ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

Written By:

ಮದುವೆ ಮಂಟಪಕ್ಕೆ ಮದುಮಗಳನ್ನು ಕರೆ ತರಲು ವಿಶೇಷ ಸಾಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತದೆ. ಹಿಂದೆಲ್ಲ ನಾಚಿಕೊಂಡು ಬರುವ ಮದುಮಗಳನ್ನು ಪಲ್ಲಕ್ಕಿ ಅಥವಾ ಆಧುನಿಕ ಕಾಲದಲ್ಲಿ ವಾಹನಗಳಲ್ಲಿ ಹೆತ್ತವರ ಜೊತೆ ಕರೆ ತರಲಾಗುತ್ತದೆ.

Also Read: ಜಾದೂ ಮೆರೆಯುತ್ತಿರುವ 15 ಸೆಲೆಬ್ರಿಟಿಗಳು

ಆದರೆ ಈಗ ಕಾಲ ಬದಲಾಗಿದೆ. ಇಲ್ಲೊಬ್ಬ ವಧು ಮದುವೆ ಮಂಟಪಕ್ಕೆ ಬುಲೆಟ್‌ ನಲ್ಲಿ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

To Follow DriveSpark On Facebook, Click The Like Button
ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಅಹದಾಬಾದ್ ಮೂಲದ 26ರ ಹರೆಯದ ಆಯೇಷಾ ಉಪಾಧ್ಯಾಯ ವ್ಯಾಸ್ ಎಂಬ 'ಬುಲೆಟ್ ರಾಣಿ'ಯೇ ಈ ರೀತಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಚಿಕ್ಕವನಿಂದಲೇ ಬುಲೆಟ್ ಮೇಲೆ ಬಲು ಪ್ರೀತಿ ತೋರುತ್ತಿರುವ ಈಕೆ ವರನಿಗೆ ಸಪ್ರೈಸ್ ಕೊಡುವ ಇರಾದೆಯಲ್ಲಿದ್ದರು.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಮದುಮಗಳ ಉಡುಪಿನಲ್ಲಿ ಸಂಪೂರ್ಣ ಶೃಂಗಾರ ಕಾವ್ಯ ಬರೆದ ಈಕೆ ಕಣ್ಣಿಗೊಂದು ಗ್ಲಾಸ್ ಧರಿಸಿ ರಾಯಲ್ ಎನ್ ಫೀಲ್ಡ್ 350 ಬುಲೆಟ್ ನಲ್ಲಿ ಎಂಟ್ರಿ ಕೊಟ್ಟಿದ್ದರು.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಮದುವೆ ನಿಶ್ಚಿತಾರ್ಥ ಬಳಿಕ ಬಂದ ರಕ್ಷಾ ಬಂಧನ ಹಬ್ಬದಂದು ಆಕೆಯ ಸೋದರ ರಾಯಲ್ ಎನ್ ಫೀಲ್ಡ್ ಬೈಕ್ ಉಡುಗೊರೆಯಾಗಿ ನೀಡಿದ್ದರು.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

13ನೇ ವಯಸ್ಸಿನಿಂದಲೇ ಬೈಕ್ ಓಡಿಸುವುದನ್ನು ಕರಗತ ಮಾಡಿಕೊಂಡಿರುವ ಆಯೇಷಾ ಅವರಲ್ಲಿ ತನ್ನ ಮದುವೆ ದಿನದಂದು ಏನಾದರೊಂದು ಹೊಸತನ ಮಾಡಬೇಕೆಂಬ ಹಂಬಲವಿತ್ತು. ಇದೇ ಬುಲೆಟ್ ಓಡಿಸುವುದಕ್ಕೆ ಆಕೆಗೆ ಪ್ರೇರಣೆಯಾಯಿತು.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಅಚ್ಚರಿಯ ಸಂಗತಿಯೆಂದರೆ ಆಯೇಷಾ ಕೆನಡಾ ಮೂಲದ ಪತಿ ಲೌಕಿಕ್ ವ್ಯಾಸ್ ಅವರಿಗೆ ಬೈಕ್ ಓಡಿಸಲು ಬರುದಿಲ್ಲವಂತೆ. ಆದರೆ ತನ್ನ ಪತ್ನಿಯ ಬೈಕ್ ಮೇಲಿನ ಪ್ರೀತಿಯನ್ನು ಅರಿತುಕೊಂಡಿರುವ ಅವರು ಬುಲೆಟ್ ಓಡಿಸಲು ಸಂಪೂರ್ಣ ಸಾಥ್ ನೀಡಿದ್ದಾರೆ.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ವೃತ್ತಿಯಲ್ಲಿ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕಿ ಆಗಿರುವ ಆಯೇಷಾ ಈಗಾಗಲೇ ತನ್ನ ಮಾವನ ಬುಲೆಟ್ ನಲ್ಲಿ ಓಬ್ಬಳೇ ಗೋವಾ ಸುತ್ತಿಕೊಂಡು ಬಂದಿದ್ದು, ಬುಲೆಟ್ ಬಾಬ್ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿರುವ ಓಂ ಬನ್ನಾ ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದಾರೆ.

ಮದುವೆ ಮಂಟಪಕ್ಕೆ ಬುಲೆಟ್ ಓಡಿಸಿ ಬಂದ ಮದುಮಗಳು

ಪ್ರಸ್ತುತ ಆಯೇಷಾ, ಕೆನಡಾಕ್ಕೆ ಹೋದ ಮೇಲೂ ಪತಿಯನ್ನು ಹಿಂಬದಿಯಲ್ಲಿ ಕೂರಿಸಿ ಬೈಕ್ ರೈಡಿಂಗ್ ಮಜಾ ಸವಿಯುವ ಇರಾದೆಯನ್ನು ಹೊಂದಿದ್ದಾರೆ.

Read more on ಬುಲೆಟ್ bullet
English summary
Bride Makes Wedding Entrance on A Royal Enfield
Story first published: Tuesday, February 2, 2016, 10:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark