ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಗಮನ
ದ್ವಿಚಕ್ರ ವಾಹನಗಳ ರಾಜನೆಂದೇ ಖ್ಯಾತಿ ಪಡೆದಿರುವ ರಾಯಲ್ ಎನ್‌ಫೀಲ್ಡ್ ನೂತನ ಆವಿಷ್ಕಾರದೊಂದಿಗೆ ಮಾರುಕಟ್ಟೆಗೆ ಆಗಮನವಾಗಿದ್ದು, ಥಂಡರ್‌ಬರ್ಡ್ 500 ಸಿಸಿ ಹಾಗೂ 350 ಸಿಸಿಗಳೆಂಬ ಎರಡು ಆವೃತ್ತಿಗಳಲ್ಲಿ ಲಭ್ಯವಾಗಿದೆ. ಈ ಎರಡು ಬುಲೆಟ್‌ಗಳ ವೈಶಿಷ್ಟ್ಯಗಳಿಗಾಗಿ ಕೆಳಗಡೆ ಕಣ್ಣಾಯಿಸಿ.
- ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ದರ - 1.82 ಲಕ್ಷ ರು.
- ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350 ದರ - 1.43 ಲಕ್ಷ ರು.
(ಈ ದರಗಳು ಆನ್‌ರೋಡ್ ಮುಂಬೈನಲ್ಲಿ)
ಎಲೆಕ್ಟ್ರಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್, ಪ್ರೊಜೆಕ್ಷನ್ ಟೈಪ್ ಹೆಡ್‌ಲ್ಯಾಂಪ್, ಡಿಜಿಟಲ್ ಎಲೆಕ್ಟ್ರಾನಿಕ್ ಇಗ್ನಿಷನ್, ಡೇ ಟೈಮ್ ರನ್ನಿಂಗ್ ಲೈಟ್, ಎಲ್‌ಇಡಿ ಟೈಲ್ ಲ್ಯಾಂಪ್, ವಿಭಜಿತ ಸೀಟ್, 240 ಎಂಎಂ ಡಿಸ್ಕ್ ಬ್ರೇಕ್ ಹಾಗೂ 20 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಬೈಕ್ ಹೊಂದಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಒಂದು ಲಕ್ಷ ಮ್ಯಾಜಿಕಲ್ ಮಾರಾಟ ಸಂಖ್ಯೆಯನ್ನು ತಲುಪುವ ನಿರೀಕ್ಷೆಯನ್ನು ರಾಯನ್ ಎನ್‌ಫೀಲ್ಡ್ ಕಂಪೆನಿಯ ಮಾಲಿಕತ್ವ ಹೊಂದಿರುವ ಐಶರ್ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಮುಖ್ಯಸ್ಥ ಸಿದ್ಧಾರ್ಥ ಲಾಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಸಂಖ್ಯೆ ಕುಸಿತವಾಗುತ್ತಿರುವ ನಡುವೆಯೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಯಶಸ್ವಿಯಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೋಟಾರ್‌ಸೈಕಲ್ ಮಾರಾಟ ಶೇಕಡ 19ರಷ್ಟು ಕುಸಿದಿದ್ದರೆ ಕಾರು ಮಾರಾಟವು ಶೇ. 5.4ರಷ್ಟು ಹಿಂಬಡ್ತಿಗೆ ಒಳಗಾಗಿತ್ತು. ಹಾಗಿದ್ದರೂ ಕಳೆದ ಆರ್ಥಿಕ ಸಾಲಿನಲ್ಲಿ 75,000 ಘಟಕಗಳಿಂದಾಗಿ ರಾಯಲ್ ಎನ್‌ಫೀಲ್ಡ್ ಶೇಕಡ 50ರಷ್ಟು ಏರುಗತಿ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಥಂಡರ್‌ಬರ್ಡ್ 500 - ಚಾಸಿ ಮತ್ತು ಸಸ್ಪೆನ್ಷನ್
ಮಾದರಿ- ಸಿಂಗಲ್ ಡೌನ್‌ಟ್ಯೂಬ್,
ಮುಂಭಾಗದ ಸಸ್ಪೆನ್ಷನ್- ಟೆಲಿಸ್ಕೋಪಿಕ್, 41ಎಂಎಂ ಫೋರ್ಕ್ಸ್, 130ಎಂಎಂ ಟ್ರಾವೆಲ್
ಹಿಂಭಾಗದ ಸಸ್ಪೆನ್ಷನ್- 5 ಹಂತದ ಹೊಂದಾಣಿಕೆ ಸಾಮರ್ಥ್ಯದ ಟ್ವಿನ್ ಗ್ಯಾಸ್ ಚಾರ್ಜ್ಡ್ ಷಾಕಬ್ಸರ್ಬರ್, 80ಎಂಎಂ ಟ್ರಾವೆಲ್

ಥಂಡರ್‌ಬರ್ಡ್ 500 - ಬ್ರೇಕ್ ಆಂಡ್ ಟಯರ್ಸ್
ಟಯರ್ Fr- 90/90-19, 52ಪಿ ಎಂಆರ್‌ಎಫ್ Zapper ಎಫ್‌ಎಂ
ಟೈಯರ್ಸ್ Rr- 120/80-18, 62ಪಿ ಎಂಆರ್ಎಫ್ Zapper ಸಿ
ಬ್ರೇಕ್ಸ್ ಫ್ರಂಟ್- 280ಎಂಎಂ ಡಿಸ್ಕ್, 2-ಪಿಸ್ತಾನ್ ಕ್ಯಾಲಿಪೆರ್
ಬ್ರೇಕ್ಸ್ ರಿಯರ್- 240ಎಂಎಂ ಡಿಸ್ಕ್, ಸಿಂಗಲ್ ಪಿಸ್ತಾನ್ ಕ್ಯಾಲಿಪೆರ್

ಥಂಡರ್‌ಬರ್ಡ್ 500 - ಎಲೆಕ್ಟ್ರಿಕಲ್
ಎಲೆಕ್ಟ್ರಿಕಲ್ ಸಿಸ್ಟಮ್- 12 ವೋಲ್ಟ್- ಡಿಸಿ
ಬ್ಯಾಟರಿ- 12 ವೋಲ್ಟ್, 14 Ah
ಹೆಡ್ ಲ್ಯಾಂಪ್- ಪ್ರೊಜೆಕ್ಷನ್ ಟೈಪ್ ಹೆಡ್‌ಲ್ಯಾಂಪ್, ಎಚ್7 55 / 55 ಡಬ್ಲ್ಯು
ಟೈಲ್ ಲ್ಯಾಂಪ್- ಎಲ್‌ಇಡಿ ಲ್ಯಾಂಪ್, ಪೊಜಿಷನ್ ಲೈಟ್ ಗೈಡ್
ಟರ್ನ್ ಸಿಂಗಲ್ ಲ್ಯಾಂಪ್- ಭಾರತ ಮೋಟಾರ್ ಇತಿಹಾಸದಲ್ಲಿ ಮೊದಲ ಬಾರಿಗೆ ಹಾಜಾರ್ಡ್ ಲೈಟ್ ಫೀಚರ್

ಥಂಡರ್‌ಬರ್ಡ್ 500 - ಉದ್ದಳತೆ
ವೀಲ್‌ಬೇಸ್- 1350ಎಂಎಂ
ಗ್ರೌಂಡ್ ಕ್ಲಿಯರೆನ್ಸ್- 140 ಎಂಎಂ
ಉದ್ದ- 2060 ಎಂಎಂ
ಅಗಲ- 790 ಎಂಎಂ ( ಮಿರರ್ ಇಲ್ಲದೆ)
ಎತ್ತರ- 1205 ಎಂಎಂ (ಮಿರರ್ ಇಲ್ಲದೆ)
ಸೀಟ್ ಎತ್ತರ- 775 ಎಂಎಂ
ಕರ್ಬ್ ತೂಕ- 195 ಕೆ.ಜಿ

ಥಂಡರ್‌ಬರ್ಡ್ 500 & 350 ದರ
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ದರ - 1.82 ಲಕ್ಷ ರು.
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350 ದರ - 1.43 ಲಕ್ಷ ರು

ಥಂಡರ್‌ಬರ್ಡ್ 500 - ಎಂಜಿನ್ ಮಾಹಿತಿ:
ಮಾದರಿ- ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಟ್ವಿನ್ ಸ್ಪಾರ್ಕ್, ಏರ್ ಕೂಲ್ಡ್
ಡಿಸ್‌ಪ್ಲೆಸ್‌ಮೆಂಟ್- 499 ಸಿಸಿ
ಬೋರ್xಸ್ಟ್ರೋಕ್- 84ಎಂಎಂx90ಎಂಎಂ
ಕಾಂಪ್ರೆಷನ್ ರೆಷಿಯೊ- 8.5:1
ಮಾಕ್ಸಿಮಮ್ ಪವರ್- 27.2 ಬಿಎಚ್‌ಪಿ @ 525 ಆರ್‌ಪಿಎಂ
ಮಾಕ್ಸಿಮಮ್ ಟಾರ್ಕ್ಯೂ- 41. 3 ಎನ್‌ಎಂ @ 4000 ಆರ್‌ಪಿಎಂ
ಇಗ್ನಿಷನ್ ಸಿಸ್ಟಮ್- ಡಿಜಿಟಲ್ ಎಲೆಕ್ಟ್ರಾನಿಕ್ ಇಗ್ನಿಷನ್
ಕ್ಲಚ್- ವೆಟ್, ಮಲ್ಟಿ-ಪ್ಲೇಟ್
ಗೇರ್‌ಬಾಕ್ಸ್- 5 ಸ್ಪೀಡ್ ಕಾಂಸ್ಟಟ್ ಮೆಶ್
ಲುಬ್ರಿಕೇಷನ್- ವೆಟ್ ಸಂಪ್
ಎಂಜಿನ್ ಆಯಿಲ್- 15ಡಬ್ಲ್ಯು 50 ಎಪಿಐ, ಎಸ್‌ಎಲ್ ಗ್ರೇಡ್ ಜಾಸೊ ಎಂಎಂ
ಫ್ಯೂಯಲ್ ಸಪ್ಲೇ- ಕಿಹಿನ್ ಎಲೆಕ್ಟ್ರಾನಿಕ್ ಪ್ಯೂಯಲ್ ಇಂಜೆಕ್ಷನ್
ಏರ್ ಕ್ಲೀನರ್- ಪೇಪರ್ ಎಲೆಮೆಂಟ್
ಎಂಜಿನ್ ಸ್ಟಾರ್ಟ್- ಎಲೆಕ್ಟ್ರಿಕ್, ಕಿಕ್
ಇಂಧನ ಟ್ಯಾಂಕ್ ಸಾಮರ್ಥ್ಯ: 20 ಲೀಟರ್


Click it and Unblock the Notifications








