ಟ್ರಯಂಪ್: ಕೋಲಾರ ಘಟಕಕ್ಕೆ 215 ಕೋಟಿ ರುಪಾಯಿ
ಟ್ರಯಂಪ್ ಮೋಟರ್‌ಸೈಕಲ್ ಇಂಡಿಯಾ ಕಂಪನಿಯು ಕೋಲಾರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘಟಕಕ್ಕೆ ಸುಮಾರು 215 ಕೋಟಿ ರುಪಾಯಿ ಹೂಡಿಕೆ ಮಾಡಲು ಯೋಜಿಸಿದೆ.
ರಾಜ್ಯದಲ್ಲಿ ಘಟಕ ನಿರ್ಮಿಸುವ ಕಂಪನಿಯ ಯೋಜನೆಗೆ ಕರ್ನಾಟಕ ರಾಜ್ಯ ಉನ್ನತ್ತ ಮಟ್ಟದ ಅನುಮೋದನ ಸಮಿತಿ ಸಮ್ಮತಿ ನೀಡಿದೆ. ನೂತನ ಘಟಕಕ್ಕೆ ಕೋಲಾರ ಜಿಲ್ಲೆಯ ನರ್ಸಪುರದಲ್ಲಿ ಸುಮಾರು 30 ಎಕರೆ ಭೂಮಿ ನೀಡಲು ಅನುಮೋದನೆ ನೀಡಲಾಗಿದೆ.
ಬ್ರಿಟನಿನ ದ್ವಿಚಕ್ರವಾಹನ ಕಂಪನಿಯು ದೇಶದ ರಸ್ತೆಗೆ ವಿವಿಧ ಏಳು ವಿನೂತನ ಬೈಕುಗಳನ್ನು ಪರಿಚಯಿಸಿದೆ. ಅದರಲ್ಲಿ ಟ್ರಯಂಪ್ ಬೊನೆವಿಲ್ಲೆ ಬೈಕಿನ ದರ ಸುಮಾರು 5.5 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಬೈಕ್ ಕೂಡ ಆಕರ್ಷಕ ಬೈಕ್. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 5.75 ಲಕ್ಷ ರುಪಾಯಿ ಇದೆ.
ಟ್ರಯಂಪ್ ಡೆಟೊನಾ ದರ ಸುಮಾರು 7 ಲಕ್ಷ ರು, ಟ್ರಯಂಪ್ ಸ್ಪೀಡ್ ಮಾಸ್ಟರ್ದರ 8 ಲಕ್ಷ ರುಪಾಯಿ ಇದೆ. ಟ್ರಯಂಪ್ ದುಬಾರಿ ಬೈಕುಗಳಲ್ಲಿ ಟೈಗರ್ ಹೆಸರಿನ ಬೈಕಿಗೆ ಸುಮಾರು 11.4 ಲಕ್ಷ ರುಪಾಯಿ ದರವಿದೆ. ಟ್ರಯಂಪ್ ಸ್ಟ್ರೋಮ್ ದರ ಸುಮಾರು 17 ಲಕ್ಷ ರುಪಾಯಿ ಇದೆ.


Click it and Unblock the Notifications









