ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಜಗತ್ತಿನ ಪ್ರಾಚೀನ ಮಾದರಿಯ ವಾಹನ ತಯಾರಕ ಮತ್ತು ದೇಶಿಯ ಮಾರುಕಟ್ಟೆಯಲ್ಲಿ 300ಸಿಸಿ ಗಿಂತಲೂ ಹೆಚ್ಚಿನ ಸಾಮರ್ಥ್ಯದ ಬೈಕ್‍ಗಳ ಮಾರಟದಲ್ಲಿ ಜನಪ್ರೀಯತೆಯನ್ನು ಪಡೆದಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಕಳೆದ ಕೆಲ ತಿಂಗಳುಗಳಿಂದ ಕಡಿಮೆ ಮಟ್ಟದ ಮಾರಾಟವನ್ನು ಕಾಣುತ್ತಿದೆ. ಪ್ರಸ್ತುತ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿರುವ ಎಂಟ್ರಿ ಲೆವೆಲ್ ಬೈಕ್ 350ಸಿಸಿಯದಾಗಿದ್ದು, ಮತ್ತು ಇದರ ಬೆಲೆ ಕೂಡಾ ರೂ. 1.21 ಲಕ್ಷ ಇದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಸಧ್ಯ ಮಾರುಕಟ್ಟೆಯಲ್ಲಿ ಜಾವಾ ಬೈಕ್‍ಗಳು ಬಂದ ನಂತರ ಗ್ರಾಹಕರು ಜಾವಾ ಬೈಕ್‍ಗಳನ್ನು ಖರೀದಿ ಮಾಡುತ್ತಿರ್ವ ಕಾರಣ ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟವು ಕುಸಿಯುತ್ತಿದೆ. ಆದರೆ ಈ ಸಂಸ್ಥೆಯಲ್ಲಿನ 650 ಟ್ವಿನ್ ಬೈಕ್‍ಗಳು ಮಾತ್ರ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ತಮ್ಮ ವಾಹನಗಳ ಮಾರಾಟವನ್ನು ಹೆಚ್ಚಿಸಲು ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ಎಂದು ಆಟೋ ಪೋರ್ಟಲ್ ವರದಿಗಳು ಹೇಳುತ್ತಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಇವುಗಳ ಜೊತೆಗೆ ಕಡ್ಡಾಯ ಸುರಕ್ಷತಾ ಸಾಧನಗಳು, ಬಿಎಸ್ 6 ಕಂಪ್ಲೈಂಟ್ ಎಂಜಿನ್ ಮತ್ತು ಕಡ್ಡಾಯ ಆರಂಭಿಕ ವಿಮಾ ಅವಧಿಯ ಕಾರಣದಿಂದಾಗಿ ದ್ವಿಚಕ್ರ ವಾಹನಗಳ ಬೆಲೆ ಏರಿಕೆಯಾಗುತ್ತಿದೆ, ಆನ್-ರೋಡ್ ವೆಚ್ಚವು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಏರಿಕೆ ಕಂಡಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಇನ್ನು ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಹೊಸ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯು ಲಭ್ಯವಾಗಿಲ್ಲವಾದರೂ, ಅಧ್ಯನದ ಪ್ರಕಾರ ಹೊಸ ಬೈಕಿನ ಅಭಿವೃದ್ಧಿಗಾಗಿ ಪ್ರಸ್ತುತ, ಭಾರತದ ರಾಯಲ್ ಎನ್‌ಫೀಲ್ಡ್ ರಿಸರ್ಚ್ & ಡೆವೆಲಪ್ಮೆಂಟ್ ಸೆಂಟರ್ ಒಂದು ಅಧ್ಯಯನವನ್ನು ನಡೆಸುತ್ತಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಹೊಸ ಅಧ್ಯಯನದ ಆಧಾರದ ಮೇಲೆ, ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತದೆ. ಹೊಸ ಬೈಕು ಪ್ರಸ್ತುತ ಯೋಜನೆಯ ಆರಂಭಿಕ ಹಂತದಲ್ಲಿದೆ ಮತ್ತು ನಿಜವಾದ ಉತ್ಪನ್ನ ಹೊರಬರುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸಲು ವರ್ಷಗಳ ಕಾಲ ಅಭಿವೃದ್ಧಿಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಗ್ರೀನ್ ಸಿಗ್ನಲ್ ಸಿಕ್ಕರೆ ಹೊಸ ಬೈಕ್ 2023 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಹೊಸ 250ಸಿಸಿ ಬೈಕಿನ ಬಿಡುಗಡೆಯ ಹೊರತಾಗಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಲೈನ್-ಅಪ್‍ನಲ್ಲಿರುವ ಎಲ್ಲಾ ಬೈಕ್‍ಘಳನ್ನು ನೋ-ಪ್ರಿಲ್ಸ್ ವರ್ಷನ್‍ಗಳ ಸೌಲಭ್ಯದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಇದರಿಂದಾಗಿ ವಾಹನದ ಮಾಲೀಕರು ತಮ್ಮ ಬೈಕಿಗೆ ಕಸ್ಟಮೈಸೆಷನ್ ಮತ್ತು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದಾಗಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಈ ರೀತಿಯಾದ ಹೊಸ ಯೋಜನೆಯು ಯುವ ಜನತೆಯನ್ನು ಸೆಳೆಯಲಿದ್ದು, ಹಾಗೆಯೆ ಇದರಿಂದ ಮಾರಾಟವು ಕೂಡಾ ಅಧಿಕವಾಗುತ್ತದೆ ಎಂದು ಸಂಸ್ಥೆಯು ಉದ್ದೇಶಿಸಿದೆ. ಕಸ್ಟಮೈಸೇಷನ್ ಆಯ್ಕೆಯಿಂದಾಗಿ ಖರೀದಿದಾರರಲ್ಲಿ ನಂಬಿಕೆಯನ್ನು ಉಳಿಸಿಕೊಂಡಿರುವ ಸಂಸ್ಥೆಯು ಹೀಗೆ ಮಾಡುವುದರಿಂದ ಅವರ ಅಭಿಮಾನಕ್ಕೆ ಯಾವುದೇ ಹಾನಿಯಾಗರುವ ಹಾಗೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಲಾಗಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಇವೆಲ್ಲವುಗಳ ಪೈಕಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ನವೆಂಬರ್ 14, 2018ರಂದು ತಮ್ಮ ವಾಹನಗಳಲ್ಲಿಯೇ ಅಧಿಕ ಸಮಾರ್ಥಯವನ್ನು ಹೊಂದಿರುವ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಎಂಬ 650 ಟ್ವಿನ್ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬೈಕ್‍ಗಳ ಮಾರಾಟದಿಂದಾಗಿ ಸಂಸ್ಥೆಯು ಪ್ರತೀ ತಿಂಗಳು ಒಟ್ಟಾರೆಯ ಮಾರಾಟದ ಸಂಖ್ಯೆಯಲ್ಲಿ ಹೆಚ್ಚಿನ ಪಲಿತಾಂಷವನ್ನು ಪಡೆಯುತ್ತಿದೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆಯು ಅಧಿಕವಾದರೂ ಸಹ ಗ್ರಾಹಕರು ಈ ಬೈಕಿನ ವಿನ್ಯಾಸ ಮತ್ತು ಎಂಜಿನ್‍ಗೆ ಮನಸೋತು ಖರೀದಿಸಲು ಮುಂದಾಗುತ್ತಿದ್ದಾರೆ. ಹೀಗಾಗಿ 650 ಟ್ವಿನ್ ಬೈಕ್‍ಗಳ ಪೈಪೋಟಿದಾರದು ಮಾರುಕಟ್ಟೆಯಲ್ಲಿ ತಮ್ಮ ಬೈಕ್‍ಗಳ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯನ್ನು ಪಡೆಯಲು, ರಿಯಾಯಿತಿಯಲ್ಲಿ ಮತ್ತು ವಿವಿಧ ಆಫರ್‍‍‍ಗಳನ್ನು ನೀಡುತ್ತಿದ್ದಾರೆ.

ಅಗ್ಗದ ಬೆಲೆಯಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‍ಫೀಲ್ಡ್

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Royal Enfield To Launch Affordable Bullet Soon. Read In Kannada
Story first published: Friday, August 2, 2019, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X