ಪ್ರಸಕ್ತ ಸಾಲಿನಲ್ಲೇ ಯಮಹಾ ರೇ 125 ಬಿಡುಗಡೆ?

Written By:

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ಭಾರತದಲ್ಲೂ ಉತ್ತಮ ಹೆಸರು ಕಾಪಾಡಿಕೊಂಡು ಬಂದಿದೆ. ಪ್ರಸ್ತುತ ಯಮಹಾ ಸಂಸ್ಥೆಯು ಯಮಹಾ ರೇ 125 ಸಿಸಿ ವೆರಿಯಂಟ್‌ನ್ನು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಗೊಳಿಸಲಿದೆ ಎಂಬುದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಯಮಹಾ ರೇ 125 ಸಿಸಿ ಸ್ಕೂಟರ್ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಲಿದೆ. ನಿಮ್ಮ ಮಾಹಿತಿಗಾಗಿ ಯಮಹ ರೇ ಝಡ್, ಅತ್ಯಂತ ಹೆಚ್ಚು ಕ್ರೀಡಾತ್ಮಕ ಶೈಲಿ ಹೊಂದಿರುವ ಬೈಕ್ ಆಗಿದೆ. ಇದು ರೇ 125 ಆವೃತ್ತಿಯಲ್ಲೂ ಮುಂದುವರಿಯುವ ಸಾಧ್ಯತೆಯಿದೆ.

To Follow DriveSpark On Facebook, Click The Like Button
Yamaha Ray 125

ಹಾಗಿದ್ದರೂ ನೀವು ನಿರೀಕ್ಷಿಸುತ್ತಿರುವಂತೆಯೇ ಇದು ಗರಿಷ್ಠ ನಿರ್ವಹಣೆ ಸ್ಕೂಟರ್ ಆಗಿರಲ್ಲ. ಬದಲಾಗಿ ಹೆಚ್ಚಿನ ಇಂಧನ ಕ್ಷಮತೆಯನ್ನು ಕಂಪನಿ ಗುರಿಯಾಗಿರಿಸಿಕೊಂಡಿದೆ.

ವರದಿಗಳ ಪ್ರಕಾರ ರೇ 125 ಆವೃತ್ತಿಯಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ. ಒಟ್ಟಿನಲ್ಲಿ ಯಮಹಾ ಪೈಕಿ 125 ಸಿಸಿ ಆವೃತ್ತಿ ಹೆಚ್ಚು ಗಮನ ಕೇಂದ್ರಿತವಾಗಿರಲಿದೆ.

English summary
Yamaha Ray, the Japanese two wheeler maker's popular scooter offering in India would be available in a 125cc variant this year, according to a report.
Story first published: Friday, February 14, 2014, 15:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark