ಹತ್ತೂರು ಮೆಚ್ಚಿದ ಅತ್ಯುತ್ತಮ ಹತ್ತು ಸ್ಕೂಟರುಗಳು

ಸ್ಕೂಟರ್ ಅಂದ್ರೆ ಹಳೆ ಕಾಲದ ಬಜಾಜ್ ಚೇತಕ್, ಲಂಬೆಟ್ರಾ ನೆನಪಿಸಿಕೊಳ್ಳಬೇಕಾಗಿಲ್ಲ. ಈಗ ಬೈಕಿನಂತೆಯೇ ಅಂದವಾದ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸ್ಕೂಟರುಗಳು ರಸ್ತೆಯಲ್ಲಿವೆ. ದೇಶದ ತರುಣ ತರುಣಿಯರಿಗೆ, ಕಾಲೇಜು ಬೆಡಗಿಯರಿಗೆ, ಯುವಕರಿಗೆ, ಕೆಲಸಕ್ಕೆ ಹೋಗುವರಿಗೆ, ಅಂಕಲ್, ಆಂಟಿಯರು ಮಾತ್ರವಲ್ಲದೇ ರಿಟೈರ್ಡ್ ಆದವರಿಗೂ ಸ್ಕೂಟರುಗಳು ಅಚ್ಚುಮೆಚ್ಚು.

ಸದ್ಯ ಮಾರುಕಟ್ಟೆಯಲ್ಲಿರುವ ಸ್ಕೂಟರುಗಳ ಚಿತ್ರ ಸಂಪುಟ ಇಲ್ಲಿದೆ. ಕೆಲವು ಸ್ಕೂಟರುಗಳು ಸ್ಥಳಾವಕಾಶದ ಅಭಾವದಿಂದ ಮಿಸ್ ಆಗಿರಬಹುದು. ಇಲ್ಲಿರುವ ಎಲ್ಲಾ ಸ್ಕೂಟರುಗಳ ಮೇಲೊಂದು ಕಣ್ಣು ಹಾಯಿಸಿ, ಅದರಲ್ಲಿ ನಿಮಗ್ಯಾವ ಸ್ಕೂಟರ್ ಇಷ್ಟವೆಂದು ನಮಗೆ ಹೇಳಲು ಮರೆಯದಿರಿ. ಬೆಡಗಿನ ಸ್ಕೂಟರ್ ಲೋಕಕ್ಕೆ ನಿಮಗಿದೋ ಸ್ವಾಗತ, ಸುಸ್ವಾಗತ.

ಹೋಂಡಾ ಆಕ್ಟಿವಾ: ತುಂಬಾ ಆಕ್ಟಿವ್

ಹೋಂಡಾ ಆಕ್ಟಿವಾ: ತುಂಬಾ ಆಕ್ಟಿವ್

ಮೈಲೇಜ್ ವಿಷಯದಲ್ಲಿ ಆಕ್ಟಿವಾ ಹಿಂದಿದೆ. ಆಕ್ಟಿವಾ 102 ಸಿಸಿ ಎಂಜಿನ್ ಹೊಂದಿದ್ದು ವಿಮ್ಯಾಟಿಕ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು ಸುಮಾರು 7 ಹಾರ್ಸ್ ಪವರ್ ನೀಡುತ್ತದೆ.ಇದು ನಗರಗಳಲ್ಲಿ ಪ್ರತಿಲೀಟರ್ ಗೆ 40 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 45 ಕಿ.ಮೀ. ಮೈಲೇಜ್ ನೀಡುತ್ತದೆ. ಆಕ್ಟಿವಾ ಆನ್ ರೋಡ್ ದರ: 55 ಸಾವಿರ ರು.

ಹೋಂಡಾ ಏವಿಯೇಟರ್: ಬೆಟರ್ ಸ್ಕೂಟರ್

ಹೋಂಡಾ ಏವಿಯೇಟರ್: ಬೆಟರ್ ಸ್ಕೂಟರ್

ಐದು ಬಣ್ಣಗಳ ಆಯ್ಕೆಗಳಲ್ಲಿ ದೊರಕುವ ಏವಿಯೇಟರ್ ಬೆಸ್ಟ್ ಸ್ಕೂಟರ್. ಬೆಂಗಳೂರಿನಲ್ಲಿ ಇದರ ಆನ್ ರೋಡ್ ದರ 56 ಸಾವಿರ ರು.ನಿಂದ 63 ಸಾವಿರ ರು. ಇದೆ. ಇದರ ಸರಾಸರಿ ಮೈಲೇಜ್: 45 ಕಿ.ಮೀ.

ಹೋಂಡಾ ಡಿಯೊ: ಎಲ್ಲರಿಗೂ ಇಷ್ಟ

ಹೋಂಡಾ ಡಿಯೊ: ಎಲ್ಲರಿಗೂ ಇಷ್ಟ

ಹೋಂಡಾ ಆಕ್ಟಿವಾ, ಏವಿಯೇಟರ್ ಸ್ಕೂಟರುಗಳಿಗೆ ಹೋಲಿಸಿದರೆ ಡಿಯೊ ವಿನ್ಯಾಸ ಕೊಂಚ ಭಿನ್ನ. ಡಿಯೊ ಆನ್ ರೋಡ್ ದರ: 52 ಸಾವಿರ ರು.

ಪಿಯಾಜಿಯೊ ವೆಸ್ಪಾ: ರೆಟ್ರೋ ಸ್ಕೂಟರ್

ಪಿಯಾಜಿಯೊ ವೆಸ್ಪಾ: ರೆಟ್ರೋ ಸ್ಕೂಟರ್

125 ಸಿಸಿಯ ವೆಸ್ಪಾ ಎಲ್ಎಕ್ಸ್ 125 ಸ್ಕೂಟರಿನ ಎಕ್ಸ್ ಶೋರೂಂ ದರ 66,661 ರುಪಾಯಿ. 124 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ವೆಸ್ಪಾ ಮೈಲೇಜ್ ಪ್ರತಿಲೀಟರಿಗೆ ಸುಮಾರು 45 ಕಿ.ಮೀ. ಇದೆ.

ಹೀರೊ ಮ್ಯಾಸ್ಟ್ರೊ: ತರುಣ ತರುಣಿಯರಿಗಾಗಿ

ಹೀರೊ ಮ್ಯಾಸ್ಟ್ರೊ: ತರುಣ ತರುಣಿಯರಿಗಾಗಿ

ಹೋಂಡಾ ಆಕ್ಟಿವಾದಲ್ಲಿದ್ದ 109 ಸಿಸಿಯ ಎಂಜಿನನ್ನೇ ಪರಿಷ್ಕರಿಸಿ ಮ್ಯಾಸ್ಟ್ರೊ ಸ್ಕೂಟರಿಗೆ ಬಳಸಲಾಗಿದೆ. ಹೀರೊ ಮ್ಯಾಸ್ಟ್ರೊ ಬೆಂಗಳೂರು ಎಕ್ಸ್ ಶೋರೂಂ ದರ 47,500 ರುಪಾಯಿ, ಆನ್ ರೋಡ್ ದರ: 55,565 ರುಪಾಯಿ.

ಸುಜುಕಿ ಸ್ವಿಸ್, ಆಕ್ಸೆಸ್ 125: ಸ್ವೀಟ್ ಸ್ಕೂಟಿ

ಸುಜುಕಿ ಸ್ವಿಸ್, ಆಕ್ಸೆಸ್ 125: ಸ್ವೀಟ್ ಸ್ಕೂಟಿ

ಸುಜುಕಿ ಆಕ್ಸೆಸ್ 125 ಸ್ಕೂಟರಿನ ಬೆಂಗಳೂರು ಆನ್ ರೋಡ್ ದರ 56 ಸಾವಿರ ರು. ಸುಜುಕಿ ಆಕ್ಸೆಸ್ 125 ಸಿಸಿ ಬೈಕ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 55 ಕಿ.ಮೀ. ಮೈಲೇಜ್ ನೀಡುತ್ತದೆ.

ಸುಜುಕಿ ಸ್ವಿಸ್ 125 ಆಟೋಮ್ಯಾಟಿಕ್ ಸ್ಕೂಟರ್ ಬೆಂಗಳೂರು ಆನ್ ರೋಡ್ ದರ 58 ಸಾವಿರ ರುಪಾಯಿ. ಈ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ. ಮೈಲೇಜ್ ನೀಡುತ್ತದೆ.

ಮಹೀಂದ್ರ ಡ್ಯೂರೊ ಮತ್ತು ರೊಡಿಯೊ ಹೇಗಿದೆ ಗುರು?

ಮಹೀಂದ್ರ ಡ್ಯೂರೊ ಮತ್ತು ರೊಡಿಯೊ ಹೇಗಿದೆ ಗುರು?

ರಾಜ್ಯದಲ್ಲಿ ನೂತನ ಮಹೀಂದ್ರ ಡ್ಯೊರೊ ಸ್ಕೂಟರ್ ಎಕ್ಸ್ ಶೋರೂಂ ದರ 44,760 ರುಪಾಯಿ. ಈ ಸ್ಕೂಟರ್ ಪ್ರತಿಲೀಟರ್ ಪೆಟ್ರೋಲಿಗೆ 40-45 ಕಿ.ಮೀ. ಮೈಲೇಜ್ ನೀಡುತ್ತದೆ. (ಡ್ಯೂರೊ).

ಮಹೀಂದ್ರ ರೊಡಿಯೊ: 125 ಸಿಸಿಯಲ್ಲಿ ರೊಡಿಯೊ ಕೂಡ ಅತ್ಯುತ್ತಮ ಸ್ಕೂಟರ್. ರಾಜ್ಯದಲ್ಲಿ ಎಕ್ಸ್ ಶೋರೂಂ ದರ 48,930 ರು. ಮೈಲೇಜ್ ಪ್ರತಿಲೀಟರಿಗೆ 59.38 ಕಿ.ಮೀ. ನೀಡುತ್ತದೆ. ಉಳಿದಂತೆ ಫ್ಲೈಟ್ ಮತ್ತು ಕೈನ್ ಸಹ ಅತ್ಯುತ್ತಮ ಸ್ಕೂಟರುಗಳು.

ಟಿವಿಎಸ್ ಸ್ಕೂಟಿ ಬ್ಯೂಟಿಗಳು

ಟಿವಿಎಸ್ ಸ್ಕೂಟಿ ಬ್ಯೂಟಿಗಳು

ಸ್ಕೂಟಿ ಪೆಪ್‌+ ಇದು ಟಿವಿಎಸ್‌ನ ಆಕರ್ಷಕ ಮತ್ತು ಹಗುರವಾದ ಸ್ಕೂಟಿ. ಆಟೋ ಚೋಕ್‌, ಪವರ್‌ ಎಕಾನಮಿ ಬಾಡಿ, ಮೊಬೈಲ್‌ ಚಾರ್ಜರ್‌ ಸಾಕೇಟ್‌ ಇತ್ಯಾದಿ ಫೀಚರ್‌ಗಳಿಂದ ಆಕರ್ಷಕವಾಗಿದೆ. ಇದು ಎಲೆಕ್ಟ್ರಿಕ್‌ ರೆಡ್‌, ನೈಟ್‌ ಬ್ಲಾಕ್‌ ಸೇರಿದಂತೆ 5 ಬಣ್ಣಗಳಲ್ಲಿ ದೊರಕುತ್ತದೆ. ಇದು ಪ್ರತಿಲೀಟರ್‌ ಪೆಟ್ರೋಲ್‌ಗೆ 60 ಕಿ.ಮೀ. ಮೈಲೇಜ್‌ ನೀಡುತ್ತದೆ. ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 32,480 ರು.

ಟಿವಿಎಸ್‌ ವೆಗೊ: ತಗೋಬಹುದು

ಟಿವಿಎಸ್‌ ವೆಗೊ: ತಗೋಬಹುದು

ಟಿವಿಎಸ್‌ ವೆಗೊ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸೂಕ್ತವಾಗಿರುವ ಅಂದವಾದ ದ್ವಿಚಕ್ರ ವಾಹನ. ಇದು 110 ಸಿಸಿ ಎಂಜಿನ್‌ ಹೊಂದಿದ್ದು 7,500 ಆರ್‌ಪಿಎಂಗೆ 8 ಹಾರ್ಸ್‌ಪವರ್‌ ನೀಡುತ್ತದೆ. ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿರುವ ವೆಗೊ ಆರಾಮದಾಯಕತೆ‌ ಮತ್ತು ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಇದರ ಬೆಂಗಳೂರು ಶೋರೂಂ ದರ ಸುಮಾರು 42,500 ರು. ಟಿವಿಎಸ್ ಸ್ಟ್ರೀಕ್ ಸಹ ಆಕರ್ಷಕ ಸ್ಕೂಟರ್.

ಯಮಹಾ ಮೊದಲ ಸ್ಕೂಟರ್

ಯಮಹಾ ಮೊದಲ ಸ್ಕೂಟರ್ "ರೇ"

ಯಮಹಾ ಕಂಪನಿಯು ದೇಶಕ್ಕೆ ಪರಿಚಯಿಸಿದ ಮೊದಲ ಸ್ಕೂಟರ್ ಹೆಸರು "ರೇ". ಇದರ ಆರಂಭಿಕ ದರ 46 ಸಾವಿರ ರುಪಾಯಿ. ಇದು ಪ್ರತಿಲೀಟರಿಗೆ ಸುಮಾರು 61 ಕಿ.ಮೀ. ಮೈಲೇಜ್ ನೀಡುತ್ತದೆ.

ಹೋಂಡಾ ಆಕ್ಟಿವಾ: ಮೈಲೇಜ್ ವಿಷಯದಲ್ಲಿ ಆಕ್ಟಿವಾ ಹಿಂದಿದೆ. ಆಕ್ಟಿವಾ 102 ಸಿಸಿ ಎಂಜಿನ್ ಹೊಂದಿದ್ದು ವಿಮ್ಯಾಟಿಕ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು ಸುಮಾರು 7 ಹಾರ್ಸ್ ಪವರ್ ನೀಡುತ್ತದೆ.ಇದು ನಗರಗಳಲ್ಲಿ ಪ್ರತಿಲೀಟರ್ ಗೆ 40 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 45 ಕಿ.ಮೀ. ಮೈಲೇಜ್ ನೀಡುತ್ತದೆ. ಆಕ್ಟಿವಾ ಆನ್ ರೋಡ್ ದರ: 55 ಸಾವಿರ ರು.

ಹೋಂಡಾ ಏವಿಯೇಟರ್: ಐದು ಬಣ್ಣಗಳ ಆಯ್ಕೆಗಳಲ್ಲಿ ದೊರಕುವ ಏವಿಯೇಟರ್ ಬೆಸ್ಟ್ ಸ್ಕೂಟರ್. ಬೆಂಗಳೂರಿನಲ್ಲಿ ಇದರ ಆನ್ ರೋಡ್ ದರ 56 ಸಾವಿರ ರು.ನಿಂದ 63 ಸಾವಿರ ರು. ಇದೆ. ಇದರ ಸರಾಸರಿ ಮೈಲೇಜ್: 45 ಕಿ.ಮೀ.

ಹೋಂಡಾ ಡಿಯೊ: ಹೋಂಡಾ ಆಕ್ಟಿವಾ, ಏವಿಯೇಟರ್ ಸ್ಕೂಟರುಗಳಿಗೆ ಹೋಲಿಸಿದರೆ ಡಿಯೊ ವಿನ್ಯಾಸ ಕೊಂಚ ಭಿನ್ನ. ಡಿಯೊ ಆನ್ ರೋಡ್ ದರ: 52 ಸಾವಿರ ರು.

ಪಿಯಾಜಿಯೊ ವೆಸ್ಪಾ: 125 ಸಿಸಿಯ ವೆಸ್ಪಾ ಎಲ್ಎಕ್ಸ್ 125 ಸ್ಕೂಟರಿನ ಎಕ್ಸ್ ಶೋರೂಂ ದರ 66,661 ರುಪಾಯಿ. 124 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ವೆಸ್ಪಾ ಮೈಲೇಜ್ ಪ್ರತಿಲೀಟರಿಗೆ ಸುಮಾರು 45 ಕಿ.ಮೀ. ಇದೆ.

ಹೀರೊ ಮ್ಯಾಸ್ಟ್ರೊ: ಹೋಂಡಾ ಆಕ್ಟಿವಾದಲ್ಲಿದ್ದ 109 ಸಿಸಿಯ ಎಂಜಿನನ್ನೇ ಪರಿಷ್ಕರಿಸಿ ಮ್ಯಾಸ್ಟ್ರೊ ಸ್ಕೂಟರಿಗೆ ಬಳಸಲಾಗಿದೆ. ಹೀರೊ ಮ್ಯಾಸ್ಟ್ರೊ ಬೆಂಗಳೂರು ಎಕ್ಸ್ ಶೋರೂಂ ದರ 47,500 ರುಪಾಯಿ, ಆನ್ ರೋಡ್ ದರ: 55,565 ರುಪಾಯಿ.

ಸುಜುಕಿ ಸ್ವಿಸ್, ಆಕ್ಸೆಸ್ 125: ಸುಜುಕಿ ಆಕ್ಸೆಸ್ 125 ಸ್ಕೂಟರಿನ ಬೆಂಗಳೂರು ಆನ್ ರೋಡ್ ದರ 56 ಸಾವಿರ ರು. ಸುಜುಕಿ ಆಕ್ಸೆಸ್ 125 ಸಿಸಿ ಬೈಕ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 55 ಕಿ.ಮೀ. ಮೈಲೇಜ್ ನೀಡುತ್ತದೆ. ಸುಜುಕಿ ಸ್ವಿಸ್ 125 ಆಟೋಮ್ಯಾಟಿಕ್ ಸ್ಕೂಟರ್ ಬೆಂಗಳೂರು ಆನ್ ರೋಡ್ ದರ 58 ಸಾವಿರ ರುಪಾಯಿ. ಈ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ. ಮೈಲೇಜ್ ನೀಡುತ್ತದೆ.

ಮಹೀಂದ್ರ ಡ್ಯೂರೊ: ರಾಜ್ಯದಲ್ಲಿ ನೂತನ ಮಹೀಂದ್ರ ಡ್ಯೊರೊ ಸ್ಕೂಟರ್ ಎಕ್ಸ್ ಶೋರೂಂ ದರ 44,760 ರುಪಾಯಿ. ಈ ಸ್ಕೂಟರ್ ಪ್ರತಿಲೀಟರ್ ಪೆಟ್ರೋಲಿಗೆ 40-45 ಕಿ.ಮೀ. ಮೈಲೇಜ್ ನೀಡುತ್ತದೆ.

ಮಹೀಂದ್ರ ರೊಡಿಯೊ: 125 ಸಿಸಿಯಲ್ಲಿ ರೊಡಿಯೊ ಕೂಡ ಅತ್ಯುತ್ತಮ ಸ್ಕೂಟರ್. ರಾಜ್ಯದಲ್ಲಿ ಎಕ್ಸ್ ಶೋರೂಂ ದರ 48,930 ರು. ಮೈಲೇಜ್ ಪ್ರತಿಲೀಟರಿಗೆ 59.38 ಕಿ.ಮೀ. ನೀಡುತ್ತದೆ. ಉಳಿದಂತೆ ಫ್ಲೈಟ್ ಮತ್ತು ಕೈನ್ ಸಹ ಅತ್ಯುತ್ತಮ ಸ್ಕೂಟರುಗಳು.

ಟಿವಿಎಸ್ ಸ್ಕೂಟಿ ಬ್ಯೂಟಿಗಳು: ಸ್ಕೂಟಿ ಪೆಪ್‌+ ಇದು ಟಿವಿಎಸ್‌ನ ಆಕರ್ಷಕ ಮತ್ತು ಹಗುರವಾದ ಸ್ಕೂಟಿ. ಆಟೋ ಚೋಕ್‌, ಪವರ್‌ ಎಕಾನಮಿ ಬಾಡಿ, ಮೊಬೈಲ್‌ ಚಾರ್ಜರ್‌ ಸಾಕೇಟ್‌ ಇತ್ಯಾದಿ ಫೀಚರ್‌ಗಳಿಂದ ಆಕರ್ಷಕವಾಗಿದೆ. ಇದು ಎಲೆಕ್ಟ್ರಿಕ್‌ ರೆಡ್‌, ನೈಟ್‌ ಬ್ಲಾಕ್‌ ಸೇರಿದಂತೆ 5 ಬಣ್ಣಗಳಲ್ಲಿ ದೊರಕುತ್ತದೆ. ಇದು ಪ್ರತಿಲೀಟರ್‌ ಪೆಟ್ರೋಲ್‌ಗೆ 60 ಕಿ.ಮೀ. ಮೈಲೇಜ್‌ ನೀಡುತ್ತದೆ. ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 32,480 ರು.

ಟಿವಿಎಸ್‌ ವೆಗೊ: ಟಿವಿಎಸ್‌ ವೆಗೊ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸೂಕ್ತವಾಗಿರುವ ಅಂದವಾದ ದ್ವಿಚಕ್ರ ವಾಹನ. ಇದು 110 ಸಿಸಿ ಎಂಜಿನ್‌ ಹೊಂದಿದ್ದು 7,500 ಆರ್‌ಪಿಎಂಗೆ 8 ಹಾರ್ಸ್‌ಪವರ್‌ ನೀಡುತ್ತದೆ. ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿರುವ ವೆಗೊ ಆರಾಮದಾಯಕತೆ‌ ಮತ್ತು ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಇದರ ಬೆಂಗಳೂರು ಶೋರೂಂ ದರ ಸುಮಾರು 42,500 ರು. ಟಿವಿಎಸ್ ಸ್ಟ್ರೀಕ್ ಸಹ ಆಕರ್ಷಕ ಸ್ಕೂಟರ್.

ಓದುಗರೇ, ನಿಮಗ್ಯಾವ ಸ್ಕೂಟರ್ ಇಷ್ಟ?

ಇದನ್ನೂ ಓದಿ: ಅಗ್ಗದ ದರದಲ್ಲಿ ದೊರಕುವ ಅತ್ಯುತ್ತಮ ಹತ್ತು ಬೈಕುಗಳು

More from DriveSpark

Article Published On: Saturday, September 22, 2012, 13:21 [IST]
English summary
Top Best Scooters in India. India is a predominantly two wheeler driven auto market where price, mileage is the most important factor. Here are the top Scooters in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+