ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

Written By:

ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಪ್ ಸಂಸ್ಥೆಯು ಜೂನ್ 2017ರಲ್ಲಿ ಭಾರತದಲ್ಲಿ ಸ್ಟ್ರೀಟ್ ಟ್ರಿಪಲ್ ಎಸ್ ಮೋಟಾರ್ ಸೈಕಲ್ ಪ್ರಾರಂಭಿಸಿತ್ತು. ಈಗ, ಕಂಪನಿಯು ಈ ಬೈಕಿನ ಇನ್ನೊಂದು ರೂಪಾಂತರವನ್ನು ಪರಿಚಯಿಸಲು ಸಿದ್ಧವಾಗಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಮುಂಬರುವ ದಿನಗಳಲ್ಲಿ ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಂದಿದ್ದು, ಪ್ರಸ್ತುತ, ಟ್ರಯಂಪ್ ಜಾಗತಿಕ ಮಾರುಕಟ್ಟೆಯಲ್ಲಿ ಸ್ಟ್ರೀಟ್ ಟ್ರಿಪಲ್ 765 ಮೋಟಾರ್ ಸೈಕಲ್‌ನ ಮೂರು ರೂಪಾಂತರಗಳನ್ನು ಮಾರಾಟ ಮಾಡುತ್ತಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಎಂಬುದು ಉನ್ನತ ಮಾದರಿಯಾಗಿದ್ದು, ಇದು ಪ್ರವೇಶ-ಮಟ್ಟದ ಎಸ್ ರೂಪಾಂತರದ ವಿರುದ್ಧ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಆರ್‌ಎಸ್ ರೂಪಾಂತರದ ಪ್ರಮುಖ ಲಕ್ಷಣವೆಂದರೆ ಇಂಜಿನ್ ಎನ್ನಬಹುದು. ಹೌದು, ಈ ಹೊಚ್ಚ ಹೊಸ ಟ್ರಿಪಲ್ 765 ಆರ್‌ಎಸ್ ಬೈಕ್ ಹೆಚ್ಚಿನ ಶಕ್ತಿ ಉತ್ಪಾದನೆಯನ್ನು ಮಾಡುವತೆ ಟ್ಯೂನ್ ಮಾಡಲಾಗಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಟ್ರಿಪಲ್ 765 ಆರ್‌ಎಸ್ ಮೋಟಾರ್ ಸೈಕಲ್ 765 ಸಿಸಿ ಇನ್‌ಲೈನ್ ಮೂರು ಸಿಲಿಂಡರ್ ಎಂಜಿನ್ ಹೊಂದಿದ್ದು, 77 ಎನ್‌ಎಂ ತಿರುಗುಬಲದಲ್ಲಿ 123 ಬಿಎಚ್‌ಪಿ ಗರಿಷ್ಠ ಟರ್ಕನ್ನು ಉತ್ಪಾದಿಸುತ್ತದೆ ಮತ್ತು ಎಸ್ ಟ್ರಿಪ್ ಬೈಕ್ 73 ಎನ್‌ಎಂ ತಿರುಗುಬಲದಲ್ಲಿ 113 ಬಿಎಚ್‌ಪಿ ಗರಿಷ್ಠ ಟರ್ಕನ್ನು ಉತ್ಪಾದಿಸುತ್ತದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್, ಉತ್ತಮವಾದ ಭಾಗಗಳನ್ನು ಪಡೆಯುತ್ತದೆ. ಉದಾಹರಣೆಗೆ, ಬ್ರೆಂಬೊ ಎಂ 50 ಬ್ರೇಕ್ಸ್, ಮುಂಭಾಗದಲ್ಲಿ ಷೋವ ಬಿಗ್ ಪಿಸ್ಟನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಒಹ್ಲಿನ್ ಮಾನೊ ಷಾಕ್ ಸಸ್ಪೆನ್‌ಷನ್ ಸೆಟಪ್ ಪಡೆದುಕೊಂಡಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಇದಲ್ಲದೆ, ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಮೋಟಾರ್ ಸೈಕಲ್, ಬಹು-ವೀಕ್ಷಣಾ ಎಲ್‌ಸಿಡಿ ಸಲಕರಣೆ ಕ್ಲಸ್ಟರ್ ಜೊತೆ ಬಹು ವೀಕ್ಷಣಾ ವಿಧಾನಗಳು ಮತ್ತು ಐದು ಸವಾರಿ ವಿಧಾನಗಳನ್ನು ಪಡೆಯುತ್ತದೆ. ಹೊಸ ಫ್ರೋಜನ್ ಮ್ಯಾಟ್ ಬಣ್ಣದ ಯೋಜನೆಯಡಿಯಲ್ಲಿ ಮೋಟಾರ್ ಸೈಕಲ್ ಆಯ್ಕೆಯನ್ನು ನೀಡಲಾಗಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಬೈಕಿನ ಬಿಡುಗಡೆ ಮಾಹಿತಿ ಬಹಿರಂಗ

ಕೊನೆಗೂ ಭಾರತದಲ್ಲಿ ಸ್ಟ್ರೀಟ್ ಟ್ರಿಪಲ್ 765 ಆರ್‌ಎಸ್ ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸುವುದಾಗಿ ಟ್ರಂಪ್ ಮೋಟಾರ್‌ಸೈಕಲ್ ಸಂಸ್ಥೆಯು ಬಹಿರಂಗಪಡಿಸಿದ್ದು, ಇದರ ಅರ್ಥ ಕಂಪನಿಯು ಮಿಡ್-ಸ್ಪೆಸಿಫಿಕೇಷನ್ ಆರ್ ರೂಪಾಂತರವನ್ನು ದೇಶದಲ್ಲಿ ಪರಿಚಯಿಸುವುದಿಲ್ಲ ಎಂಬುದು ಖಚಿತವಾಗಿದೆ. ಉನ್ನತ ಮಾದರಿಯ ಬೆಲೆ ರೂ. 10 ಲಕ್ಷದಿಂದ 11 ಲಕ್ಷ ಎಕ್ಸ್ ಶೋ ರೂಂ ದರ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

English summary
British motorcycle manufacturer Triumph Motorcycles launched the Street Triple S in India in June 2017. Now, the company is all set to introduce another variant of the naked motorcycle.
Story first published: Tuesday, October 10, 2017, 14:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark