ನೀವಿನ್ನೂ ಯಮಹಾ ರೇ ಸ್ಕೂಟರ್ ಬುಕ್ ಮಾಡ್ಕೊಂಡಿಲ್ವ?

ದೇಶದ ಕಾಲೇಜು ತರುಣ ತರುಣಿಯರು, ನಗರದ ಯುವಕರು ಮತ್ತು ಯುವತಿಯರು, ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರು, ಅಂಕಲ್ ಮತ್ತು ಆಂಟಿಯರು ಸೇರಿದಂತೆ ಸಮಸ್ತ ಸ್ಕೂಟರ್ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ ಯಮಹಾ ಸ್ಕೂಟರೊಂದು ಸೆಪ್ಟೆಂಬರ್ 14ರಂದು ದೇಶದ ರಸ್ತೆಗೆ ಆಗಮಿಸಲಿದೆ.

ವಿಶೇಷವೆಂದರೆ ರಸ್ತೆಗಿಳಿಯುವ ಮುನ್ನವೇ ನೂತನ ಸ್ಕೂಟರ್ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶವನ್ನು ಯಮಹಾ ನೀಡಿದೆ. ಈಗಾಗಲೇ ಯಮಹಾ ಸ್ಕೂಟರಿಗೆ ನಿರೀಕ್ಷೆಗೂ ಮೀರಿ ಗ್ರಾಹಕರು ಬೇಡಿಕೆಯಿಟ್ಟಿದ್ದಾರೆಂದು ಕಂಪನಿಯ ಮೂಲಗಳು ತಿಳಸಿವೆ.

2016ರ ವೇಳೆಗೆ ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ ಶೇಕಡ 10ರಿಂದ 15ರಷ್ಟು ಪಾಲು ತನ್ನದಾಗಿಸಿಕೊಳ್ಳಲು ಯಮಹಾ ಇಂಡಿಯಾ ಯೋಜಿಸಿದೆ. ಈಗಾಗಲೇ ಬೈಕ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಯಮಹಾ ದೇಶದಲ್ಲಿ ಸ್ಕೂಟರ್ ಮೂಲಕ ಜನರ ಹೃದಯ ಗೆಲ್ಲುವುದೋ ಕಾದು ನೋಡಬೇಕಿದೆ.

ನೂತನ ಯಮಹಾ ರೇ ನಗರದ ಯುವ ತರುಣಿಯರ ಮತ್ತು ಕಾಲೇಜು ತರುಣ ತರುಣಿಯರ ಅಚ್ಚುಮೆಚ್ಚಿನ ಸ್ಕೂಟರಾಗಲಿದೆ ಎಂದು ಕಂಪನಿಯು ಬಲವಾಗಿ ನಂಬಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬ್ರಾಂಡ್ ಅಂಬಾಸಡರ್ ಆಗುವ ಮೂಲಕ ರೇ ಖದರ್ ಹೆಚ್ಚಿಸಲು ಕಂಪನಿ ಪ್ರಯತ್ನಿಸಿದೆ.

ಹೊಸ ಸ್ಕೂಟರ್ ಕುರಿತು ಹಲವು ಬಗೆಯ ಪ್ರಚಾರ ತಂತ್ರವನ್ನು ಯಮಹಾ ಈಗಾಗಲೇ ಆರಂಭಿಸಿದೆ. ಯಮಹಾ ರೇ ಸ್ಕೂಟರ್ ಬಹುಮಾನ, ಯಮಹಾ ರೇ ದರ ಅಂದಾಜಿಸಿ ಇತ್ಯಾದಿ ಆಮೀಷಗಳ ಮೂಲಕ ಗ್ರಾಹಕರನ್ನು ಸೆಳೆಯಲು ಕಂಪನಿ ಪ್ರಯತ್ನಿಸುತ್ತಿದೆ.

ವಿಶೇಷವೆಂದರೆ ಯಮಹಾ ರೇ ಸ್ಕೂಟರ್ ದರ ಅಂದಾಜಿಸುವ ಮೂಲಕ ದೀಪಿಕಾ ಪಡುಕೋಣೆ ಭೇಟಿಯಾಗುವ ಅದೃಷ್ಟವನ್ನೂ ಗ್ರಾಹಕರ ಮುಂದಿಟ್ಟಿದೆ. ಇದರ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು.

ದೇಶದಲ್ಲಿ ಸ್ಕೂಟರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಹೀಗಾಗಿ ಯಮಹಾ ಅತ್ಯಂತ ಪ್ರಸಕ್ತ ಕಾಲದಲ್ಲಿಯೇ ಎಂಟ್ರಿ ನೀಡುತ್ತಿದೆ. ಓದುಗರೇ, ನೀವು ಯಮಹಾ ರೇ ಸ್ಕೂಟರ್ ಖರೀದಿಸಲು ಇಚ್ಚಿಸಿದ್ದೀರಾ? ನಿಮ್ಮ ಅಚ್ಚುಮೆಚ್ಚಿನ ಸ್ಕೂಟರ್ ಯಾವುದು? ನಮ್ಮೊಂದಿಗೆ ಹಂಚಿಕೊಳ್ಳಿ.

More from DriveSpark

Article Published On: Tuesday, September 4, 2012, 12:32 [IST]
English summary
Yamaha India's Scooter adventure, is all setup with its brand new scooter Ray. The much awaited scooter from Yamaha, will be launched on September 14, 2012. Bookings for Yamaha Ray scooter has already begun. The company is overwhelmed with the response and is expecting 2 months pre-booking by the time of launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+