ಇನ್ನು ಕೂಲ್ ಆಗಿರಿ; ಥಂಡರ್‌ಬರ್ಡ್ ಕಾಯುವಿಕೆ ಅವಧಿ ಕಡಿತ
ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ನಿಮ್ಮ ಫೇವರಿಟ್ ಬೈಕ್ ಆಗಿದೆಯೇ? ನೀವು ನಿಮ್ಮ ಕನಸನ್ನು ನನಸಾಗಿಸಲು ಬುಕ್ಕಿಂಗ್ ಮಾಡಿದ ಮೇಲೆ ತುಂಬಾ ಸಮಯ ಕಾಯಬೇಕಾಗಿ ಬರುತ್ತಿದೆಯೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ಯಾಕೆಂದರೆ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯು ಗ್ರಾಹಕರ ಕಾಯುವಿಕೆಯ ಅವಧಿಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಮುಂದಿನ ವರ್ಷದ ಮೊದಲಾರ್ಧದಲ್ಲಿ ಚೆನ್ನೈ ಸಮೀಪದ ಓರಗಾಡಂನಲ್ಲಿ ಹೊಸ ಘಟಕ ಆರಂಭವಾಗುತ್ತಿರುವಂತೆಯೇ ಪ್ರಸ್ತುತ ಇರುವ 6ರಿಂದ 8 ತಿಂಗಳ ವರೆಗಿನ ಕಾಯುವಿಕೆ ಅವಧಿಯಲ್ಲಿ ಇಳಿಕೆ ಕಂಡುಬರಲಿದೆಯೆಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
2013ನೇ ಸಾಲಿನ ಮಾರ್ಚ್‌ನಿಂದ ಆರಂಭವಾಗಲಿರುವ ಓರಗಾಡಂ ಘಟಕವು ವರ್ಷಂಪ್ರತಿ 1.5 ಲಕ್ಷ ಯುನಿಟ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಯನ್ ಎಲ್‌ಫೀಲ್ಡ್ ಕಾರ್ಯನಿರ್ವಾಹಕ ಮುಖ್ಯಸ್ಥ ವೆಂಕಿ ಪದ್ಮನಾಭನ್ ತಿಳಿಸಿದ್ದಾರೆ.
ನಿಮ್ಮ ಗಮನಕ್ಕೆ: ರಾಯನ್ ಎನ್‌ಫೀಲ್ಡ್ 500 ಹಾಗೂ 350 ಸಿಸಿ ಬೈಕ್‌ಗಳು ಈಗಾಗಲೇ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ದರ ಮಾಹಿತಿ
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಸಿಸಿ: 1,86,622 ಲಕ್ಷ ರು.
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350 ಸಿಸಿ:
1,46,466 ಲಕ್ಷ ರು.
2010ಕ್ಕೆ ಹೋಲಿಸಿದಾಗ 2011ನೇ ಇಸವಿಯಲ್ಲಿ ಕರ್ನಾಟಕದಲ್ಲಿ ಎನ್‌ಫೀಲ್ಡ್ ಮಾರಾಟವು ಶೇಕಡಾ 80ರಷ್ಟು ಏರಿಕೆ ಕಂಡುಬಂದಿತ್ತು. ಅಲ್ಲದೆ ಬೇಡಿಕೆಯ ಅನುಸಾರವಾಗಿ ಕರ್ನಾಟಕದಲ್ಲಿ 16 ಡೀಲರ್‌ಶಿಪ್‌ಗಳನ್ನು ಆರಂಭಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ 75000 ಬೈಕ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದ್ದು, ಇದು ಒಂದು ಲಕ್ಷ ದಾಟುವ ನಿರೀಕ್ಷೆಯನ್ನು ಪದ್ಮನಾಭನ್ ವ್ಯಕ್ತಪಡಿಸಿದ್ದಾರೆ.

ಥಂಡರ್‌ಬರ್ಡ್
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಕರ್ಷಕ ನೋಟ

ಥಂಡರ್‌ಬರ್ಡ್
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಕರ್ಷಕ ನೋಟ

ಥಂಡರ್‌ಬರ್ಡ್
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಕರ್ಷಕ ನೋಟ

ಥಂಡರ್‌ಬರ್ಡ್
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಕರ್ಷಕ ನೋಟ

ಥಂಡರ್‌ಬರ್ಡ್
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಆಕರ್ಷಕ ನೋಟ


Click it and Unblock the Notifications








