್ರಿಲ್ ತಿಂಗಳಲ್ಲಿ ಲಾಂಚ್ ಆಗಿದ್ದ ಎರ್ಟಿಗಾ ಭಾರತೀಯ ಆಟೋಮೊಬೈಲ್ ಜಗತ್ತಿನ ಯುಟಿಲಿಟಿ ಸೆಗ್ಮೆಂಟ್‌ನಲ್ಲಿ ಎಂಟ್ರಿ ಮಾಡಿತ್ತು. ಕಾಂಪಾಕ್ಟ್ ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್‌ನಲ್ಲಿ ಎರ್ಟಿಗಾ ನೂತನ ಹೆಸರಿಗೆ ಕಾರಣವಾಗಿತ್ತು. ಪ್ರಮುಖವಾಗಿಯೂ ನಗರ ಪ್ರದೇಶದ ಫ್ಯಾಮಿಲಿಯನ್ನು ಗುರಿಯಾಗಿರಿಸಿ ಹೆಚ್ಚು ಇಂಧನ ಕ್ಷಮತೆಯ ಎರ್ಟಿಗಾ ಬಿಡುಗಡೆ ಮಾಡಲಾಗಿತ್ತು.
ಇದನ್ನೇ ಉಲ್ಲೇಖಿಸಿರುವ ಪ್ರಮುಖ ಮ್ಯಾಗಜೀನ್ ಕಾಂಪಾಕ್ಟ್ ಡೈಮಷನ್, ಲೈಟ್ ಕಂಟ್ರೋಲ್, ಇಂಧನ ದಕ್ಷತೆಯು ಫ್ಯಾಮಿಲಿ ಕಾರು ಆದ ಎರ್ಟಿಗಾ ಹೆಚ್ಚು ಆಕರ್ಷಿಸುವಂತೆ ಮಾಡಿದೆ.
ಎರ್ಟಿಗಾ ಪೆಟ್ರೋಲ್ ಆವೃತ್ತಿಯು 1.4 ಲೀಟರ್ ಕೆ ಸಿರೀಸ್ ವಿವಿಟಿ ಹಾಗೂ ಡೀಸೆಲ್ ಆವೃತ್ತಿಯು 1248 ಸಿಸಿ ಡಿಡಿಐಎಸ್ ವಿಜಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಹಾಗೆಯೇ 5+2 (2+3+2) ಜನರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ.
ನೂತನ ಎರ್ಟಿಗಾ ಕಾರಿನ ದರ ಆಕರ್ಷಕವಾಗಿದೆ. ಎರ್ಟಿಗಾ ದರ 5.89 ರು.ನಿಂದ 8.45 ಲಕ್ಷ ರುಪಾಯಿವರೆಗಿದೆ. ಮಾರುತಿ ಸುಜುಕಿ ರಿಟ್ಜ್ ಪ್ಲಾಟ್‌ಫಾರ್ಮ್‌ನಲ್ಲಿ ಬಂದಿರುವ ಎರ್ಟಿಗಾ ಮೊದಲ ನೋಟಕ್ಕೆ ಗಮನಸೆಳೆಯುವಂತಿದೆ. ಹೊಸ ಮಾರುತಿ ಸುಜುಕಿ ಎರ್ಟಿಗಾ ಆರುಬಣ್ಣಗಳ ಆಯ್ಕೆಯಲ್ಲಿ ದೊರಕುತ್ತದೆ.ನೂತನ ಮಾರುತಿ ಸುಜುಕಿ ಎರ್ಟಿಗಾ ಡ್ಯಾಷ್ ಬೋರ್ಡ್, ಸ್ಟಿಯರಿಂಗ್ ವೀಲ್ ಇತ್ಯಾದಿ ಫೀಚರುಗಳಿವೆ. ಕಾರಿನ ಇಂಟಿರಿಯರೊಳಗೆ ಹಗುರ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು ಆಕರ್ಷಕವಾಗಿ ಕಾಣುತ್ತದೆ.

ದೇಶದ ಮುಂಚೂಣಿಯ ಆಟೋಮೊಬೈಲ್ ಮ್ಯಾಗಜಿನ್ ಬಿಬಿಸಿ ಟಾಪ್ ಗೇರ್ ಇಂಡಿಯಾ ಬಿಡುಗಡೆಗೊಳಿಸಿದ 'ವರ್ಷದ ಫ್ಯಾಮಿಲಿ ಕಾರು 2012' ಗೌರವಕ್ಕೆ ಮಾರುತಿ ಸುಜುಕಿ ಇಂಡಿಯಾದ ಎರ್ಟಿಗಾ ಕಾರು ಪಾತ್ರವಾಗಿದೆ

ಮಾರುತಿ ಸುಜುಕಿ ಎರ್ಟಿಗಾ












Click it and Unblock the Notifications








