ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

Written By:

ಮಂಗಳೂರು ನಗರ ಅಗ್ನಿಶಾಮಕ ದಳಕ್ಕೆ ಹೊಸ ಆತಿಥಿಯ ಸೇರ್ಪಡೆಯಾಗಿದ್ದು, ನಗರದಲ್ಲಿ ಸಂಭವಿಸುವ ಬೆಂಕಿ ಅವಘಡಗಳನ್ನು ತುರ್ತಾಗಿ ಶಮನಗೊಳಿಸಲು ಹೊಸತಾಗಿ ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಾ 'ಅಗ್ನಿ ನಿಯಂತ್ರಣ ಬುಲೆಟ್' ಅನ್ನು ಸೇರ್ಪಡೆಗೊಳಿಸಲಾಗಿದೆ.

ಸಾಮಾನ್ಯವಾಗಿ ನಗರದ ಇಕ್ಕಟ್ಟಾದ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಅಗ್ನಿ ಶಾಮಕ ದಳಕ್ಕೆ ಸ್ಥಳಕ್ಕೆ ತಲುಪುವುದು ಕಷ್ಟವೆನಿಸುತ್ತದೆ. ಆದರೆ ಇಂತಹ ಅಗ್ನಿ ನಿಯಂತ್ರಣ ಬುಲೆಟ್ ಸೇರ್ಪಡೆಯೊಂದಿಗೆ ವಾಹನ ದಟ್ಟಣೆಯಲ್ಲೂ ಅಥವಾ ಯಾವುದೇ ಇಕ್ಕಟ್ಟಾದ ಗಲ್ಲಿ ಪ್ರದೇಶದಲ್ಲಿ ತುರ್ತಾಗಿ ಸ್ಥಳಕ್ಕೆ ತಲುಪಿ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಅಗ್ನಿ ನಿಯಂತ್ರಣ ಬುಲೆಟ್‌ನ ಒಟ್ಟು ವೆಚ್ಚ ಆರು ಲಕ್ಷ ರು. ಅಂದಾಜಿಸಲಾಗಿದೆ. ಈ ಪೈಕಿ 1.5 ಲಕ್ಷ ರು. ಬೈಕ್ ಮೌಲ್ಯವಾಗಿದ್ದು, ಉಳಿದ 4.5 ಲಕ್ಷ ರು.ಗಳ ಅಗ್ನಿ ಶಾಮಕ ಉಪಕರಣಗಳನ್ನು ಜೋಡಣೆ ಮಾಡಲಾಗಿದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಜರ್ಮನ್ ಮಿಸ್ಟ್ ಟೆಕ್ನಾಲಜಿ ಮೂಲಕ ಕಾರ್ಯಾಚರಿಸಲಿರುವ ಈ ಬೈಕ್ ಒಂಬತ್ತು ಲೀಟರ್ ನೀರು ಹಾಗೂ ಫೋಮ್ ಅನ್ನು ಹೇರಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಆದರೆ ಐದು ಸಾವಿರ ಲೀಟರ್ ನೀರು ಹೊರ ಚಿಮ್ಮಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಕಡಿಮೆ ನೀರಿನಲ್ಲಿ ಗರಿಷ್ಠ ಪ್ರಮಾಣದ ಅಗ್ನಿ ನಂದಿಸುವುದು ಈ ಬೈಕ್‌ನ ವಿಶೇಷತೆಯಾಗಿದೆ. ಇದರೊಂದಿಗೆ ತುರ್ತಾಗಿ ಕಾರ್ಯಾಚರಣೆಗಿಳಿಯಲು ಈ ಬೈಕ್‌ನಿಂದ ಸಾಧ್ಯವಾಗಲಿದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಕೆಲವು ತಿಂಗಳುಗಳ ಹಿಂದೆಯಷ್ಟೇ ನಗರದಲ್ಲಿ ತುರ್ತು ಬೈಕ್ ಅಂಬುಲೆನ್ಸ್ ಪರಿಚಯಸಲಾಗಿತ್ತು. ಇದರ ಬೆನ್ನಲ್ಲೇ ಬೆಂಕಿ ನಿಯಂತ್ರಣ ಬೈಕ್ ಆಗಮನದೊಂದಿಗೆ ನಗರದ ತುರ್ತು ಕಾರ್ಯಾಚರಣೆಗೆ ಹೆಚ್ಚಿನ ಬಲ ಬಂದಂತಾಗಿದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಅಂದ ಹಾಗೆ ಮಂಗಳೂರಿನ ಅಗ್ನಿ ನಿಯಂತ್ರಣ ಬೈಕ್ ರೂಪದಲ್ಲಿ ಕಾರ್ಯಾಚರಿಸಲಿರುವ ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಾ 350 ಸಿಸಿ ಬುಲೆಟ್ ಅನ್ನು ಅತಿ ವಿಶೇಷವಾಗಿ ಕಸ್ಟಮೈಸ್ಡ್ ಮಾಡಲಾಗಿದೆ.

ಮಂಗಳೂರು ನಗರಕ್ಕೆ ಕಾಲಿಟ್ಟ ಎನ್‌ಫೀಲ್ಡ್ 'ಅಗ್ನಿ ನಿಯಂತ್ರಣ ಬುಲೆಟ್'

ಇದರ 346 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಎಂಜಿನ್ 19.8 ಅಶ್ವಶಕ್ತಿ (28 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

English summary
Royal Enfield Bullets to do fire control job in Mangalor
Story first published: Wednesday, October 22, 2014, 7:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark