ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ

ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಪ್ ಭಾರತದಲ್ಲಿ ದಿ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಪ್ರಾರಂಭಿಸಿದೆ. ಹೊಸ ಪೀಳಿಗೆಯ ಸ್ಟ್ರೀಟ್ ಟ್ರಿಪಲ್ ಮೋಟಾರ್ ಸೈಕಲ್ 10.55 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

By Girish

ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಪ್ ಭಾರತದಲ್ಲಿ ದಿ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಪ್ರಾರಂಭಿಸಿದೆ. ಹೊಸ ಪೀಳಿಗೆಯ ಸ್ಟ್ರೀಟ್ ಟ್ರಿಪಲ್ ಮೋಟಾರ್ ಸೈಕಲ್ 10.55 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಇತ್ತೀಚಿಗೆ ಟ್ರಯಂಪ್ ಮೋಟಾರ್ ಸೈಕಲ್ ಇಂಡಿಯಾ ಪ್ರವೇಶ ಹಂತದ ಸ್ಟ್ರೀಟ್ ಟ್ರಿಪಲ್ ಎಸ್ ಬೈಕನ್ನು ಭಾರತದಲ್ಲಿ ರೂ 8.50 ಲಕ್ಷ ಎಕ್ಸ್ ಶೋರೂಂ (ದೆಹಲಿ) ದರದಲ್ಲಿ ಬಿಡುಗಡೆ ಮಾಡಿದೆ. ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಪ್ರಸ್ತುತ 765 ಸಿಸಿ ಇನ್‌ಲೈನ್ 3 ಸಿಲಿಂಡರ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದ್ದು, 77 ಎನ್‌ಎಂ ಟಾರ್ಕ್ ಮತ್ತು 121 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಈ ಮೋಟಾರ್ ಸೈಕಲ್ ಹೊಸ ಕ್ರ್ಯಾಂಕ್, ಪಿಸ್ಟನ್‌ಗಳು ಮತ್ತು ನಿಕಸಿಲ್ ಲೇಪಿತ ಅಲ್ಯೂಮಿನಿಯಂ ಬ್ಯಾರೆಲ್ಸ್ ಮತ್ತು ಹೆಚ್ಚಿಸಲಾದ ಬೋರ್ ಮತ್ತು ಸ್ಟ್ರೋಕ್ ಸೇರಿದಂತೆ 80 ಹೊಸ ಬಿಡಿಭಾಗಗಳನ್ನು ಪಡೆಯುತ್ತದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮೋಟಾರ್ ಸೈಕಲ್ ಮುಂಚೂಣಿಯಲ್ಲಿರುವ ಬ್ರೆಂಬೊ ಎಂ50 ಬ್ರೇಕ್ಸ್, ಷೋವ ಬಿಗ್ ಪಿಸ್ಟನ್ ಫೋರ್ಕ್ಸ್ ಫ್ರಂಟ್ ಮತ್ತು ಒಹ್ಲಿನ್ ಮನೊಶಾಕ್ ಸಸ್ಪೆನ್‌ಷನ್ ಮುಂತಾದವುಗಳನ್ನು ಬೈಕಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಇದಲ್ಲದೆ, ಹೊಸ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ 5-ಇಂಚಿನ ಪೂರ್ಣ-ಬಣ್ಣ ಟಿಎಫ್‌ಟಿ ಪರದೆಯನ್ನು ಪಡೆಯುತ್ತದೆ, ಇದು ಡಬಲ್ಸ್ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್‌ ಪಡೆಯುತ್ತದೆ ಹಾಗು ಪರದೆಯನ್ನು ಎರಡು ವಿಭಿನ್ನ ಆವೃತಿಗಳಲ್ಲಿ ನೋಡಬಹುದು ಮತ್ತು ಚಾಲಕನಿಗೆ ಸರಿಹೊಂದುವಂತೆ ಮಾಡಬಹುದು.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಸ್ವಿಚ್ ಮಾಡಬಹುದಾದ ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡ್-ಬೈ-ವೈರ್ ಥ್ರೊಟಲ್‌ಗಳನ್ನು ಒಳಗೊಂಡಿದೆ. ರಸ್ತೆ, ಮಳೆ, ಕ್ರೀಡಾ, ಟ್ರ್ಯಾಕ್ ಮತ್ತು ಇಂಡಿವಿಜುಯಲ್ ಎಂಬ ಐದು ಸವಾರಿ ವಿಧಾನಗಳನ್ನು ಸಹ ಪಡೆಯುತ್ತದೆ.

ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.10.55 ಲಕ್ಷ

ಹೊಸದಾಗಿ ಬಿಡುಗಡೆಯಾದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮ್ಯಾಟ್ ಬೆಳ್ಳಿ ಐಸ್ ಮತ್ತು ಫ್ಯಾಂಟಮ್ ಕಪ್ಪು ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ.

Most Read Articles

Kannada
English summary
British motorcycle manufacturer Triumph has launched the Street Triple RS in India. The new variant of the new-generation Street Triple is priced at Rs 10.55 lakh ex-showroom (Delhi).
Story first published: Monday, October 16, 2017, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X