ಮಾರುಕಟ್ಟೆಗೆ ಹೆಜ್ಜೆಯನ್ನಿಟ್ಟ 'ಬ್ಲ್ಯಾಕ್ ಇನ್ ಬ್ಯೂಟಿ' ಯಮಹಾ ರೇ

Written By:

ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ತನ್ನ ಜನಪ್ರಿಯ ರೇ ಸ್ಕೂಟರ್‌ನ ವಿಶೇಷ ಸೆಕ್ಸಿ ಲುಕ್ ಹೊಂದಿರುವ ಅತ್ಯಮೂಲ್ಯ ವಿಶೇಷ ಆವೃತ್ತಿಯೊಂದನ್ನು ಲಾಂಚ್ ಮಾಡಿದೆ.

'ಬ್ಲ್ಯಾಕ್ ಇನ್ ಬ್ಯೂಟಿ' ಎಂಬ ಹೆಸರಿನಿಂದ ಅರಿಯಲ್ಪಡುವ ನೂತನ ರೇ ಪ್ರೆಷಿಯಸ್ (precious) ಸ್ಪೆಷಲ್ ಎಡಿ‌ಷನ್‍ನಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದ್ದು, ಗ್ರಾಫಿಕ್ಸ್ ಹಾಗೂ ಆಕರ್ಷಕ ಬಣ್ಣ ಬಳಿಯಲಾಗಿದೆ.

ನೂತನ ಪ್ರೆಷಿಯಸ್ ಆವೃತ್ತಿಯಲ್ಲಿ ಕಡುಕಪ್ಪು ಬಣ್ಣಕ್ಕೆ ಗುಲಾಬಿ ಲೇನ್ ನೀಡಲಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 48,605 ರು.ಗಳಾಗಿವೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಸೀಮಿತ ಆವೃತ್ತಿಯಲ್ಲಿ ಮಾತ್ರ ಹೊರಬಂದಿರುವುದರಿಂದ ಸ್ಟಾಕ್ ಮುಗಿಯ ವರೆಗೆ ಮಾತ್ರ ಯಮಹಾ ರೇ ವಿಶೇಷ ಆವೃತ್ತಿಯು ಲಭ್ಯವಿರಲಿದೆ.

ಎಂಜಿನ್

ಎಂಜಿನ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ. ಇದರ 113ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಗರಿಷ್ಠ 7 ಬಿಎಚ್‌ಪಿ ಪವರ್ (7500 ಆರ್‌ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮಹಿಳೆಯರಿಗಾಗಿ

ಮಹಿಳೆಯರಿಗಾಗಿ

ಯಮಹಾ ರೇ ಮಹಿಳೆಯರ ಪಾಲಿಗೆ ಉತ್ತಮ ಆಯ್ಕೆಯಾಗಿರಲಿದೆ. ಇದು ನಗರ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 45 ಕೀ.ಮೀ. ಹಾಗೂ ಹೆದ್ದಾರಿಯಲ್ಲಿ ಪ್ರತಿ ಲೀಟರ್‌ಗೆ 55 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಪ್ರಮುಖವಾಗಿಯೂ ಮಹಿಳಾ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಈ ವಿಶೇಷ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ಕಾಲೇಜ್ ಹಾಗೂ ಕಚೇರಿ ಕಲಾಪಗಳಿಗೆ ತೆರಳುವ ಹೆಣ್ಮಕ್ಕಳಿಗೆ ಉತ್ತಮ ರೈಡಿಂಗ್ ಅನುಭವ ನೀಡಲಿದೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ರೇ ಪ್ರೆಷಿಯಸ್ ವಿಶೇಷ ಆವೃತ್ತಿಯು ಮಾರುಕಟ್ಟೆಯಲ್ಲಿ ಯಮಹಾ ಸ್ಕೂಟರ್‌ಗಳಿಗೆ ದೊರಕುತ್ತಿರುವ ಪ್ರತಿಕ್ರಿಯೆಯ ಸಂಕೇತವಾಗಿದೆ. ಗ್ರಾಹಕರ ವೈಯಕ್ತಿಕ ಗುಣಗಳಿಗೆ ಹೊಂದಿಕೊಂಡು ಸ್ಟೈಲಿಷ್ ವಿನ್ಯಾಸ ನೀಡುವುದು ನಮ್ಮ ಗುರಿಯಾಗಿದೆ ಎಂದು ಯಮಹಾ ತಿಳಿಸಿದೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಈ ಮುಖಾಂತರ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಉತ್ತಮ ಮಾರಾಟವನ್ನು ಕಾಯ್ದುಕೊಳ್ಳುವ ನಿರೀಕ್ಷೆಯನ್ನು ಯಮಹಾ ಹೊಂದಿದೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಯಮಹಾ ರೇ ಮುಖಾಂತರ 2012 ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಸ್ಕೂಟರ್ ರಂಗ ಪ್ರವೇಶ ಮಾಡಿದ್ದ ಯಮಹಾ ಮೋಟಾರ್, ಪ್ರಮುಖವಾಗಿಯೂ ಮಹಿಳಾ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಇದರಂತೆ ಹೆಚ್ಚೆಚ್ಚು ಮಹಿಳಾ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಸ್ಟಮರ್ ಕೇರ್ ಗುಣಮಟ್ಟ ಹೆಚ್ಚಿಸಿತ್ತಲ್ಲದೆ ಹೆಚ್ಚಿನ ಸಂಖ್ಯೆಯ ಮಹಿಳಾ ಸಿಬ್ಬಂದಿಗಳನ್ನು ನೇಮಕಗೊಳಿಸಿತ್ತು.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಅಷ್ಟೇ ಅಲ್ಲದೆ ಮಹಿಳೆಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಮುಖಾಂತರ ಹೆಣ್ಮಕ್ಕಳಿಗೆ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಲು ನೆರವಾಗಿತ್ತು.

ಯಮಹಾ ರೇ ಪ್ರೆಷಿಯಸ್ ವಿಶೇಷ ಆವೃತ್ತಿ ಲಾಂಚ್

ಅಂದ ಹಾಗೆ ಸಾಮಾನ್ಯ ಯಮಹಾ ರೇ ಆವೃತ್ತಿಗಳ ದರ 48,605 ರು.ಗಳಾಗಿವೆ. ಅಂದರೆ ನೂತನ ವಿಶೇಷ ಆವೃತ್ತಿಯು 1000 ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗೆಯೇ ಸ್ಫೋರ್ಟಿ ಡೆಕಾಲ್ಸ್ ಹೊಂದಿರುವ ಯಮಹಾ ರೇ ಝಡ್ ದೆಹಲಿ ಎಕ್ಸ್ ಶೋ ರೂಂ ದರ 49,105 ರು.ಗಳಾಗಿವೆ.

English summary
Yamaha has launches precious edition of it's popular scooter Ray. Yamaha Ray Precious Edition priced at Rs 48605. Yamaha Ray Precious Edition comes wearing special paint and graphics.
Story first published: Thursday, September 19, 2013, 9:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark