ಎಕ್ಸ್‌ಟ್ರೀಂ ಸ್ಪೋರ್ಟ್ಸ್: ಸಾಹಸಿ ಬೈಕ್ ರೈಡಿಗೆ ರೆಡಿನಾ?

Posted By:

ಬೈಕ್ ರೇಸ್ ಜಗತ್ತಿನಲ್ಲಿ ದೇಶದ ಮೊಟೊಸ್ಪೋರ್ಟ್ ಸ್ಪರ್ಧಿಗಳು ಧೂಳೆಬ್ಬಿಸುವ ಸೂಚನೆ ದಟ್ಟವಾಗಿವೆ. ದೇಶದ ಯುವಜನತೆಯನ್ನು ಮೊಟೊಸ್ಪೋರ್ಟ್ ಆಕರ್ಷಿಸುತ್ತಿದೆ. ವಿಶೇಷವೆಂದರೆ ಶೀಘ್ರದಲ್ಲಿ ಆರಂಭವಾಗುವ ಟಿವಿಎಸ್ ಮೊಟೊ-ಅನ್ ಬೌಂಡ್ ಫೀಟ್ "ಇಂಡಿಯನ್ ಫ್ಲೈಯಿಂಗ್ ಮಂಕಿ" ಸಾದರಪಡಿಸುತ್ತಿದ್ದೇವೆ. (ವಿಡಿಯೋ ನೋಡಿ)

ವಿದೇಶಗಳಲ್ಲಿ ಮೊಟೊಸ್ಪೋರ್ಟನ್ನು ಪೂರ್ಣಪ್ರಮಾಣದಲ್ಲಿ ವೃತ್ತಿಯಾಗಿ ತೆಗೆದುಕೊಳ್ಳುತ್ತಾರೆ. ದೇಶದ ಜನರು ಹೆಚ್ಚಾಗಿ ಇದನ್ನು ಫ್ಯಾಷನ್ ಆಗಿ, ಅಥವಾ ಕೇವಲ ಕ್ರೀಡೆಯಾಗಿ ತೆಗೆದುಕೊಳ್ಳುವುದು ಹೆಚ್ಚು. ಸಂಪೂರ್ಣವಾಗಿ ಮೊಟೊಸ್ಪೋರ್ಟಿಗೆ ಬದುಕು ಅರ್ಪಿಸುವರು ವಿರಳ.

 ಸಾಹಸಿ ಬೈಕ್ ಸವಾರಿಯ ಸಂತೋಷ

ಸಾಹಸಿ ಬೈಕ್ ಸವಾರಿಯ ಸಂತೋಷ

ಇವನು ಸಿಎಸ್ ಸಂತೋಷ್. ದೇಶದ ಜನಪ್ರಿಯ ಮೊಟೊಕ್ರಾಸ್ ಚಾಂಪಿಯನ್. ಇವನ ರೈಡ್ ನೋಡ್ಬೆಕಾ? ಮುಂದಿನ ಚಿತ್ರ ನೋಡಿ.

ಟಿವಿಎಸ್ ಜೊತೆಗೆ ಆಫ್ ರೋಡ್ ರೈಡ್

ಟಿವಿಎಸ್ ಜೊತೆಗೆ ಆಫ್ ರೋಡ್ ರೈಡ್

2003ನೇ ಇಸವಿಯಿಂದ ಈತ ಟಿವಿಎಸ್ ಜೊತೆ ವೃತ್ತಿಪರ ಆಫ್ ರೋಡ್ ಸ್ಪರ್ಧಾಳು.

ಸಾಹಸಕ್ಕೆ ಸಂದ ಪ್ರಶಸ್ತಿಗಳು

ಸಾಹಸಕ್ಕೆ ಸಂದ ಪ್ರಶಸ್ತಿಗಳು

ಸಂತೋಷ ಎರಡು ಬಾರಿ ಸೂಪರ್ ಕ್ರಾಸ್ ಚಾಂಪಿಯನ್ ಪಡೆದಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಡರ್ಟ್ ಟ್ರ್ಯಾಕ್ ಚಾಂಪಿಯನ್ ಪಡೆದಿದ್ದಾರೆ.

ವಿದೇಶದಲ್ಲೂ ಈತ ಫೇಮಸ್

ವಿದೇಶದಲ್ಲೂ ಈತ ಫೇಮಸ್

ರಾಷ್ಟ್ರೀಯ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸಿದ್ದಾರೆ. ಫಿಲಿಫೈನ್ಸ್, ಶ್ರೀಲಂಕಾ, ದುಬೈನಲ್ಲೂ ಸಾಹಸಿ ಬೈಕ್ ಸವಾರಿ ಮಾಡಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬೈಕ್ ಸವಾರಿಗೆ ರಸ್ತೆ ಯಾಕೆ?

ಬೈಕ್ ಸವಾರಿಗೆ ರಸ್ತೆ ಯಾಕೆ?

ಇವರಿಗೆ ಬೈಕ್ ಸವಾರಿ ಮಾಡಲು ರಸ್ತೆಗಿಂತ ಆಕಾಶವೇ ಅಚ್ಚುಮೆಚ್ಚು. ಇದು ಸಾಹಸಿ ಕ್ರೀಡೆ.

ಎಕ್ಸ್ ಟ್ರೀಂ ಸ್ಪೋರ್ಟ್ಸ್ ಅಂದ್ರೆ ಜೀವನಶೈಲಿ ಮತ್ತು ವೃತ್ತಿಪರ ಕ್ರೀಡೆ. ಆದರೆ ನಿಮ್ಮ ಮನೆಗೆ ಇದರಿಂದ ದೊಡ್ಡ ಮೊತ್ತದ ಹಣ ಹರಿದುಬರುವುದಿಲ್ಲ. ಸಾಹಸಿ ಕ್ಷಣಗಳನ್ನೇ ನೆಚ್ಚಿಕೊಳ್ಳುವರಿಗೆ ಇದು ಸೂಕ್ತ. ನೆನಪಿರಲಿ ಇದು ಸಾಹಸಿ ಬೈಕ್ ಸವಾರಿ ಕ್ರೀಡೆ. ದಮ್ಮಿದ್ದವರಿಗೆ ಮಾತ್ರ!

ಆಕಾಶಕ್ಕೆ ಮುಖ ಮಾಡಿ ನೆಗೆಯುವ ಬೈಕುಗಳ ಮೊಟೊಸ್ಪೋರ್ಟ್ ಶೀಘ್ರದಲ್ಲಿ ಆರಂಭವಾಗಲಿದೆ. ಕಣ್ತುಂಬಿಕೊಳ್ಳಲು ರೆಡಿಯಾಗಿರಿ. ಅದಕ್ಕೂ ಮುನ್ನ ನಾವು ಪ್ರಸ್ತುತ ಪಡಿಸಿದ ಈ ವಿಡಿಯೋ ನೋಡಿ.

ಚಿತ್ರದಲ್ಲಿರುವುದು: ಟಿಎಸ್ ಸಂತೋಷ್, ದೇಶದ ಹೆಮ್ಮೆಯ ಮೊಟೊಕ್ರಾಸ್ ಚಾಂಪಿಯನ್

English summary
Indian motorsport athletes for sure is creating waves on the international map. However lets not forget, this path for sure has a lot of battles. Xtreme Sports A Daring New Lifestyle.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark