ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

Written By:

ಪ್ರಖ್ಯಾತ ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ಬೈಕ್ ರೂ. 8.10 ಲಕ್ಷ ಎಕ್ಸ್ ಷೋರೂಂ(ಪ್ಯಾನ್ ಇಂಡಿಯಾ) ಬೆಲೆ ಪಡೆದುಕೊಂಡಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಬೊನ್‌ವಿಲ್ಲೆ ಕುಟುಂಬಕ್ಕೆ ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಸೇರ್ಪಡೆಯಾಗಿದ್ದು, ಟ್ರಯಂಫ್ ಸ್ಟ್ರೀಟ್ ಸ್ಕ್ರಾಂಬ್ಲರ್ ಒಂದು ವಿಶಿಷ್ಟವಾದ ವಿನ್ಯಾಸದ ಭಾಷೆಯನ್ನು ಹೊಂದಿದೆ, ಇನ್ನುಳಿದಂತೆ ಈ ಮೋಟಾರ್ ಸೈಕಲ್ ಬೊನ್‌ವಿಲ್ಲೆ ಸಂಸ್ಥೆಯ ಇತರ ವಾಹನಗಳ ಹೋಲಿಕೆ ಪಡೆದುಕೊಂಡಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಗಮನಾರ್ಹವಾದ ಬದಲಾವಣೆಗಳೆಂದರೆ, ಮರುವಿನ್ಯಾಸಗೊಳಿಸಲ್ಪಟ್ಟ ಆಸನ, ಹೈ-ಮೌಂಟೆಡ್ ಎಕ್ಸ್‌ಸಾಸ್ಟ್ ಸಿಸ್ಟಮ್, ರಿಯರ್ ಫೆಂಡರ್ ಮತ್ತು ದ್ವಿ ಉದ್ದೇಶಿತ ಮೊಬೊಬಿ ಟೈರುಗಳನ್ನು ನೋಡಬಹುದಾಗಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಹೊಸದಾಗಿ ಬಿಡುಗಡೆಯಾದ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ 900ಸಿಸಿ ಎಂಜಿನ್ ಲಿಕ್ವಿಡ್-ಕೋಲ್ಡ್ ಹೈ-ಟಾರ್ಕ್ ಎಂಜಿನ್ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಈ ಎಂಜಿನ್ 78.8 ಎನ್ಎಂ ತಿರುಗುಬಲದಲ್ಲಿ 54ರಷ್ಟು ಅಶ್ವಶಕ್ತಿ ಉತ್ಪಾದಿಸುತ್ತದೆ. ರೈಡ್-ಬೈ-ವೈರ್ ಟೆಕ್ನಾಲಜಿಯ ಜೊತೆಗೆ ರೈಡರ್‌ಏಡ್ಸ್ ಎಳೆತ ನಿಯಂತ್ರಣ ಮತ್ತು ಸ್ವಿಚ್ ಮಾಡಬಹುದಾದ ಎಬಿಎಸ್ ನೋಡಬಹುದಾಗಿದೆ ಹಾಗು ಮೀಸಲಿಟ್ಟ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಚಾರ್ಸಿ ನೋಡಬಹುದಾಗಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಟೆಲೆಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಡ್ಯುಯಲ್ ಹಿಂಭಾಗದ ಆಘಾತಗಳು, ಡಿಸ್ಕ್ ಬ್ರೇಕ್‌ಗಳು, ಬ್ಯಾಷ್ ಪ್ಲೇಟ್, ಹಿಂಭಾಗದಲ್ಲಿ ಎಲ್ಇಡಿ ದೀಪ ಮತ್ತು ಕಸ್ಟಮೈಸ್ ಮಾಡಲಾಗಿರುವ 150ಕ್ಕೂ ಹೆಚ್ಚು ಬಿಡಿಭಾಗಗಳನ್ನು ಮೋಟಾರ್‌ಸೈಕಲ್ ಪಡೆಯುತ್ತದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಅಲ್ಲದೆ, ಮುಂಭಾಗದಲ್ಲಿ 9-ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಮೆಟ್‌ಜಿಲೆರ್ ಟೌರಾನ್ಸ್ ಟೈಯರ್ ಪಡೆದುಕೊಂಡಿರುವ ಚಕ್ರಗಳನ್ನು ಈ ಮೋಟಾರ್‌ಸೈಕಲ್‌ನಲ್ಲಿ ನೋಡಬಹುದಾಗಿದೆ, ಈ ಟೈರುಗಳು ಆಫ್-ರೋಡ್ ಚಾಲನೆಗೆ ಯೋಗ್ಯವಾಗಿವೆ ಎಂದು ಕಂಪನಿ ತಿಳಿಸಿದೆ.

ಟ್ರಯಂಪ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆ

ಜೆಟ್ ಬ್ಲ್ಯಾಕ್, ಮ್ಯಾಟ್ ಕಾಕಿ ಗ್ರೀನ್ ಮತ್ತು ಕೊರೊಸಿ ರೆಡ್ ಮತ್ತು ಫ್ರೋಜನ್ ಸಿಲ್ವರ್ ಎಂಬ ನಾಲ್ಕು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ ಹಾಗು ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಮೋಟಾರ್ ಸೈಕಲ್ ಭಾರತದ ಡುಕಾಟಿ ಸ್ಕ್ರಾಂಬ್ಲರ್ ಜೊತೆ ಸ್ಪರ್ಧಿಸಲಿದೆ.

English summary
Read in Kannada about Triumph Street Scrambler launched in India for Rs 8.10 lakh ex-showroom (pan India). Know more about this motor cycle
Story first published: Thursday, August 24, 2017, 15:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark