ಆಕರ್ಷಕ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಯಮಹಾ ಆರ್15
ಜಪಾನಿನ ಗುಡ್ ಡಿಸೈನ್ ಅವಾರ್ಡ್(ಜಿ ಮಾರ್ಕ್) ಸಂಘಟನೆಯ ಸಹಸಂಸ್ಥೆಯು ವಿನ್ಯಾಸ ಉತ್ತೇಜನಕ್ಕಾಗಿ ಭಾರತದಲ್ಲಿ ಐ ಮಾರ್ಕ್ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಗಾಗಿ ಒಟ್ಟು 71 ಅರ್ಜಿಗಳು ಬಂದಿದ್ದು, ಅದರಲ್ಲಿ 31ಕ್ಕೆ ಐ-ಮಾರ್ಕ್ ಪ್ರಶಸ್ತಿ ದೊರಕಿದೆ.
ರೇಸಿಂಗ್ ಶೈಲಿಯ ಡೈನಾಮಿಕ್ ವಿನ್ಯಾಸ, ಕಣ್ಮನ ಸೆಳೆಯುವ ಆಕರ್ಷಕ ವಿನ್ಯಾಸ ಇತ್ಯಾದಿ ಕಾರಣಗಳಿಂದ 150 ಸಿಸಿ ಸೆಗ್ಮೆಂಟಿನಲ್ಲಿ ಯಮಹಾ ಆರ್15 ಭಿನ್ನವಾಗಿ ನಿಲ್ಲುತ್ತದೆ. ಈ ಕ್ಲಾಸ್ ಬೈಕುಗಳಲ್ಲಿ ಯಮಹಾ ಆರ್15 ದರವೂ ಗಮನಿಸಬೇಕಾದ ಸಂಗತಿ. ಯಮಹಾ ಆರ್15 ಬೈಕಿನ ಅತ್ಯಧಿಕ ಕಾರ್ಯಕ್ಷಮತೆ, ಸವಾರಿ ಗುಣಮಟ್ಟ, ಸ್ಟಾರ್ಟ್ ಮತ್ತು ಸ್ಟಾಪ್ ಸದೃಢತೆಯು ಆರ್15 ಖ್ಯಾತಿಯನ್ನು ಹೆಚ್ಚಿಸಿವೆ.
"ನಮ್ಮ ವೈಝಡ್ಎಫ್-ಆರ್15 ಬೈಕಿಗೆ ಇಂತಹ ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷವಾಗಿದೆ. ಈ ಬೈಕನ್ನು 2008ರಲ್ಲಿ ಪರಿಚಯಿಸಿದ್ದು, ಕಳೆದ ವರ್ಷ ಪರಿಷ್ಕೃತ ಆವೃತ್ತಿಯನ್ನು ತಂದಿದ್ದೇವೆ. ನೂತನ ಪ್ರಶಸ್ತಿಯು ಇನ್ನಷ್ಟು ಅನ್ವೇಷಣಾತ್ಮಕ ವಿನ್ಯಾಸಗಳಿಗೆ ನಮಗೆ ಪ್ರೋತ್ಸಾಹ ನೀಡಲಿದೆ" ಎಂದು ಯಮಹಾ ಇಂಡಿಯಾ ಸಿಇಒ ಮತ್ತು ಎಂಡಿ ಹಿರೊಯುಕಿ ಸುಜುಕಿ ಹೇಳಿದ್ದಾರೆ.
ಉತ್ಪನ್ನಗಳ ವಿನ್ಯಾಸ ಮೌಲ್ಯಕ್ಕೆ ಉತ್ತೇಜನ ನೀಡಲು ಮತ್ತು ಜಾಗೃತಿ ಮೂಡಿಸಲು ಐಮಾರ್ಕ್ ಅವಾರ್ಡ್ ನೀಡಲಾಗುತ್ತಿದೆ. ಗ್ರಾಹಕರಿಂದ ಅತ್ಯುತ್ತಮ ವಿನ್ಯಾಸದ ಉತ್ಪನ್ನಗಳಿಗೆ ಅಧಿಕ ಬೇಡಿಕೆ ಇರುವುದರಿಂದ ಕಂಪನಿಗಳು ವಿನ್ಯಾಸಕ್ಕೂ ಪ್ರಮುಖ ಒತ್ತು ನೀಡಲು ಪ್ರಚೋದಿಸುವುದು ಈ ಸಂಸ್ಥೆಯ ಉದ್ದೇಶವಂತೆ.


Click it and Unblock the Notifications









